ಎಲ್ಲರ ವಿಶ್ವಾಸ ಗಳಿಸಿ ಜಯಗಳಿಸಲಿದ್ದೇನೆ-ಇಕ್ಬಾಲ್ ಅಹ್ಮದ್

ತುಮಕೂರು : ಚುನಾವಣೆಗೆ ಕಾಂಗ್ರೆಸ್ ಸಕಲ ರೀತಿಯಲ್ಲಿ ಸಜ್ಜಾಗಿದೆ ವಾರ್ಡ್‍ವಾರು ಸಭೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ನೀಡಿರುವ ಮತ್ತು ನೀಡುತ್ತಿರುವ ಸಲಹೆಗಳನ್ನು ಪಡೆದು ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿ, ಕೆಲವೊಂದು ಗೊಂದಲಗಳು ಇದ್ದ ಕಾರಣ ನಾನು ತಡವಾಗಿ ಪ್ರಚಾರ ಸಭೆ ಮಾಡಲು ಕಾರಣವಯಿತು. ಚುನಾವಣೆ ಶಾಖೆಯಿಂದ ಕ್ರಮ ಸಂಖ್ಯೆಗಳು ಘೋಷಣೆ ಆಗದೆ ಇರುವ ಕಾರಣ ಈ ರೀತಿಯಾದ ತಡವಾಗಿದೆ ಎಂದರು.

ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ನನ್ನನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ನನ್ನನ್ನು ಸಾಮಾನ್ಯ ಕಾರ್ಯಕರ್ತರೊಳಗೊಂಡು ಎಲ್ಲ ನಾಯಕರ ವಿಶ್ವಾಸ ಪಡೆದು ಚುನಾವಣೆಯ ಕಾರ್ಯಗಳನ್ನು ರೂಪಿಸಿ, ಜಯಗಳಿಸುವುದಾಗಿ ತಿಳಿಸಿದರು.

ಶೀಘ್ರದಲ್ಲಿಯೇ ಎಲ್ಲ ಬೂತ್ ಮಟ್ಟದ ಸಮಿತಿಗಳನ್ನು ಸಭೆ ಕರೆದು ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದ ಇಕ್ಬಾಲ್ ಅಹ್ಮದ್ ನಮ್ಮ ಪಕ್ಷದ ಹಿರಿಯರು ಹಾಗೂ ನಾಯಕರ ಮಾರ್ಗದರ್ಶನ ಬೆಂಬಲ ಪಡೆದು ಈ ಭಾರಿ ಚುನಾವಣೆಯಲ್ಲಿ ನಾನು ಗೆಲ್ಲಲು ಸಹಕಾರ ಆಗುತ್ತದೆ ಎಂದರು.

ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಸರ್ಕಾರ ಆಗಿದೆ ಅದನ್ನು ಕಿತ್ತು ಹಾಕಲು ಕಾಂಗ್ರೆಸ್ ಪಕ್ಷದ ಕೈ ಹಿಡಿಯ ಬೇಕು ಎಂಬುದು ಜನರ ಅಭಿಪ್ರಾಯವಾಗಿದೆ ಹಾಗಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು. ನಮ್ಮ ಕಾಂಗ್ರೆಸ್ ಸರ್ಕಾರದ ಕಾಲದಲ್ಲೆ ಅನ್ನ ಭಾಗ್ಯ, ಶಾಲಾ ಮಕ್ಕಳಿಗೆ ಶೂ ಭಾಗ್ಯ ಸೇರಿ ಹಲವಾರು ಮಹತ್ತರ ಯೋಜನೆಗಳನ್ನು ನೀಡಿದೆ ಅದನ್ನು ನಾವು ಜನರ ಮುಂದೆ ತಂದು ಮತ ಯಾಚನೆ ಮಾಡುತ್ತೇನೆ ಎಂದರು. ನಮ್ಮ ಪಕ್ಷ ಸರ್ಕಾರ ಗ್ಯಾರಂಟಿ ಸರ್ಕಾರ ಆಗಿದ್ದು ನಾವು ಈಗ ನೀಡಿರುವ ಗ್ಯಾರಂಟಿ ಕಾರ್ಡ್ ಉಪಯೋಗಕ್ಕೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ನರಸೀಯಪ್ಪನವರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಎಲ್ಲರನ್ನೂ ವಿಶ್ವಾಸಕ್ಕೆ ತೆದುಕೊಂಡು ಜಯಗಳಿಸುವ ಜವಾಬ್ದಾರಿ ಇದ್ದು, ಹಿರಿಯ ಕಾಂಗ್ರೆಸ್ ನಾಯಕರನ್ನು ತಮ್ಮ ಜೊತೆ ಇಟ್ಟುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಅನಿಲ್, ಜ್ವಾಲಾಮಾಲಾ ರಾಜಣ್ಣ, ಕೆಂಪರಾಜು, ರೇವಣ್ಣಸಿದ್ದಯ್ಯ ಹೆಚ್‍ಎಂಟಿ, ಸಿದ್ದಲಿಂಗೇಗೌಡ, ಗುರುಪ್ರಸಾದ್, ಸುಜಾತಾ, ಮಮತಾ, ರತ್ನಮ್ಮ, ಮತ್ತಿತರರಿದ್ದರು

Leave a Reply

Your email address will not be published. Required fields are marked *