ಜಿ.ಕೆ.ಶ್ರೀನಿವಾಸ್ ಬಿಜೆಪಿಗೆ ಬೆಂಬಲಿಸಲು ಉಮೇದುವಾರಿಕೆ ವಾಪಸ್ಸು

ತುಮಕೂರು – ಪ್ರಾಮಾಣಿಕ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದೇನೆ ಅದರಂತೆ ಮೋದಿ ನಾಯಕತ್ವ ಹಾಗೂ ಬಿಜೆಪಿಯನ್ನು ತುಮಕೂರು ನಗರದಲ್ಲಿ ಗೆಲ್ಲಿಸುವ ಸದುದ್ದೇಶದಿಂದ ನಾನು ಉಮೇದುವಾರಿಕೆ ವಾಪಸ್ಸು ಪಡೆಯುತ್ತಿರುವುದಾಗಿ ಎಂದು ಜಿ.ಕೆ ಶ್ರೀನಿವಾಸ್ ಹೇಳಿದರು.

ಅವರಿಂದು ಜಿಲ್ಲಾ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದ ನಾನು, ಬಿಜೆಪಿಗೆ ಬೆಂಬಲ ಸೂಚಿಸಿ ನಾಮಪತ್ರ ವಾಪಸ್ಸು ಪಡೆಯುತ್ತಿರುವುದಾಗಿ ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ ಜಿ.ಕೆ.ಶ್ರೀನಿವಾಸ್ ಅವರು ಪಕ್ಷ ನಿಷ್ಠೆಗೆ ಬದ್ಧರಾಗಿ, ನಮ್ಮ ಅಭ್ಯರ್ಥಿಯಾದ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಬೆಂಬಲ ಸೂಚಿಸಿ ಉಮೇದುವಾರಿಕೆಯನ್ನು ವಾಪಸ್ಸು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಹರಿಯಾಣ ಸಂಸದರು ಸಂಜಯ್ ಬಾಟಿಯ ಅವರು ಭಾರತವನ್ನು ಒಟ್ಟುಗುಡಿಸುವ ಹಾಗೂ ಪಾಕಿಸ್ತಾನದಂತಹ ಕೆಲವು ಶತೃ ರಾಷ್ಟ್ರಗಳು ಭಾರತವನ್ನು ಹೊಡೆಯುವಂತಹ ಕೆಲಸ ಮಾಡುತ್ತಿದೆ ಅದಕ್ಕೆ ನಾವು ವಿಶ್ವ ಹಿಂದೂ ಪರಿಷದ್, ಆರ್ ಎಸ್ ಎಸ್ ಬಿಜೆಪಿ ಭಾರತವನ್ನು ಸಮೃದ್ಧ ರಾಷ್ಟ್ರವನ್ನು ಮಾಡುವಂತಹ ಕಾರ್ಯಕ್ಕೆ ಮುಂದಾಗಿದ್ದೇವೆ ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಶಾಸಕ ಜ್ಯೋತಿ ಗಣೇಶ್, ಚಿದಾನಂದ ಗೌಡ, ಸದಾಶಿವಯ್ಯ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *