ಕೆಳ ವರ್ಗವನ್ನು ಕಾನೂನಿನ ಭಯದಿಂದ ಸಮಾನವಾಗಿ ಕಾಣುವ ಮೇಲ್ವರ್ಗ-ಶ್ರೀ ನಿಜಗುಣಾನಂದ ಸ್ವಾಮೀಜಿ

ತುಮಕೂರು:ಮೇಲ್ವರ್ಗ ಎಂದು ಕರೆಯಿಸಿಕೊಳ್ಳುವ ಜನರು ತಳ ಸಮುದಾಯಗಳ ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಮಾನವಾಗಿ ಕಾಣುತ್ತಿದ್ದರೆ,ಅದು ಕಾನೂನಿನ ಭಯದಿಂದಲೇ ಹೊರತು ಹೃದಯ ಬದಲಾವಣೆಯಿಂದಲ್ಲ ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ನಗರದ ಕೇಂದ್ರ ಗ್ರಂಥಾಲಯದ ಅಡಿಟೋರಿಯಂನಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ,ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಹಾಗೂ ಡಾ.ವೈ.ಕೆ.ಬಾಲಕೃಷ್ಣಪ್ಪ ಹಿತೈಷಿಗಳ ಸಂಘದ ವತಿಯಿಂದ ಆಯೋಜಿಸಿದ್ದ ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಅಸ್ಪøಷ್ಯತೆ ಎಂಬುದು ಬೇರೆ ಬೇರೆ ರೀತಿಯಲ್ಲಿ ಇಂದಿಗೂ ಜನರನ್ನು ಕಾಡುತ್ತಿದೆ ಎಂದರು.

ಸರಕಾರಿ ಅಧಿಕಾರಿಯಾಗಿ, ಅದನ್ನು ಮೀರಿದಂತೆ ಜನರಲ್ಲಿ ಮಾನವೀಯ ಪ್ರೇಮ ಬಿತ್ತಿದ, ಮನುಷ್ಯತ್ವದಿಂದ ನಡೆದುಕೊಂಡ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರನ್ನು ಸಾರ್ವಜನಿಕರು ಅಭಿನಂದಿಸುತ್ತಿರುವುದು ಸಂತೋಷದ ವಿಚಾರ.ಕಾಣುವ ಮನುಷ್ಯರನ್ನು ದ್ವೇಷಿಸುವ,ದೂಷಿಸುವ ಜನ,ಕಾಣದ ದೇವರನ್ನು ಪ್ರೀತಿಸಲು,ಪೂಜಿಸಲು ಕ್ಯೂನಲ್ಲಿ ನಿಲ್ಲುತ್ತಾರೆ.ದಲಿತರು ಎಂದು ಸಮಾಜ ದಲ್ಲಿ ಇತರೆ ವರ್ಗಗಳಿಗೆ ಸರಿಸಮನಾಗಿ ಗೌರವಾಧರಗಳನ್ನು ಪಡೆಯುತ್ತಿದ್ದರೆ,ಅದು ಯಾವುದೇ ದೇವರು,ಧರ್ಮ, ಸ್ವಾಮೀಜಿಗಳು,ಪೂಜೆ ಪುನಸ್ಕಾರಗಳಿಂದಲ್ಲ,ತಾನು ಗಳಿಸಿದ ವಿದ್ಯೆ ಹಾಗೂ ತಾನು ನಂಬಿರುವ ತೋಳ್ಬಲ ದಿಂದ ಮಾತ್ರ. ದೇವರು ಏನನ್ನೂ ನಿರ್ಮಾಣ ಮಾಡಿಲ್ಲ.ಎಲ್ಲವೂ ಮನುಷ್ಯನಿಂದ ನಿರ್ಮಾಣವಾದಂತವು.ದಲಿತ ವಿದ್ಯಾವಂತರು ಈ ಸತ್ಯ ಅರಿತು, ಕೆಲಸ ಮಾಡಿದಾಗ ಸಮದಾಯದ ಅಭಿವೃದ್ದಿ ಸಾಧ್ಯ ಎಂದು ಶ್ರೀನಿಜಗುಣಾನಂದ ಮಹಾಸ್ವಾಮೀಜಿ ನುಡಿದರು.

ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರ ಕುರಿತ “ಕುಸುರಿ” ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ,ರಾಜ್ಯದಲ್ಲಿ ಬಡವಾಗಿರುವ ಯಾವುದಾದರೂ ಇಲಾಖೆ ಇದ್ದರೆ ಅದು ರೇಷ್ಮೆ ಇಲಾಖೆ,ಅಂತಹ ಇಲಾಖೆಯಲ್ಲಿಯೇ ಅತ್ಯಂತ ಕ್ರಿಯಾಶೀಲವಾಗಿ, ಸರಕಾರ ನೀಡಿದ ಗುರಿಗಳನ್ನು ಅಕ್ಷರಷಃ ಮುಟ್ಟಿ,ಸಾವಿರಾರು ರೈತರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ, ಓರ್ವ ಅಧಿಕಾರಿ ತನ್ನ ಅಧಿಕಾರದ ಆಚೆಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಹೇಗೆ ಜನಮಾನಸದಲ್ಲಿ ಉಳಿಯಬಲ್ಲರು ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಸಮಾಜ ಇವರ ಸೇವೆಯನ್ನು ಗುರುತಿಸಿ, ಅಭಿನಂದಿಸುವ ಮೂಲಕ ಅವರು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಡಾ.ವೈ.ಕೆ.ಬಾಲಕೃಷ್ಣಪ್ಪ ಕುರಿತು ಸಾಕ್ಷಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಇಓ ಜಿ.ಪ್ರಭು,ಇಂದಿನ ಅಭಿನಂದನಾ ಸಮಾರಂಭ ಇಡೀ ಸರಕಾರಿ ವಲಯಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದೆ.ಅಲ್ಲದೆ ಮಾದರಿಯಾಗಿದೆ.ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರಕಾರದ ಎಲ್ಲಾ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡುವಲ್ಲಿ ವೈ.ಕೆ.ಬಾಲಕೃಷ್ಣಪ್ಪ ಮುಂಚೂಣಿಯಲ್ಲಿದ್ದಾರೆ.ಕಳೆದ ವರ್ಷ ಎನ್.ಆರ್.ಇ.ಜಿ.ಎಯಲ್ಲಿ ತುಮಕೂರು ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಇದರಲ್ಲಿ ರೇಷ್ಮೆ ಇಲಾಖೆಯ ಪಾಲು ದೊಡ್ಡದು. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂಬುದನ್ನು ಇಂದಿನ ಸಮಾರಂಭ ಸಾಕ್ಷಿಕರಿಸಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ,ರೇಷ್ಮೆ ಇಲಾಖೆ ನನ್ನ ಕುಟುಂಬಕ್ಕೆ ಎಲ್ಲವನ್ನು ನೀಡಿದೆ.ಮುಂದೆಯು ಅವಶ್ಯವಿದ್ದರಿಗೆ ನನ್ನ ಕೈಲಾದ ಸಲಹೆ, ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು.

ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾದ ಡಿ.ಶಿವಶಂಕರ್ ಮಾತನಾಡಿ,ಒಂದು ಜಾತಿ,ಧರ್ಮ,ಭಾಷೆಯ ಭಾರತ ಇದಲ್ಲ.ಇದು ಬಹುಜನರ ಭಾರತ.ಇದನ್ನು ಸಹಕಾರಗೊಳಿಸಲು ಸರಕಾರಿ ಅಧಿಕಾರಿಯಾಗಿ ಯೂ ಕೆಲಸ ಮಾಡಿದ ಡಾ.ವೈ.ಕೆ.ಬಾಲಕೃಷ್ಣಪ್ಪ ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ,ಸರಕಾರಿ ಅಧಿಕಾರಿಗಳು ಒಂದಿಲೊಂದು ಹಗರಣಗಳಿಗೆ ಸಿಲುಕಿ ನಿವೃತ್ತಿ ಜೀವನವನ್ನು ಸರಿಯಾಗಿ ಅನುಭವಿಸಲಾರದೆ ಜೈಲಿನ ಭಯದಲ್ಲಿರುವ ಈ ಕಾಲಘಟ್ಟದಲ್ಲಿ ಡಾ.ವೈ.ಕೆ.ಬಾಲಕೃಷ್ಣಪ್ಪ ಅವಕಾಶಗಳಿದ್ದಾಗ್ಯೂ ಪ್ರಾಮಾಣಿಕರಾಗಿ ಉಳಿದುಕೊಂಡಿದ್ದಾರೆ. ಸರಕಾರಿ ಅಧಿಕಾರಿಗಳ ವಿರುದ್ದ ಪುಟಗಟ್ಟಲೇ ದೂರು ಹೇಳುವ ರೈತಾಪಿವರ್ಗವೇ ವೈ.ಕೆ.ಬಿ ಅವರನ್ನು ಅಭಿನಂದಿಸು ತ್ತಿರುವುದು ಅವರ ಮಾನವೀಯ ಗುಣಗಳಿಗೆ ಹಿಡಿದ ಕನ್ನಡಿಯಾಗಿದೆ.ತಳ ಸಮುದಾಯದಲ್ಲಿ ಹುಟ್ಟಿ ವರ್ಗ ಸಂಕೀರ್ಣದ ನೋವು ಅನುಭವಿಸುತ್ತಲೇ ಅದನ್ನು ಮೆಟ್ಟಿ ನಿಂತವರು.ಸರಕಾರದ ಕೆಲಸದ ಜೊತೆ ಜೊತೆಯಲ್ಲಿ ಸಮಾಜದ ಕೆಲಸವನ್ನು ಮಾಡಿದ ಸೂಕ್ಷ್ಮ ಸಂವೇದನೆಯ ಅಧಿಕಾರಿ.ಇಂತಹವರ ಸಂತತಿ ಹೆಚ್ಚಾಗಬೇಕೆಂದರು.

ಧರ್ಮೋ ರಕ್ಷಿತ ರಕ್ಷಿತಹಃ ಎಂಬ ಘೋಷ ವ್ಯಾಕ ನಿಜಕ್ಕೂ ಸುಳ್ಳು.ದಲಿತರು ಇಂದಿಗೂ ಮೇಲ್ವರ್ಗದವರು ಹೇಳಿದ ಎಲ್ಲ ಕೆಲಸವನ್ನು ವಿರೋಧಿಸದೆ ಮಾಡಿಕೊಂಡು ಬರುತ್ತಿದ್ದೇವೆ.ಆದರೆ ಯಾವ ದೇವರು,ಧರ್ಮವೂ ದಲಿತರನ್ನು ಸಮಾನವಾಗಿ ಕಾಣಿ ಎಂದು ಹೇಳಿದನ್ನು ನೋಡಿಲ್ಲ.ದೇವಾಲಯ ಒಳಗೆ ಬರದಂತೆ ತಡದಾಗಲು ಮಾತನಾಡಿಲ್ಲ. ನಿಜ ಹೇಳಿದರೆ ನಿನ್ನನು ಕೊಲ್ಲಬಾರದೇಕೆ ಎಂದು ಪತ್ರ ಬರೆಯುವ ಜನರಿದ್ದಾರೆ.ದಲಿತರಿಗೆ ಯಾವ ಧರ್ಮದ ರಕ್ಷಣೆ ಇದೆ ಡಾ.ಎಲ್.ಹನುಮಂತಯ್ಯ ಪ್ರಶ್ನಿಸಿದರು.

ಅಭಿನಂದನಾ ಗ್ರಂಥ ಕುಸುರಿ ಕುರಿತು ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಕೆ.ದೊರೆರಾಜು,ಡಾ.ಓ.ನಾಗರಾಜು, ತುಮಕೂರು ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಗೌರವಾಧ್ಯಕ್ಷ್ಷ ಎಸ್.ವಿ.ಸ್ವಾಮಿ,ಜಿಲ್ಲಾಧ್ಯಕ್ಷ ಶಿವಾನಂದಯ್ಯ,ರೇಷ್ಮೆ ಮಂಡಳಿ ನಿವೃತ್ತ ವಿಜ್ಞಾನಿ ಡಾ.ಹೆಚ್.ಕೆ.ಬಸವರಾಜ್,ಎಸ್.ನಾಗಣ್ಣ,ರೈತಮುಖಂಡರಾದ ಅನುಸೂಯಮ್ಮ,ಚೇತನಾ ವೈ.ಕೆ.ಬಾಲಕೃಷ್ಣಪ್ಪ,ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು,ಹಿರಿಯ ದಲಿತಮುಖಂಡ ನರಸೀಯಪ್ಪ,ಚರಕ ಅಸ್ಪತ್ರೆಯ ಡಾ.ಬಸವರಾಜು, ಪ್ರೊ.ಡಾಮಿನಿಕ್ ಸೇರಿದಂತೆ ರೇಷ್ಮೆ ಬೆಳೆಗಾರರು, ದಲಿತಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *