ಇನ್ನಿಲ್ಲವಾದ  ಬೌದ್ಧಿಕ ಆಲದ ಮರದಂತಿದ್ದ ಜಿ.ಎಂ.ಶ್ರೀನಿವಾಸಯ್ಯ

ತುಮಕೂರು : ತೂಮಕೂರಿನ ಮೇರು ಚಿಂತಕರು ಮತ್ತು ಸೈದ್ಧಾಂತಿಕವಾಗಿ ಬದುಕಿನುದ್ದಕ್ಕೂ ತಮ್ಮದೇಯಾದ ತತ್ವ ಸಿದ್ಧಾಂತಗಳ ನ್ನು ಇಟ್ಟುಕೊಂಡಿದ್ದ ನಿವೃತ್ತ ಪ್ರಾಂಶುಪಾಲರು ಹಾಗೂ ಗುರುಗಳಾದ ಪ್ರೊ. ಜಿ.ಎಂ.ಶ್ರಿನಿವಾಸಯ್ಯ(91 ವರ್ಷ)  ಇಂದು(ಸೆಪ್ಟೆಂಬರ್ 2ರಂದು) ರಾತ್ರಿ 8.30 ರಲ್ಲಿ ನಿಧನ ಹೊಂದಿದರು.

ಬಾಲ್ಯದಿಂದಲೇ ಸಮಾಜದ ಅಸಮಾನತೆಯನ್ನು ಕಂಡಿದ್ದ ಜಿ.ಎಂ. ಶ್ರೀನಿವಾಸಯ್ಯನವರು, ತಮ್ಮ ಬದುಕಿನದ್ದಕ್ಕೂ ಸಮಾಜದಲ್ಲಿನ ಅಸಮಾನತೆ, ಶೋಷಣೆ ವಿರುದ್ಧ ಧ್ವನಿ ಎತ್ತಿದವರು.
ಮೂಲತಃ ತುಮಕೂರು ಜಿಲ್ಲೆ ಗುಬ್ಬಿಯವರಾದ ಜಿ.ಎಂ. ಶ್ರೀನಿವಾಸಯ್ಯನವರು ತುಂಬಾ ಅವಮಾನ ಮತ್ತು ಸಂಕಟಗಳನ್ನು ಅನುಭವಿಸಿ ಶಿಕ್ಷಣವನ್ನು ಪಡೆದಂತವರು.

ಈ ಹಿನ್ನೆಲೆಯಲ್ಲಿ ಅವರು ಅಧ್ಯಾಪಕರಾಗಿದ್ದಾಗ, ಪ್ರಾಂಶುಪಾಲರಾಗಿದ್ದಾಗ ಹೆಚ್ಚು ಸಮಾಜದ ಶೋಷಣೆಯನ್ನು ಹೋಗಲಾಡಿಸಲು ತಮ್ಮ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ನ ಅಸಮಾನತೆಯ ನ್ನು ಹೋಗಲಾಡಿಸಲು ಶಿಕ್ಷಣ ಪಡೆಯಲು ಒತ್ತು ನೀಡಿದ್ದರು. ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿ ಭಾಗವಹಿಸುವುದರ ಮೂಲಕ ಶೋಷಿತ ಸಮಾಜಗಳಿಗೆ ಸಮಾನತೆ, ಶಿಕ್ಷಣ ದೊರೆಯಬೇಕೆಂದು ಗಟ್ಟಿ ದನಿಯಲ್ಲಿ ಮಾತನಾಡಿದವರು.

ಜಿ.ಎಂ. ಶ್ರೀನಿವಾಸಯ್ಯನವರು ನಿವೃತ್ತಿಯ ನಂತರ ತುಮಕೂರಿನಲ್ಲಿ ನಡೆಯುತ್ತಿದ್ದ ಪ್ರಗತಿಪರ ಚಳುವಳಿಗಳು ಮತ್ತು ಹೋರಾಟಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳು ಮತ್ತು ಶೋಷಣೆಯನ್ನು ತೀವ್ರವಾಗಿ ಖಂಡಿಸುತ್ತಾ ಬಂದವರು.

ತಮ್ಮ ಅಧ್ಯಾಪಕ ವೃತ್ತಿ ಮತ್ತು ಪ್ರಾಂಶುಪಾಲರಾಗಿದ್ದ ಕಾಲದಲ್ಲಿ ಅಪಾರ ಶಿಷ್ಯ ವೃಂದವನ್ನು ಬೌದ್ಧಿಕವಾಗಿ ಮತ್ತು ಸೈದ್ಧಾಂತಿಕವಾಗಿ ಬೆಳೆಸಿದವರು.


ಸಮಾಜದಲ್ಲಿನ ಅಸಮಾಮತೆ ತೊಲಗಬೇಕೆಂಬ ಒತ್ತಾಸೆಯನ್ನು ಹೊಂದಿದ್ದವರು, ತಾವು ಬದುಕಿರುವ ಕಾಲದಲ್ಲಿ ಒಳ್ಳೆಯ ಕಾಲವನ್ನು ನೋಡಬೇಕೆಂದು ಬಯಸಿದಂತಹ ಪ್ರಕರ ಚಿಂತಕರಾಗಿದ್ದರು.

ತುಮಕೂರಿರಲಿ, ರಾಜ್ಯ ಇರಲಿ, ದೇಶ ಇರಲಿ ಎಲ್ಲೇ ಇರಲಿ ಶೋಷಿತ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆದಾಗ ತಮ್ಮದೇ ಆದ ಮಾತುಗಳಲ್ಲಿ ಕಟುವಾಗಿ ಖಂಡಿಸುತ್ತಿದ್ದರು.
ಸಾವಿರಾರು ಜನಕ್ಕೆ ಬೌದ್ಧಿಕ ಆಲದ ಮರದಂತಿದ್ದ ಜಿ.ಎಂ. ಶ್ರೀನಿವಾಸಯ್ಯನವರು ನಿಧನ ಹೊಂದಿರುವುದು ತುಂಬಾ ದುಃಖಕರ ಮತ್ತು ಅರಗಿಸಿಕೊಳ್ಳಲಾಗದಂತಹ ನಷ್ಟವಾಗಿದೆ.
ಜೀವನದ ಬಗ್ಗೆ ತುಂಬಾ ಚೈತನ್ಯ ಮುಖಿಯಾಗಿದ್ದ ಶ್ರೀನಿವಾಸಯ್ಯನವರು, ತಮ್ಮ ಮಗ, ಸೊಸೆ ಅಪಘಾತದಲ್ಲಿ ಮರಣ ಹೊಂದಿದ ನಂತರ ತುಂಬಾ ಹೃದಯಾಂತರಾಳಕ್ಕೆ ತೆಗೆದುಕೊಂಡಿದ್ದರು.

 

ನಮ್ಮಂತವರನ್ನು ಸದಾ ಬಡಿದೆಚ್ಛರಿಸಿ ಕೈಹಿಡಿದು ದಾರಿ ತಪ್ಪಬೇಡಿ ಎಂದು ನಮ್ಮನ್ನು ಎಚ್ಚರದ ಹಾದಿಯಲ್ಲಿ ನಡೆಯುವಂತೆ ಮಾಡುತ್ತಿದ್ದ ಹಿರಿಯರು, ಗುರುಗಳಾದ ಜಿ.ಎಂ. ಶ್ರೀನಿವಾಸಯ್ಯನವರ ನಿಧನ ಆಘಾತವನ್ನುಂಟು ಮಾಡಿದೆ.

ದಿನಾಂಕ:07-09-1933ರಲ್ಲಿ ಗುಬ್ಬಿಯ ಹೊಸಪಾಳ್ಯದ ಬಡಾವಣೆಯಲ್ಲಿ ಜನಿಸಿದ್ದರು. ಹಾಸನ, ಕೋಲಾರ ಮತ್ತು ತುಮಕೂರು ಆರ್ಟ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಇತಿಹಾಸ ವಿಷಯವನ್ನು ಸಮಗ್ರವಾಗಿ ತಿಳಿದುಕೊಂಡಿದ್ದ ಅವರು ಏಷ್ಯನ್ ಇತಿಹಾಸದ ಕುರಿತು ನಿರರ್ಗಳವಾಗಿ ಪಾಠ ಬೋಧಿಸುತ್ತಿದ್ದರು ಅವರ ಸಹ ಪ್ರಾಧ್ಯಾಪಕರು ಸ್ಮರಿಸುತ್ತಾರೆ. ವಿದ್ಯಾರ್ಥಿ ವಲಯದಲ್ಲಿ ಜಿಎಂಎಸ್ ಎಂದೇ ಹೆಸರಾಗಿದ್ದರು.

ಸೆ.3ರಂದು ಮಧ್ಯಾಹ್ನ 2 ಗಂಟೆಗೆ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *