ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಸಿಕೊಳ್ಳಲು ಪ್ರಾಧ್ಯಾಪಕರಿಗೆ ಕರೆ


ತುಮಕೂರು : ಉದ್ಯಮದ ಕ್ಷೇತ್ರಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸುವ ಕುರಿತು ಉನ್ನತ ಮಟ್ಟದ ಚರ್ಚೆ ಇಂದಿನ ಅಗತ್ಯವಾಗಿದೆ. ತಾಂತ್ರಿಕ ವಿದ್ಯಾಲಯದಲ್ಲಿ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ನೂತನ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಸಿಕೊಳ್ಳಲು ಪ್ರಾಧ್ಯಾಪಕರು ಮುಂದಾಗಬೇಕಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಾಲಕೃಷ್ಣ ಶೆಟ್ಟಿ ಅವರು ಕರೆ ನೀಡಿದರು.

ಇಂದಿನ ದಿನಮಾನದಲ್ಲಿ ಗುರುವನ್ನು ಮಿರಿಸುವಂತಹ ವಿದ್ಯಾರ್ಥಿಗಳು ಸೃಷ್ಠಿಯಾಗಬೇಕು.ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಪ್ರಾಯೋಗಿಕ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕೆಂದು ನಗರದ ಶೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಹೇ ವಿಶ್ವ ವಿದ್ಯಾಲಯ ಮತ್ತು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಅವರ ಆಶ್ರಯದಲ್ಲಿ ಇಂದು ಏರ್ಪಡಿಸಲಾಗಿದ್ದ ‘ ಪ್ರಸಕ್ತ ಉದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಿಕೆ’ ಎಂಬ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜುಗಳು ಗುರುಕುಲದಂತ ವಾತಾವರಣದಲ್ಲಿ ನಡೆಸಬೇಕು. ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ನೀಡದೆ, ಅವರಲ್ಲಿರುವ ಕ್ರಿಯಾಶೀಲತೆಗೆ ಗುರುಗಳ ಬೆನ್ನಲುಬಾಗಿ ನಿಲ್ಲಬೇಕು. ವಿದ್ಯಾರ್ಥಿಗಳನ್ನು ಮಿತ್ರರಂತೆ ಭಾವಿಸಿ, ಅವರಿಗೆ ಶಿಕ್ಷಣ ನೀಡಬೇಕು ಎಂದು ಡಾ. ಬಾಲಕೃಷ್ಣ ಶೆಟ್ಟಿ ಹೇಳಿದರು.

ಇದೇ ವೇಳೆ ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮತ್ತು ವಿಶ್ವವಿದ್ಯಾಲಯದಲ್ಲಿ ಕಲಿಕಗೆ ಪೂರಕ ವಾತವರಣ ನಿರ್ಮಿಸುವಿಕೆ ಕುರಿತು ಸಿದ್ದಾರ್ಥ ಇಂಜಿನಿಯರಿಂಗ್ ಕ್ಯಾಂಪಸ್‍ನಲ್ಲಿರುವ ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಬೆಂಗಳೂರಿನ ವಿವಿಧ ಉದ್ಯಮ ತಜ್ಞರು ಸಂವಾದ ನೆಡೆಸಿದರು .

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರವಿಪ್ರಾಕಶ್, ಸಾಹೇ ರಿಜಿಸ್ಟಾರ್ ಡಾ.ಎಮ್.ಜೆಡ್.ಕುರಿಯನ್, ಡೀನ್ ಡಾ.ಸಿದ್ದಪ್ಪ, ಡೀನ್ ಡಾ.ಕೆ.ಕರುಣಾಕರ್, ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ್ ಮೆಹ್ತಾ, ಬೆಂಗಳೂರಿನ ಉದ್ಯಮ ತಜ್ಞರಾದ ಡಾ. ಅಮರೇಶ್ ಪಿ ಕಂದಗಲ್ (ತೋಸಿಬಾ), ಸಚಿನ್ ಜಯದೇವಯ್ಯ (ವಿಪ್ರೋ), ಅಶೋಕ್ ಆರ್.ಪಿ(ವಿಪ್ರೋ), ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ನಿಯತ್ರಂಕ ಮತ್ತು ಮೆಡಿಕಲ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾ ಡಾ.ರಾಜು, ಎಂಬಿಎ ವಿಭಾಗದ ಪ್ರಾಂಶುಪಾಲರಾದ ಡಾ.ಅಜಮತ್‍ಉಲ್ಲಾ, ಎಸ್‍ಎಸ್‍ಐಬಿಎಂ ಪ್ರಾಂಶಪಾಲರಾದ ಡಾ. ರವಿಪ್ರಕಾಶ್, ಸಿದ್ದಾರ್ಥ ಮಾಧ್ಯಮ ಕೇಂದ್ರದ ನಿರ್ದೇಶಕರಾದ ಡಾ.ಬಿ ಟಿ ಮುದ್ದೇಶ, ಕಾರ್ಯಾಗಾರದ ಸಂಯೋಜಕರಾದ ಡಾ.ರವೀಂದ್ರ ಸಾಗರ್, ಡಾ. ಶ್ರೀನಿಧಿ, ಗುರುನಂದನ್ ಪಿ.ಎಚ್, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಎಂಬಿಎ, ಬಿಬಿಎಂ, ಎಂಕಾಂ,ಬಿಸಿಎ ಮತ್ತು ಎಸ್ ಎಸ್ ಸಿ ಎಮ್ ಎಸ್, ಸಹಯೋಗದೊಂದಿಗೆ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣದಲ್ಲಿ ಸವಾಲು ಮತ್ತು ಸಮಸ್ಯೆಗಳನ್ನು ಕುರಿತು ಪ್ರಾಧ್ಯಾಪಕರು, ಉದ್ಯಮ ವಲಯದ ವಿವಿಧ ತಜ್ಞರೊಂದಿಗೆ ಸಂವಾದ ಮಾಡಿದರಲ್ಲದೆ, ಶಿಕ್ಷಣಕ್ಕೆ ಪೂರಕವಾದ ನೆರವನ್ನು ಉದ್ಯಮ ರಂಗದಿಂದ ದೊರೆಯಬೇಕೆಂಬ ಅಭಿಪ್ರಾಯವನ್ನು ಮಂಡಿಸಿದರು.

Leave a Reply

Your email address will not be published. Required fields are marked *