ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಹೊಸ ಸಮಿತಿ ರಚನೆ ಆಗಿಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪನವರು ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ಹಿಂದೆ ಸರಿದ ಬರಗೂರು ರಾಮಚಂದ್ರಪ್ಪ ಸುದ್ದಿಗೆ ಸ್ಪಷ್ಟನೆ ನೀಡಿರುವ ಅವರು, ಮುಂದೆ ಸಮಿತಿ ರಚನೆಮಾಡಿದಾಗ ನೀವೇ ಅಧ್ಯಕ್ಷರಂತೆ ಎಂದು ಕೆಲವರು ಕೇಳಿದಾಗ ಬೇರೆ ಯಾರಾದರೂ ಆಗಲಿ,ನಾನು ಆಗುವುದಿಲ್ಲ ಎಂದಿದ್ದೆ ಎಂದು ತಿಳಿಸಿದ್ದಾರೆ.
ಮತ್ತೆ ಮತ್ತೆ ಒಬ್ಬರೇ ಅದೇ ಸ್ಥಾನಗಳಿಗೆ ಹೋಗಬಾರದು ಎಂದೂ ಹೇಳಿದ್ದೆ ಅಷ್ಟೇ. ಸಮಿತಿ ರಚನೆ ಆಗಿಲ್ಲವಾದ್ದರಿಂದ ಉಳಿದ ಚರ್ಚೆ ಗೌಣ. ತಾತ್ಕಾಲಿಕ ಸಮಿತಿಯೂ ರಚನೆ ಆಗಿಲ್ಲ ಎಂದು ತಿಳಿಸಿದ್ದಾರೆ.