
ತುಮಕೂರು : ದೇವರ ದರ್ಶನಕ್ಕೆಂದು ಬಂದು ಎರಡು ಬಸ್‍ಗಳ ನಡುವೆ ಸಿಲುಕಿ ಇಬ್ಬರು ಮಹಿಳೆಯರು ಪ್ರಾಣ ತೆತ್ತ ಘಟನೆ ತುಮಕೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 9.30ರ ಸಮಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿಯವರಾದ ಪಂಕಜ(55) ಮತ್ತು ಪುಟ್ಟತಾಯಮ್ಮ(60) ಮೃತಪಟ್ಟ ಮಹಿಳೆಯರಾಗಿದ್ದಾರೆ.
ತಮ್ಮ ಊರಿನಿಂದು ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ದೇವಸ್ಥಾನಕ್ಕೆ ಹೋಗಲು ಆರು ಮಂದಿ ಮಹಿಳೆಯರು ಇಂದು ಮುಂಜಾನೆಯೇ ಹೊರಟ್ಟಿದ್ದು, 9.30ರ ಸಮಯದಲ್ಲಿ ತುಮಕೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕೊರಟಗೆರೆಗೆ ಹೋಗಲು ಬಸ್ ಹತ್ತುವ ಸಂದರ್ಭದಲ್ಲಿ ಹಿಮ್ಮುಖವಾಗಿ ಬಸ್ ಚಲಿಸಿದ್ದರಿಂದ ಎರಡು ಬಸ್‍ಗಳ ಮಧ್ಯೆ ಸಿಲುಕಿದ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಪಂಕಜ ಮತ್ತು ಪುಟ್ಟತಾಯಮ್ಮ ಅವರುಗಳೇ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಬರಲು ಇತರರನ್ನು ಹೊರಡಿಸಿದ್ದು, ಅವರೇ ತುಮಕೂರು ಬಸ್ ನಿಲ್ದಾಣದಲ್ಲಿ ಎರಡು ಬಸ್‍ಗಳ ಮಧ್ಯೆ ಸಿಲುಕಿ ಸಾವನ್ನಪ್ಪಿರುವುದು ಹೃದಯ ವಿದ್ರಾವಾಕವಾದ ಘಟನೆಯಾಗಿದೆ.
ಇವರ ಜೊತೆ ಬಂದಿದ್ದ ಅನುಸೂಯಮ್ಮ ಹೇಳುವಂತೆ ಇಬ್ಬರು ಬಸ್ ಹತ್ತಿದ್ದರು, ನಾವಿಬ್ಬರೂ ಸ್ವಲ್ಪ ದೂರದಲ್ಲಿ ನಿಂತಿದ್ದೆವು, ಬಸ್‍ನ ಹಿಂದೆ ಬಸ್ ಹತ್ತಲು ಮುಂದಾಗುತ್ತಿದ್ದಾಗ ಏಕಾ ಏಕಿ ಬಸೊಂದು ಹಿಮ್ಮುಖವಾಗಿ ಚಲಿಸಿದ್ದರಿಂದ ಎರಡು ಬಸ್‍ಗಳ ಮಧ್ಯೆ ಸಿಲುಕ್ಕಿದ್ದರಿಂದ ಹಿಂದೆ ನಿಂತಿದ್ದ ಬಸ್ ಮತ್ತು ಹಿಂದಿನಿಂದ ಬಂದ ಬಸ್ ನಡುವೆ ಸಿಲುಕಿ ಮೃತ ಪಟ್ಟಿರುವುದಾಗಿ ತಿಳಿಸುತ್ತಾರೆ.
ದೇವರ ದರ್ಶನಕ್ಕೆಂದು ಬಂದವರು ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ಅಘಾತಕಾರಿ ಘಟನೆ ಮತ್ತು ಚಾಲಕನ ಅಜಾಗರುಕತೆಯೇ ಕಾರಣವಾಗಿದೆ.