ಕುಣಿಗಲ್ : ತಾಲ್ಲೂಕಿನ ಅಮ್ಮನಘಟ್ಟ ಹಟ್ಟಿಲಕ್ಕಮ್ಮ ದೇವಸ್ಥಾನ ದಲ್ಲಿ ಅಮಾವಾಸ್ಯೆ ಪ್ರಯುಕ್ತ ಭಕ್ತಾದಿಗಳು ತುಂಬಿ ತುಳಿಕಿದರು.
ಅಮಾವಾಸ್ಯೆಯು ಭಾನುವಾರ ಬಂದಿರುವುದರಿಂದ ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದರು. ದೇವಸ್ಥಾನದ ಲ್ಲಿ ಅಮಾವಾಸ್ಯೆ ಕಟ್ಟಳೆ ಕಾಯಿ ಮಾಡಿಸಲು ತುಂಬಾ ಬೇಡಿಕೆ ಮತ್ತು ನೂಕುನುಗ್ಗಲು ಉಂಟಾಗಿದ್ದು ಕಂಡು ಬಂದಿತು.
ಅರ್ಚಕರಿಗೆ ಮತ್ತು ಕಣಿ ಹೇಳುವವರಿಗೆ ಬೇಡಿಕೆ ಹೆಚ್ಚಿತ್ತು. ರಸ್ತೆಯ ಇಕ್ಕೆಲಗಳಲ್ಲಿ ವಾಹನಳು ಸಾಲುಗಟ್ಟಿ ನಿಂತಿದ್ದವು.