ಅತ್ಯಾಚಾರವೆಸಗಿ ಯುವತಿ ಆತ್ಮಹತ್ಯೆಗೆ ಕಾರಣನಾದವನ ಬಚಾವ್ ಮಾಡುತ್ತಿರುವ ಕೊರಟಗೆರೆ ಪೊಲೀಸರು,ಗೃಹ ಸಚಿವರು ನ್ಯಾಯ ಒದಗಿಸುವರೇ?

ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಆತ್ಮಹತ್ಯೆಗೆ ಕಾರಣನಾದ ಉಮೇಶನಾಯ್ಕ

ತುಮಕೂರು : ಯುವತಿಯೊಬ್ಬಳನ್ನು ನಂಬಿಸಿ ಅತ್ಯಾಚಾರವೆಸಗಿ ಯುವತಿ ಆತ್ಮಹತ್ಯೆಗೆ ಕಾರಣನಾದ ವ್ಯಕ್ತಿಯ ಮೇಲೆ ಕೇಸು ದಾಖಲಿಸದೆ ಕೊರಟಗೆರೆ ಪೊಲೀಸರು ರಕ್ಷಣೆ ನೀಡಿ ಪೇದೆಯೊಬ್ಬರ ಪ್ರಭಾವದಿಂದ ಬಚಾವ್ ಮಾಡಲು ಮುಂದಾಗಿದ್ದಾರೆ.

ಕೊರಟಗೆರೆ ತಾಲ್ಲೂಕು ಅರಸಾಪುರ ತಾಂಡದಲ್ಲಿ 2023ರಂದು ಹೊಳವನಹಳ್ಳಿ ಹೋಬಳಿಯ ಶಕುನಿ ತಿಮ್ಮನಹಳ್ಳಿಯ ವೆಂಕಟೇಶ ನಾಯ್ಕ ಮತ್ತು ಲಕ್ಷ್ಮೀದೇವಮ್ಮ ಅವರ ಮಗಳ ಮೇಲೆ 2023 ಏಪ್ರಿಲ್ 19ರಂದು ಲಕ್ಷ್ಮೀದೇವಮ್ಮನವರ ತಂದೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಉಮೇಶನಾಯ್ಕ ಎಂಬ ಆಟೋ ಚಾಲಕನೇ ಕಾರಣನೆಂದು ಯುವತಿ ತಂದೆ-ತಾಯಿಯರು ದೂರು ನೀಡಿದರೂ ದಾಖಲಿಸದೆ, ಉಮೇಶನಾಯ್ಕನ ಸೋದರ ಮಾವ ಸಂಬಂಧಿ ಮೋಹನನಾಯ್ಕ ಎಂಬ ಪೇದೆಯು ತನ್ನ ಪ್ರಭಾವ ಬಳಸಿ ದೂರನ್ನು ದಾಖಲಿಸದೇ ಅತ್ಯಾಚಾರವೆಸಗಿ ಆತ್ಮಹತ್ಯೆಗೆ ಕಾರಣನಾದವನ ಮೇಲೆ ಎಫ್‍ಐಆರ್ ದಾಖಲಿಸದೆ, ಆತ್ಮಹತ್ಯೆ ತಂದೆ ತಾಯಿಗಳಿಗೆ ಬೆದರಿಕೆ ಹಾಕಿ ಆತನೇ ಬರೆದ ಪೊಲೀಸ್ ದೂರಿಗೆ ಸಹಿ ಹಾಕಿಸಿಕೊಂಡು ಶವವನ್ನು ಸುಟ್ಟು ಹಾಕಿ ಎಂದು ಬೆದರಿಸಿರುವ ಪ್ರಕರಣ ನಡೆದಿದೆ.

ಯುವತಿನ್ನು ಶಾಲೆಗೆ ಡ್ರಾಪ್ ಮಾಡುವ ನೆಪದಲ್ಲಿ ಬ್ಲಾಕ್‍ಮೇಲ್ ಮಾಡಲು ಬಳಸಿತ್ತಿದ್ದ ಆಟೋ

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ತಂದೆ-ತಾಯಿಯರು ದೂರು ನೀಡಿದ್ದು, ಈ ಸಂಬಂಧ ಕೊರಟಗೆರೆ ಠಾಣೆಗೆ ಕ್ರಮವಹಿಸುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದ್ದರೂ ಯಾವುದೇ ಕ್ರಮಕೈಗೊಳ್ಳದೆ, ಯುವತಿ ತಂದೆ-ತಾಯಿಯರಿಗೆ ಪೊಲೀಸ್ ಪೇದೆ ಮೋಹನನಾಯ್ಕ ಸಬ್‍ಇನ್ಸ್‍ಪೆಕ್ಟರ್ ಮೂಲಕ ಬೆದರಿಕೆ ಹಾಕಿಸುತ್ತಿದ್ದಾನೆ ಎನ್ನಲಾಗುತ್ತಿದೆ.

ಆತ್ಮಹತ್ಯೆ ಮಾಡಿಕೊಂಡ ತಮ್ಮ ಮಗಳಿಗೆ ನ್ಯಾಯ ದೊರಕಿಸುವಂತೆ ಪ್ರತಿ ದಿನ ಕೊರಟಗೆರೆ ಪೊಲೀಸ್ ಠಾಣೆಗೆ ತಂದೆ-ತಾಯಿಗಳು ಕಣ್ಣೀರು ಹಾಕಿಕೊಂಡು ತಿರುಗುತ್ತಿದ್ದರೂ ಪೊಲೀಸರ ಕಲ್ಲು ಹೃದಯ ಕರಗದೆ ತಂದೆ-ತಾಯಿಗಳನ್ನೇ ಜೈಲಿಗೆ ಕಳಿಸುವ ಕೇಸು ದಾಖಲಿಸುವುದಾಗಿ ಬೆದರಿಸುತ್ತಿದ್ದು, ಈ ಪ್ರಕರಣ ನೂತನ ಗೃಹಸಚಿವರ ಕ್ಷೇತ್ರದಲ್ಲಿ ನಡೆದಿರುವುದರಿಂದ ಇತ್ತ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಗಮನ ಹರಿಸಿ ಆತ್ಮಹತ್ಯೆ ಯುವತಿಯ ತಂದೆ-ತಾಯಿಗೆ  ನ್ಯಾಯ ದೊರಕಿಸ ಕೊಡ ಬೇಕಿದೆ.

ಘಟನೆಯ ವಿವರ :

ವೆಂಕಟೇಶನಾಯ್ಕ ಅವರ ಸಂಸಾರ 15 ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದರು,  ಕಳೆದ ಕೋವಿಡ್ ಸಮಯದಲ್ಲಿ ಊರಿಗೆ ಬಂದಾಗ ಮಗಳನ್ನು  ಓದಿಸಲು ಹೊಳವನಹಳ್ಳಿಯ ಪ್ರೌಢಶಾಲೆಗೆ ಕಳುಹಿಸುತ್ತಿದ್ದರು. (2020-2021) ಈ ಸಂದರ್ಭದಲ್ಲಿ ಆಟೋ ಚಾಲಕನಾದ ಉಮೇಶ್‍ನಾಯ್ಕ ಎಂಬುವನು ಯುವತಿಯನ್ನು ಆಟೋದಲ್ಲಿ ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದನ್ನು ಮಾಡುತ್ತಾ ಮಗಳಿಗೆ ಪುಸಲಾಯಿಸಿ  ಖಾಸಗಿ ವಿಡಿಯೋವನ್ನು ಕಳ್ಳತನದಿಂದ ತೆಗೆದುಕೊಂಡು ಚಂದ್ರಕಲಾಳನ್ನು ಹೆದರಿಸುವ ಹಾಗೂ ಅವನು ಹೇಳಿದ ಹಾಗೆ ಕೇಳುವ ಬ್ಲಾಕ್‍ಮೇಲ್ ಮಾಡಲು ಶುರುಮಾಡಿಕೊಂಡಿದ್ದ ವಿಷಯ ತಿಳಿದ ಯುವತಿಯ ತಂದೆ-ತಾಯಿಗಳು ಉಮೇಶನಾಯ್ಕ ಎಂಬಾತನಿಗೆ ಹಾಗೆ ಮಾಡದಂತೆ ಮನವಿಯನ್ನು ಮಾಡಿದ್ದಾಗಿ ತಂದೆ ತಾಯಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

2023ರ ಏಪ್ರಿಲ್ 16ರಂದು ರಾತ್ರಿ ಉಮೇಶನಾಯ್ಕನು  ಮುತ್ತುರಾಜು ಎಂಬ ಹುಡುಗನನ್ನು ಜೊತೆಯಲ್ಲಿ ಶಕುನಿ ತಿಮ್ಮನಹಳ್ಳಿ ತಾಂಡದಿಂದ ಅರಸಾಪುರ ತಾಂಡಕ್ಕೆ  ರಾತ್ರಿ 10 ಗಂಟೆ ಸುಮಾರಿನಲ್ಲಿ ಹೋಗಿ, ಹುಡುಗಿಗೆ ಪೋನ್ ಮಾಡಿ ಕರೆದುಕೊಂಡು ಹೋಗಿ ಹುಡಗಿಯ ಮೇಲೆ ದೌರ್ಜನ್ಯ ಮಾಡಿ, ಕೆಟ್ಟದಾಗಿ ನಡೆದುಕೊಂಡು, ಹುಡುಗಿಗೂ ಬಲವಂತವಾಗಿ ಮದ್ಯ ಕುಡಿಸಿ ಅತ್ಯಚಾರ ಮಾಡಿ, ಒಂದು ಗಂಟೆಯ ನಂತರ ಕರೆದುಕೊಂಡು ಬಂದು ಮನೆಗೆ  ಬಿಟ್ಟು ಹೋಗಿರುತ್ತಾರೆ. ಹುಡುಗಿಯ ಬಟ್ಟೆಯು ಮದ್ಯ ಸೇವನೆಯ ವಾಸನೆ ಹೊಡೆಯುತ್ತಿರುವುದನ್ನು ಕೇಳಿದಾಗ ಈ ವಿಷಯವನ್ನು ಅವರ ಸಂಬಂಧಿಕರಿಗೆ ಉಮೇಶನಾಯ್ಕ ಅತ್ಯಾಚಾರ ಮಾಡಿರುವ ವಿಷಯವನ್ನು ತಿಳಿಸಿದ್ದಾಳೆ.

ಇದರಿಂದ ಘಾಷಿಗೊಳಗಾಗಿ ಅವಮಾನ ತಾಳಲಾರದೆ ಯುವತಿ ಮರ್ಯಾದೆ ಅಂಜಿ      ದಿನಾಂಕ: 19-04-2023ರಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಾವಿನ ನಿಜವಾದ ಕಾರಣವನ್ನು ಹೇಳಿ ಕೇಸು ದಾಖಲಿಸುವಂತೆ ಕೊರಟಗೆರೆ ಸಬ್ ಇನ್ಸ್‍ಫೆಕ್ಟರ್ ಅವರಿಗೆ ಮನವಿ ಮಾಡಿದರೂ ಸಬ್ ಇನ್ಸ್‍ಫೆಕ್ಟರ್ ಅವರು ಉಮೇಶನಾಯ್ಕನ ಹೆಸರೇ ಇಲ್ಲದ ಹಾಗೆ ಕೇಸನ್ನು ದಾಖಲಿಸಲು ಮತ್ತು ಸಾವಿಗೆ ನಾವೇ ಕಾರಣವೆಂಬಂತೆ ಬಿಂಬಿಸಿದ್ದು, ಉಮೇಶನಾಯ್ಕನ ಸೋದರಮಾವ ಮೋಹನನಾಯ್ಕ ಎಂಬುವವನುಈ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ  ಉಮೇಶನಾಯ್ಕನು ಯುವತಿಯ ಆತ್ಮಹತ್ಯೆಗೆ ನೇರ ಕಾರಣ ಎಂದು  ಎಫ್‍ಐಆರ್‍ನ್ನು ದಾಖಲಿಸಿವಂತೆ ಮಾವಿ ಮಾಡಿದರೂ  ಕ್ರೈಂ ಬ್ರಾಂಚ್‍ನ ಮೋಹನನಾಯ್ಕ ಉಮೇಶ್‍ನಾಯ್ಕನಿಗೆ ಸೋದರ ಮಾವ ಸಂಬಂಧಿಯಾಗಿರುವುದರಿಂದ ಕೇಸನ್ನು ನಾನು ಹೇಳಿದಂತೆಯೇ ನೀವು ಬರದು ಕೊಟ್ಟು ಯುವತಿಯ ಶವವನ್ನು ಸುಟ್ಟು ಹಾಕುವಂತೆ ಯುವತಿಯ ತಂದೆ-ತಾಯಿಯರ ಮೇಲೆ ದೌರ್ಜನ್ಯವೆಸಗಿ ಯುಡಿಆರ್ ಮಾಡಿಸಿದ್ದಾನೆ ಎಂದು ಯುವತಿಯ ತಂದೆ-ತಾಯಿಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ ಇದುವರೆವಿಗೂ ಯಾವುದೇ ಕೊರಟಗೆರೆ ಪೊಲೀಸರು ಯಾವುದೇ ಕ್ರಮಕೈಗೊಂಡಿರುವುದಿಲ್ಲ, 

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕ್ರೈಂ ಬ್ರಾಂಚ್ ನಲ್ಲಿರುವ ಪೇದೆ ಮೋಹನನಾಯ್ಕ  ಉಮೇಶನಾಯ್ಕನ  ಸೋದರ ಮಾವ ಆಗಿರುವುದರಿಂದ ಯಾವುದೇ ಕಾನೂನಿನ ಕ್ರಮ ಕೈಗೊಳ್ಳದೆ, ಉಮೇಶನಾಯ್ಕನನ್ನು ಹಾಗೇಯೇ ಬಿಟ್ಟಿದ್ದಾರೆ, ಅಲ್ಲದೆ ಊರಿನಲ್ಲಿ ಉಮೇಶನ ತಾಯಿಯು ಎಲ್ಲರ ಮುಂದೆ ನಮ್ಮನ್ನು ಏನು ಮಾಡಲು ಆಗುವುದಿಲ್ಲ ಎಂದು ರಾಜಾರೋಷವಾಗಿ  ಹೇಳಿಕೊಂಡು ತಿರುಗಾಡುತ್ತಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಉಮೇಶನಾಯ್ಕನು ಇದೇ ರೀತಿ ನಂಬಿಸಿ ಹಲವಾರು ಯುವತಿಯರ ಮೇಲೆ ಅತ್ಯಚಾರ, ನಂಬಿಸಿ ಮೋಸ ಮಾಡಿದ್ದಾನೆಂಬ ದೂರುಗಳಿದ್ದು, ಇದುವರೆವಿಗೂ ಕೊರಟಗೆರೆ ಪೊಲೀಸರು ಮತ್ತು ಸಬ್‍ಇನ್ಸ್‍ಫೇಕ್ಟರ್ ಇವನ ಮೇಲೆ ಎಫ್‍ಐಆರ್ ದಾಖಲಿಸದೆ ಇರಲು ಉಮೇಶನಾಯ್ಕನ ಸೋದರ ಮಾವನ ಸಂಬಂಧಿ ಪೇದೆ ಮೋಹನನಾಯ್ಕನ ಪ್ರಭಾವವೆ ಕಾರಣವೆನ್ನಲಾಗುತ್ತಿದೆ.

ಉಮೇಶನಾಯ್ಕ ಮೇಲೆ ದೂರು ದಾಖಲಿಸಿ ಇನ್ನು ಇವನಿಂದ ಈ ರೀತಿಯ ಮೋಸದ ಕೃತ್ಯಗಳು, ಹೆಣ್ಣು ಮಕ್ಕಳ ಬೇರೆಯವರ ಬಾಳಲ್ಲಿ ನಡೆಯದೆ ನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಂಡು ನ್ಯಾಯವನ್ನು ದೊರಕಿಸಿ ಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಯುವತಿಯ ತಂದೆ-ತಯಿಯರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *