
ತುಮಕೂರು : ತುಮಕೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಟಿಕೆಟ್ ಅಕಾಂಕ್ಷಿಯಾಗಿದ್ದ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ನಗರದ ವಿಜಯನಗರ ಬಡಾವಣೆಯ ಸರ್ವೋದಯ ಶಾಲೆಯಲ್ಲಿ ಪತ್ನಿ ಸಮೇತರಾಗಿ ಬಂದು ಮತ ಚಲಾವಣೆ ಮಾಡಿದ್ದು ತೀವ್ರ ಕುತೂಹಲ ಮತ್ತು ಚರ್ಚೆಗೆ ಅನುವು ಮಾಡಿ ಕೊಟ್ಟಿದೆ.
ಮತ ಚಲಾವಣೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯವಾಗಿ ಹಿಮ್ಮುಖವಾಗಿಲ್ಲ, ರಾಜಕೀಯದಲ್ಲೇ ಇದ್ದು, ಮುಂದಿನ ದಿನಗಳಲ್ಲಿ ತುಮಕೂರಿನಲ್ಲೇ ಇದ್ದುಕೊಂಡು ಜನರ ಸೇವೆ ಮಾಡುತ್ತಾ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುತ್ತೇನೆ ಎಂದರು.
ನಾನು ತುಮಕೂರು ಶಾಸಕನಾಗುತ್ತೇನೆ ಎಂದು ಶ್ರೀ ಮಂಜುನಾಥಸ್ವಾಮಿಯ ಮೇಲೆ ಆಣೆ ಮಾಡಿದ್ದೆ, ಆದರೆ ನನಗೆ ಒಬ್ಬ ವ್ಯಕ್ತಿಯಿಂದ ಟಿಕೆಟ್ ಸಿಗಲಿಲ್ಲ, ಮುಂದೆ ನಾನು ತುಮಕೂರಿನಲ್ಲೇ ಇದ್ದುಕೊಂಡು ರಾಜಕೀಯ ಮುಂದುವರೆಸುತ್ತೇನೆ, ಮುಂಬರುವ ಪಾಲಿಕೆ ಚುನಾವಣೆ ಇರಬಹುದು, ಲೋಕಸಭಾ ಚುನಾವಣೆ ಇರಬಹುದು ಅದರಲ್ಲಿ ನನ್ನ ಪಾತ್ರವಿರುತ್ತದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಶ್ನಿಸಿದಾಗ, ಇನ್ನೂ ಒಂದು ವರ್ಷ ಕಾಲಾವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಅದರ ಬಗ್ಗೆ ಯೋಚಿಸುವುದಾಗಿ ತಿಳಿಸಿದರು.
ನನಗೆ ರಾಜಕೀಯ ಗುರು ಯಾರು ಇಲ್ಲ, ಶ್ರೀ ಮಂಜುನಾಥ ಸ್ವಾಮಿಯೇ ನನಗೆ ರಾಜಕೀಯ ಗುರು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನನ್ನ ಬೆಂಬಲ ಕಾಂಗ್ರೆಸ್‍ಗೆ ಎಂದು ಹೇಳಿ ಹೋದರು ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೆಸ್ ರಾಜಣ್ಣ, ಉಪ್ಪಾರಹಳ್ಳಿ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.