
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ನೇಮಕವಾಗಿದ್ದಾರೆ.
ಬಿಜೆಪಿಯ ನ್ಯಾಷನಲ್ ಜನರಲ್ ಸೆಕ್ರೆಟರಿ ಅರುಣ್ ಸಿಂಗ್ ಅವರು ಬಿಜೆಪಿ ರಾಷ್ಟ್ರ ಅಧ್ಯಕ್ಷರಾದ ಜೆ.ಪಿ. ನಡ್ದ ಅವರ ಆದೇಶದಂತೆ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಒಂದು ವರ್ಷದಿಂದ ಅಧ್ಯಕ್ಷರನ್ನು ನೇಮಕಕ್ಕೆ ಮುಂದಾಗಿದ್ದರು ಆಗಿರಲಿಲ್ಲ, ಕೇಂದ್ರ ಸಚಿವೆ ಶೋಭ ಕರಂದಾಂಜ್ಲೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕೇಳಿದಾಗ ಅವರು ಒಪ್ಪದೇ ಇದ್ದಾಗ ಈಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಲೋಕಸಭೆಯ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರನ್ನು ನೇಮಿಸಿರುವುದು ಪಕ್ಷಕ್ಕೆ ಯಾವ ರೀತಿ ಅನುಕೂಲವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಅವರು ಬಿಜೆಪಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.