
ತುಮಕೂರು : ತುಮಕೂರು ಬೆಂಗಳೂರಿಗೆ ಕೇವಲ 70 ಕಿ.ಮೀ. ಇದ್ದು, ತುಮಕೂರನ್ನು ಗ್ರೇಟರ್ ಬೆಂಗಳೂರು ಮಾಡಲು ಎಲ್ಲಾ ಶ್ರಮ ಹಾಕಲು ಬದ್ಧವಾಗಿದ್ದೇನೆ ಹಾಗೂ ಕಾರ್ಯನಿರತ ಪತ್ರಕರ್ತರ ಪ್ರತಿಭಾವಂತ 25ಮಕ್ಕಳ ವಿದ್ಯಾಭ್ಯಾಸಕ್ಕಾಗಿ 25 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ನೀಡಲು ಪತ್ರಕರ್ತರ ಸಂಘಕ್ಕೆ ಸ್ಕಾಲರ್ ಶಿಫ್ ನಿಧಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಘೋಷಣೆ ಮಾಡಿದರು.
ಅವರಿಂದು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರದಾನ ಮಾಡಿದ “ಸಮಾಜ ಸೇವಾರತ್ನ ಪ್ರಶಸ್ತಿ” ಸ್ವೀಕರಿಸಿ ಮಾತನಾಡುತ್ತಿದ್ದರು.
ಪತ್ರಕರ್ತರ ಸಂಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ, ತುಮಕೂರಿನ ವಿಜಯವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಗುಂಡುರಾಯರು ಒಂದು ಸಣ್ಣ ಪತ್ರಿಕೆಯನ್ನು ನಡೆಸಲು ಎಷ್ಟೆಲ್ಲಾ ಕಷ್ಟ ಪಡುತ್ತಿದ್ದರು ಎಂಬುದನ್ನು ನಾನು ಚಿಕ್ಕವನಿದ್ದಾಗ ನಮ್ಮ ತಂದೆಯವರ ಜೊತೆ ಅವರ ಮನೆಗೆ ಹೋದಾಗ ನೋಡಿದ್ದೇನೆ, ಈ ಹಿನ್ನಲೆಯಲ್ಲಿ ಪತ್ರಕರ್ತರು ಆರ್ಥಿಕ ಸಂಕಷ್ಟ ಎದುರಿಸುವವರಾಗಿದ್ದು, ಅವರ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 25 ಮಕ್ಕಳಿಗೆ ಪ್ರತಿ ವರ್ಷ ಸ್ಕಾಲರ್‍ಶಿಫ್(ವಿದ್ಯಾರ್ಥಿ ವೇತನ) ನೀಡಲು 25 ಲಕ್ಷ ರೂ.ಗಳನ್ನು ಪತ್ರಕರ್ತರ ಸಂಘಕ್ಕೆ ಸ್ಕಾಲರ್ ಶಿಫ್ ನಿಧಿ ನೀಡಲಾಗುವುದು, ಇದು ಪತ್ರಕರ್ತರ ಮಕ್ಕಳಿಗೆ ಮಾತ್ರ ವಿನಿಯೋಗ ಆಗಬೇಕು ಎಂದು ಹೇಳಿದರು.

ಪರ್ತಕರ್ತರಿಗೆ ನಿವೇಶನ ನೀಡಲು ತಾವು ಬದ್ಧರಗಿದ್ದೇವೆ, ನನ್ನ ಅವಧಿಯಲ್ಲೇ ಆ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
ತುಮಕೂರು ಬದಲಾವಣೆಯಾಗಬೇಕು, ತುಮಕೂರು ಬೆಂಗಳೂರಿಗೆ ಕೇವಲ 70 ಕಿ.ಮೀ. ಇದ್ದು ಬದಲಾವಣೆಯಾಗಲಿಲ್ಲ ಎಂದರೆ ಏನರ್ಥ, ಒಂದು ತ್ರೀ ಸ್ಟಾರ್ ಹೋಟಲ್ ಬರಲಿಲ್ಲ, ಏನಾದರೂ ಕೊಂಡುಕೊಳ್ಳಲು ಬೆಂಗಳೂರಿಗೆ ಹೋಗುತ್ತಾರೆ, ಅದನ್ನೇ ಇಲ್ಲೇ ಕೊಂಡುಕೊಳ್ಳುವುದಿದ್ದರೆ ಎಂಷ್ಟು ಚೆನ್ನ, ಆ ಹಿನ್ನಲೆಯಲ್ಲಿಯೇ ಬೆಂಗಳೂರನ್ನೇ ತುಮಕೂರಿಗೆ ತರೋಣ, ಅದಕ್ಕೆ ಗ್ರೇಟರ್ ಬೆಂಗಳೂರಾಗಿ ತುಮಕೂರು ಮಾಡೋಣ, ಈ ಹಿನ್ನಲೆಯಲ್ಲಿಯೇ ತುಮಕೂರು ತನಕ ಮೆಟ್ರೋ ರೈಲು ತರಲು ಪ್ರಯತ್ನಿಸುತ್ತಿದ್ದೇನೆ, ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಮನಗರ ಜಿಲ್ಲೆ ಬಿಡದಿ ತನಕ ಮೆಟ್ರೋ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ, ಅವರ ಬಳಿ ಇಲ್ಲ ನಾನು ಮೊದಲು ಕೇಳಿದ್ದೇನೆ ನನಗೂ ಕೊಡಿ ಅಂತ ಕೇಳಿದ್ದೇನೆ, ಮೆಟ್ರೋ ತಂದೆ ತರುತ್ತೇನೆ ಎಂದರು.

ಪತ್ರಕರ್ತರ ಪತ್ರಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.
ಬೆಂಗಳೂರಿನ ಸರಿಸಮಕ್ಕೆ ತುಮಕೂರುನ್ನು ಬೆಳಸಬೇಕು ಎಂಬುದು ನನ್ನ ಅಭಿಲಾಸೆ, ನಮ್ಮ ಮುಂದಿನ ಮಕ್ಕಳಿಗೆ, ಆ ಸಮುದಾಯಕ್ಕೆ ಒಳ್ಳೆಯ ನಗರ ತುಮಕೂರು ಎಂಬುದಕ್ಕಾಗಿ ನನ್ನ ಅವಧಿಯಲ್ಲಿ ತುಮಕೂರು ಅಭಿವೃದ್ಧಿ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ದೃಢವಾಗಿ ಹೇಳಿದರು.
ವಿಶ್ವವಿದ್ಯಾಲಯ ಮಾಡುವಾಗ ನನ್ನನ್ನು ಎಲ್ಲರೂ ಗೇಲಿ ಮಾಡಿದರು, ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಎಸ್.ಪಿ.ಕಛೇರಿ ಉದ್ಘಾಟನೆಗೆ ಬಂದಿದ್ದಾಗ ತುಮಕೂರು ಜಿಲ್ಲೆಗೆ ವಿಶ್ವವಿದ್ಯಾನಿಲಯ ಘೋಷಣೆಗೆ ಪಟ್ಟು ಹಿಡಿದೆ, ಎಸ್.ಎಂ.ಕೃಷ್ಣರವರು ಪರಮೇಶ್ವರ್ ಅವರು ಜಿಲ್ಲೆಗೆ ವಿಶ್ವವಿದ್ಯಾನಿಲಯ ಕೇಳುತ್ತಿದ್ದಾರೆ ಸಾಧ್ಯವಾದರೆ ನೀಡುತ್ತೇವೆ ಎಂದು ಸಮಾರಂಭದಲ್ಲಿ ಹೇಳಿದರು, ಅದನ್ನೇ ಪಟ್ಟಾಗಿ ಹಿಡಿದುಕೊಂಡು ನಾನೇ ಉನ್ನತ ಶಿಕ್ಷಣ ಸಚಿವನಾಗಿದ್ದರಿಂದ ರಾಜ್ಯದಲ್ಲಿ ಮೊದಲಿಗೆ ಜಿಲ್ಲೆಗೊಂದು ವಿಶ್ವವಿದ್ಯಾನಿಲಯವನ್ನು ಮಂಜೂರು ಮಾಡಿಸಿದೆ ಎಂದು ಹೇಳಿದರು.

ಪತ್ರಕರ್ತರ ಪತ್ರಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.
ತುಮಕೂರು ಶೈಕ್ಷಣಿಕ ಕ್ಷೇತ್ರವಾಗಿದ್ದು, ಲಕ್ಷಾಂತರ ಮಕ್ಕಳು ಓದುತ್ತಿದ್ದಾರೆ, ತುಮಕೂರಿಗೆ ಹಲವಾರು ಶಿಕ್ಷಣ ಕ್ಷೇತ್ರಗಳು ಬಂದಿರುವುದರಿಂದ ಇಂದು ಮಕ್ಕಳಿಗೆ ಶಿಕ್ಷಣ ಸುಲಭವಾಗಿದೆ, ಈ ಹಿನ್ನಲೆಯಲ್ಲಿ ತುಮಕೂರನ್ನು ಅಭಿವೃದ್ಧಿ ಪಡಿಸೋಣ ಎಂದರು.
ರಾಜಕೀಯ ಕ್ಷೇತ್ರ ಈಗ ಬಹಳಷ್ಟು ಬದಲಾಗಿದೆ, ನನಗೆ ಸಮಾಜ ಸೇವಾರತ್ನ ಎಂಬ ಪ್ರಶಸ್ತಿ ನೀಡಿದ್ದೀರಿ, ರಾಜಕೀಯದಲ್ಲಿ ಸೇವಾ ಅನ್ನುವುದು ಪ್ರಶ್ನಾರ್ಥವಾಗಿದೆ, ನಾವು ರಾಜೀಯಕ್ಕೆ ಬಂದಿರುವುದೇ ಸೇವೇ ಮಾಡಲಿಕ್ಕೆ, ಹೊರಟ್ಟಿಯವರು 42 ವರ್ಷ ಅದೂ ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬರುತ್ತಿದ್ದಾರೆ ಎಂದರೆ ಅವರ ಸಚ್ಚ ರಾಜಕೀಯ, ಜನಾನುರಾಗಿರುವುದು, ಇಡೀ ರಾಜ್ಯದಲ್ಲಿ ಶೈಕ್ಷಣಿಕ ಸಮಸ್ಯೆಗಳು, ರಾಜ್ಯದ ಶಿಕ್ಷಕರ ಸಮಸ್ಯೆಗಳನ್ನು ಅರಿತು ಬದಲಾವಣೆ ತರಲು ಶ್ರಮಿಸಿರುವುದರಿಂದ ಗೆದ್ದು ಬರುತ್ತಿದ್ದಾರೆ ಎಂದರು.

ಪತ್ರಕರ್ತರ ಪತ್ರಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.
ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಸಜ್ಜನ ರಾಜಕಾರಣಿಯಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಗೌರವಾನ್ವಿತ ವ್ಯಕ್ತಿ, ಬಸವರಾಜ ಹೊರಟ್ಟಿ ಅಂತಹವರು ಬಂದು ನನಗೆ ತುಮಕೂರು ಜಿಲ್ಲಾ ಪತ್ರಕರ್ತರ ಸಂಘ ನೀಡಿದ “ಸಮಾಜ ಸೇವಾರತ್ನ ಪ್ರಶಸ್ತಿ” ನೀಡಿದ್ದು ಸಂತೋಷದ ವಿಷಯ, ಇನ್ಯಾರೋ ಬಂದು ಪ್ರಶಸ್ತಿ ನೀಡುವುದು ಅವರ ಮೇಲೆ ಕೇಸುಗಳಿದ್ದರೆ, ಗೃಹ ಮಂತ್ರಿಗಳಿಗೆ ಇಂತಹವರು ಪ್ರಶಸ್ತಿ ನೀಡಿದರು ಎಂಬ ಅಪವಾದ ಇಲ್ಲವಾಯಿತು ಎಂದರು.
ತುಮಕೂರು ತಾಲ್ಲೂಕಿನ ಗೊಲ್ಲಹಳ್ಳಿ ಕುಗ್ರಾಮದಲ್ಲಿ ಜನಿಸಿದವನು. ಅಂದಿನ ಕಾಲದಲ್ಲಿದ್ದ ಜಾತಿವ್ಯವಸ್ಥೆ, ಮೌಡ್ಯ ಆಚರಣೆಗಳನ್ನೆಲ್ಲ ನಾನು ಖುದ್ದಾಗಿ ನೋಡಿದ್ದೇನೆ. ಆ ಆಚರಣೆಗಳೆಲ್ಲ ಇಂದು ಕಡಿಮೆಯಾಗಿವೆ. ವಿನೋಬಾ ಭಾವೆ ಅವರ ಆಶಯದಂತೆ ಚಿತ್ರಕಲಾ ಶಿಕ್ಷಕರಾಗಿದ್ದ ನಮ್ಮ ತಂದೆಯವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು ಎಂದು ಸ್ಮರಿಸಿಕೊಂಡರು.
ಹೊರಟ್ಟಿ ತಾಯಿ ಹೆಸರಲ್ಲಿ ಮಹಿಳಾ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ : ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರಧಾನ ಮಾಡಿದ ವಿಧಾನ ಪರಿಷತ್‍ನ ಸಭಾ ಪತಿ ಬಸವರಾಜು ಹೊರಟ್ಟಿ ಅವರು ನಮ್ಮ ತಾಯಿ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಮಹಿಳಾ ಪತ್ರಕರ್ತರಿಗೆ ನೀಡಲು ಜಿಲ್ಲಾ ಪತ್ರಕರ್ತರ ಸಂಘಕ್ಕೆ ದತಿ ನಿಧಿ ಹಣ ನೀಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ನೀಡಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಪತ್ರಕರ್ತರಿಗೆ ಮತ್ತು ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
-ವೆಂಕಟಾಚಲ.ಹೆಚ್.ವಿ.