ತುಮಕೂರು: ಬಕ್ರೀದ್ ಹಬ್ಬ ದಾನ ಧರ್ಮದ ಹಬ್ಬವಾಗಿದ್ದು, ಹಿಂದೂ -ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ, ತಕ್ಷಣ ಪೆÇಲೀಸರಿಗೆ ಮಾಹಿತಿ ನೀಡಬೇಕು ಎಂದು ತುಮಕೂರು ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು.
ನಗರದ ತಮ್ಮ ಕಛೇರಿಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಪೆÇಲೀಸ್ ಇಲಾಖೆ ಸದಾ ಸಿದ್ಧವಿರುತ್ತದೆ. ಈ ಹಿಂದಿನಿಂದಲೂ ನಗರದಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬಗಳು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲೂ ಕೂಡಾ ಇದೇ ಸಂಸ್ಕೃತಿ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್), ಬಕ್ರೀದ್ ಶಾಂತಿ, ತ್ಯಾಗ, ಸೌಹಾರ್ಧತೆ ಹಾಗೂ ಸಮಾನತೆಯನ್ನು ಸಾರುವ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಶಾಂತಿಗೆ ಭಂಗ ತರುವಂಥಾ ಕೃತ್ಯಗಳು ನೈತಿಕ ಪೊಲೀಸ್‍ಗಿರಿಯಿಂದ ನಡೆಯಬಹುದು. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿಕೊಂಡರು.
ವಕ್ಫ್ ಸಮಿತಿ ಅಧ್ಯಕ್ಷ ಅಫ್ರೋಜ್ ಮಾತನಾಡಿ, ಬಕ್ರೀದ್ ಆಚರಣೆ ಸಂದರ್ಭದಲ್ಲಿ ಎಲ್ಲರೂ ಕಾನೂನನ್ನು ಗೌರವಿಸುತ್ತಾ ಶಾಂತಿಯುತವಾಗಿ ಹಬ್ಬ ಆಚರಿಸಬೇಕು, ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ರಕ್ಷಣೆ ನಮಗಿದೆ ಎಂದರು.
ವೇದಿಕೆಯಲ್ಲಿ ನಗರಠಾಣೆ ಇನ್ಸ್‍ಪೆಕ್ಷರ್ ದಿನೇಶ್, ತಿಲಕ್‍ಪಾರ್ಕ್ ಠಾಣೆ ಇನ್ಸ್‍ಪೆಕ್ಟರ್ ನವೀನ ಸೇರಿದಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
ಸಭೆಯಲ್ಲಿ ಮುಖಂಡರುಗಳಾದ ಮಾಜಿ ಮೇಯರ್ ಅಸ್ಲಂ ಪಾಷ, ಫಯಾಜ್, ಅಕ್ರಂಪಾಷ ಸೇರಿದಂತೆ ನಗರದಲ್ಲಿನ ಮಸೀದಿಗಳ ಮುತವಲ್ಲಿಗಳು ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.