ಖೈದಿಗಳಿಗೆ ಬಿರಿಯಾನಿ-ಜೈಲಾಧಿಕಾರಿ ಜೈಲಿಗೆ-ಅರಗ ಜ್ಞಾನೇಂದ್ರ

ಹುಳಿಯಾರು:. ಜೈಲಿನಲ್ಲಿರುವ ಅಪರಾಧಿಗಳಿಗೆ ಹೊರಗಡೆಯಿಂದ ಏನನ್ನಾದರೂ ತಂದು ಕೊಟ್ಟರೆ ಜೈಲು ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ, ತರಿಸಿಕೊಂಡವರಿಗೆ ಅವರ ಸೆರೆವಾಸ ಮುಗಿದ ನಂತರ ಪುನಃ 5 ವರ್ಷ ಶಿಕ್ಷೆ ಮುಂದುವರಿಸುವ ಕಾನೂನು ಜಾರಿಗೆ ತಂದಿದ್ದೇವೆ ಜೈಲಿನಲ್ಲಿ ಬಿರಿಯಾನಿ ತರಿಸಿ ತಿನ್ನುತ್ತಿದ್ದಾರೆ. ಮದ್ಯ ಸೇವಿಸುತ್ತಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲದೆ ಮಾಧಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಇದು ಸೆರೆಮನೆಯೋ, ಅರಮನೆಯೋ ಎಂದು ಸಾರ್ವಜನಿಕ ವಲಯದಲ್ಲಿ ತೀರ್ವ ಟೀಕೆಗೆ ಗುರಿಯಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಹುಳಿಯಾರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ಠಾಣೆಯ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶಾಂತಿಸುವ್ಯವಸ್ಥೆ ಕಾಪಾಡಿರುವ ಲೀಸರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 117 ಪೊಲೀಸ್ ಠಾಣೆಗೆ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು 20 ಕಟ್ಟಡಗಳು ಈಗಾಗಲೇ ಉದ್ಘಾಟನೆ ಮಾಡಲಾಗಿದೆ. 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೊಲೀಸರಿಗೆ ಡಬಲ್ ಬೆಡ್ರೂಂ ಮನೆ ಕಟ್ಟಿಕೊಡುತ್ತಿದ್ದೇವೆ. 50 ಕೋಟಿ ರೂ. ವೆಚ್ಚದಲ್ಲಿ ಪೊಲೀಸರಿಗೆ ಹೊಸ ವಾಹನಗಳನ್ನು ಕೊಡಿಸಲಿದ್ದೇವೆ ಎಂದು ವಿವರಿಸಿದರು.

ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಅಖಂಡ ವಿದ್ವತ್ತು ಮತ್ತು ಅಪ್ರತಿಮ ಪಾಂಡಿತ್ಯದ ಮೂಲಕ ಎದುರಾಳಿಗಳಿಗೆ ಚಾಟಿ ಬೀಸುತ್ತಾರೆ, ತೊಡೆಯನ್ನೂ ಸಹ ತಟ್ಟುತ್ತಾರೆ. ಒಂದರ್ಥದಲ್ಲಿ ಸರ್ಕಾರ ಆಪತ್ಭಾಂದವರಾಗಿ ಕೆಲಸ ಮಾಡುತ್ತಿದ್ದಾರೆ. ಜೆಸಿಎಂ ಹೇಳಿದ ಕೆಲಸಗಳೆಲ್ಲವೂ ಸರ್ಕಾರದಲ್ಲಿ ಆಗುತ್ತಿದೆಯಲ್ಲದೆ ಹೆದರಿಸಿಯೇ ತಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಜೆಸಿಎಂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶಂಸೆ ಮಾತುಗಳನ್ನು ಆಡಿದರು.

ಪೊಲೀಸರು ಎಫ್ಐಆರ್ ಹಾಕಿ ಚಾಚ್ರ್ಶೀಟ್ ಹಾಕಿದರೂ ಸಾಕ್ಷಾಧ್ಯಾರಗಳಿಲ್ಲದೆ ಕೇಸು ಬಿದ್ದೋಗುತ್ತವೆ. ಹಾಗಾಗಿ ಅಪರಾಧ ನಡೆದ ಕೆಲ ನಿಮಿಷದಲ್ಲೇ ಸಾಕ್ಷಿ ಕಾಪಾಡಬೇಕು, ಸಾಕ್ಷಿ ನಾಶ ಆದರೆ ಪತ್ತೆ ಕಷ್ಟ. ಹಾಗಾಗಿ ವಿಧಿವಿಜ್ಞಾನ ಜ್ಞಾನ ಇರುವವರ ಅಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಅಪರಾಧ ಶೋಧನೆಗೆ ಹೊಸ ಹೆಜ್ಜೆ ಇರಿಸಿದ್ದು ಸೀನ್ ಆಫ್ ಕ್ರೈಂ ಆಫೀಸರ್ ನೇಮಕ ಮಾಡಿಕೊಳ್ಳುತ್ತಿದೆ. ಇವರಿಂದ ಅಪರಾಧ ಪತ್ತೆ ಶೀಘ್ರವಾಗಲಿದೆ, ಶೀಘ್ರ ನ್ಯಾಯ ಸಿಗಲಿದೆ ಎಂದು ವಿಶ್ವಾಸವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವ್ಯಕ್ತಪಡಿಸಿದರು.

ಸಾರ್ವಜನಿಕರು ತಮ್ಮ ದೂರು ದಾಖಲಿಸರು ಪೊಲೀಸ್ ಠಾಣೆಗೆ ಅಲೆಯುವುದನ್ನು ತಪ್ಪಿಸಲು ದೇಶದಲ್ಲೇ ಮೊದಲ ಬಾರಿಗೆ ಆನ್ ಲೈನ್ನಲ್ಲೇ ದೂರು ದಾಖಲಿಸುವ ವ್ಯವಸ್ಥೆ ಜಾರಿ ಮಾಡಿದ್ದೇವೆ. ಹಾಗಾಗಿಯೇ ಹರಿಯಾಣದಲ್ಲಿ ದೇಶದ ಎಲ್ಲಾ ಗೃಹ ಸಚಿವರು, ಐಜಿ, ಡಿಜಿಗಳ ಸಮಾವೇಶದಲ್ಲಿ ನಮ್ಮ ದೇಶದ ಗೃಹ ಸಚಿವರು ಕರ್ನಾಟಕದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ತಹಸೀಲ್ದಾರ್ ಬಿ.ತೇಜಸ್ವಿನಿ, ಪಪಂ ಅಧ್ಯಕ್ಷ ಎಚ್.ಎನ್.ಕಿರಣ್ಕುಮಾರ್, ಸದಸ್ಯ ರಾಜುಬಡಗಿ, ಕೆ.ಎಸ್.ಪಿ.ಎಚ್.ಮುಖ್ಯ ಅಭಿಯಂತರರಾದ ಸಂಜೀವ್ ವಿ.ಮರಡ್ಡಿ, ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್ ಶಹಾಪೂರ್ವಾಡ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ, ಸಹಾಯಕ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಗೋಯಲ್, ಸಿಪಿಐ ವಿ.ನಿರ್ಮಲ, ಪಿಎಸ್ಐ ಕೆ.ಸಿ.ಮೂರ್ತಿ, ಕೆ.ಟಿ.ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *