
ತುಮಕೂರು: ತುಮಕೂರು ನಗರದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಬಡಾವಣೆಗಳನ್ನು ಗುರುತಿಸಿ ನನಗೆ ಸಿಕ್ಕ ಅವಧಿಯಲ್ಲಿ ಶಕ್ತಿ ಮೀರಿ ಬಡಾವಣೆಯ ಅಭಿವೃದ್ದಿಗೆ ಶ್ರಮಿಸಿದ್ದೇನೆ. ರಾಜ್ಯದಲ್ಲಿ ಅತೀ ವೃಷ್ಟಿ, ಕೋವಿಡ್‍ನ ಸಮಸ್ಯೆಯ ನಡುವೆಯು ಸರ್ಕಾರದ ವಿವಿಧ ಯೋಜನೆಗಳ ಅನುದಾನವನ್ನು ತಂದು ನಗರದ ಬಡಾವಣೆಯ ಅಭಿವೃದ್ದಿಗೆ ಪ್ರಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಮುಂದಿನ ಅವಧಿಗೆ ನನನ್ನು ಆಯ್ಕೆ ಮಾಡಿದರೆ ಅಪೂರ್ಣಗೊಂಡಿರುವ ಬಡಾವಣೆಗಳ ಅಭಿವೃದ್ದಿಗೆ ಮತ್ತಷ್ಟು ಶ್ರಮ ವಹಿಸುವುದಾಗಿ ಶಾಸಕ ಹಾಗೂ ತುಮಕೂರು ನಗರದ ಬಿಜೆಪಿ ಅಭ್ಯರ್ಥಿ ಜಿ.ಬಿ. ಜ್ಯೋತಿಗಣೇಶ್ ರವರು ಮತಯಾಚನೆ ಮಾಡಿದರು.
ಅವರು ತುಮಕೂರು ನಗರದ ಜಯನಗರ, ಮಾರುತಿನಗರ, ನೃಪತುಂಗ ಬಡಾವಣೆ, ಬಡ್ಡಿಹಳ್ಳಿ, ಗಿರಿನಗರ, ಶಿವರಾಮ ಕಾರಂತ ನಗರ, ಸಿದ್ದರಾಮಶ್ವೇರ ಬಡಾವಣೆ, ಗೋಕುಲ ಬಡಾವಣೆ, ಮಂಜುನಾಥನಗರ, ಚಿಕ್ಕಪೇಟೆ, ಅಗ್ರಹಾರ, ಗಾರ್ಡನ್ ರಸ್ತೆ, ದಿಬ್ಬೂರು ರಸ್ತೆಯ ವರೆಗೂ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸಿದರು.
ತುಮಕೂರು ನಗರದ ಇತಿಹಾಸದಲ್ಲಿ ನಾನು ಶಾಸಕನಾಗಿರುವ ಅವಧಿಯು ಅಭಿವೃದ್ದಿಯ ವಿಚಾರವಾಗಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದು ನನಗೆ ಸಂತಸ ತಂದಿದೆ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿಯಿದೆ. ರಾಜಧಾನಿಗೆ ಪರ್ಯಾಯವಾಗಿ ವೇಗವಾಗಿ ಬೆಳೆಯತ್ತಿರುವ ತುಮಕೂರು ನಗರದ ನೀಲ ನಕ್ಷೆಯು ನನ್ನ ಮನಸಿನಲ್ಲಿದ್ದು, ಮುಂದೆ ಮತ್ತೋಮ್ಮೆ ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಸಿಕೊಡಿ ತುಮಕೂರು ನಗರದ ಸುಸ್ಥಿರ ಅಭಿವೃದ್ದಿಗೆ ನಾನು ಶ್ರಮ ವಹಿಸುತ್ತೇನೆ ಎಂದು ತಿಳಿಸಿದರು. ಈ ಚುನಾವಣಾ ಪ್ರಚಾರದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಟೂಡಾ ಮಾಜಿ ಅಧ್ಯಕ್ಷರು, ನಗರದ ಹಾಗೂ ಬಡಾವಣೆಯ ಬಿಜೆಪಿ ಮುಖಂಡರುಗಳು ಈ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.