ಕೊನೆಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಚಂದ್ರಶೇಖರಗೌಡ

ತುಮಕೂರು : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹತ್ತನ್ನೆರಡು ದಿನಗಳಾದರೂ ಅಧಿಕಾರ ಸ್ವೀಕರಿಸದೆ ಇದ್ದುದರಿಂದ, ಚುನಾವಣೆ ವೇಳೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಹಿಸಬೇಕಾಗಿರುವುದರಿಂದ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್‍ನವರೇ ಮಾತನಾಡಿದರೆ, ಮತ್ತೆ ಕೆಲವರು ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ತುಮಕೂರು ಗಾಜಿನ ಮನೆಯಲ್ಲಿ ಬೃಹತ್ ಸಮಾರಂಭದ ಮೂಲಕ ಅಧಿಕಾರ ಸ್ವೀಕಾರ ಮಾಡಬೇಕೆಂದಿದ್ದಾರೆ ಎನ್ನಲಾಗುತಿತ್ತು.

ಆದರೆ ಡಿ.ಕೆ.ಶಿವಕುಮಾರ್ ಅವರ ದಿನಾಂಕ ಸಿಗದ ಕಾರಣ ಸಾಂಕೇತಿಕವಾಗಿ ಇಂದು ನಿಕಟಪೂರ್ವ ಅಧ್ಯಕ್ಷರಾದ ಆರ್.ರಾಮಕೃಷ್ಣ ಅವರಿಂದ ಚಂದ್ರಶೇಖರಗೌಡ ಅವರು ಪಕ್ಷದ ಬಾವುಟವನ್ನು ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಅರ್. ರಾಮಕೃಷ್ಣ ಕಾಂಗ್ರೆಸ್ ಬಾವುಟವನ್ನು ಹಸ್ತಾಂತರಿಸಿದರು. ನಿರ್ಗಮಿತ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ಡಾ.ಜಿ.ಪರಮೇಶ್ವರ್ ಅವರ ಆರ್ಶೀವಾದದಿಂದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆರು ವರ್ಷದ ಕೆಲಸ ಮಾಡಿದ್ದೇವೆ, ಆತ್ಮತೃಪ್ತಿಯಿಂದ ಅಧಿಕಾರವನ್ನು ಹಸ್ತಾಂತರಿಸಿದ್ದೇನೆ ಎಂದರು.

ಲೋಕಸಭೆ ಚುನಾವಕೆಯಲ್ಲಿ ಮೈತಿಯಾಗಿದ್ದರಿಂದ ಚುನಾವಣೆಯಲ್ಲಿ ಸೋತಿದ್ದೇವೆ, ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಅಧಿಕಾರದಲ್ಲಿ ಇದ್ದಾಗ ಪರ-ವಿರೋಧ ಇರುತ್ತವೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಿರ್ವಹಿಸಿದ ಆತ್ಮತೃಪ್ತಿ ಇದೆ ಎಂದು ಹೇಳಿದರು. ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ, ಪಕ್ಷ ಅಧಿಕಾರದಲ್ಲಿ ಇದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ, ಎಲ್ಲರೂ ಸಂಘಟಿತರಾಗಿ ಹೋರಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸೋಣ, ಚಂದ್ರಶೇಖರ್ ಗೌಡ ಅವರಿಗೆ ಸಹಕಾರ ನೀಡೋಣ ಎಂದರು.
ನೂತನ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಪಕ್ಷದ ಅಧ್ಯಕ್ಷರ ಜವಾಬ್ದಾರಿಯನ್ನು ಪಕ್ಷದ ಪರಿಷ್ಠರು ನಮಗೆ ವಹಿಸಿದ್ದಾರೆ. ಅಧಿಕಾರ ನೀಡಲು ಜಿಲ್ಲೆಯ ಮುಖಂಡರು ಸಹಕಾರ ನೀಡಿದ್ದಾರೆ, ಅವರಿಗೆಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವಂತೆ ಹಿಂದುಳಿದ ವರ್ಗದ ನನ್ನನ್ನು ಆಯ್ಕೆ ಮಾಡಿರುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು, ಕಾಂಗ್ರೆಸ್ ನಲ್ಲಿ ವ್ಯಕ್ತಿ ಗಾಗಿ ಅಧಿಕಾರ ಎನ್ನುವ ಬದಲಾಗಿ ಸಾಮೂಹಿಕವಾಗಿ ಅಧಿಕಾರ ಎನ್ನುವ ಭಾವನೆ ನಮ್ಮದು ಎಂದರು.

ಕಾಂಗ್ರೆಸ್ ಹನ್ನೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲ ಮುಖಂಡರು ಸಹಕಾರ ನೀಡಬೇಕು, ಮಾರ್ಗದರ್ಶನವನ್ನು ನೀಡಿ ಪಕ್ಷ ಅಧಿಕಾರಕ್ಕೆ ತರಲು ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀದರ ಹಾಲಪ್ಪ, ಮೇಯರ್ ಪ್ರಭಾವತಿ, ಮಾಜಿ ಉಪ ಮೇಯರ್ ರೂಪಾ, ಡಾ.ಫರ್ಹಾನ ಬೇಗಂ, ಮುಖಂಡರಾದ ಹೆಚ್.ಡಿ.ಹಮಮಂತಯ್ಯ, ಮರಿಚೆನ್ನಮ್ಮ, ರೆಡ್ಡಿಚೆನ್ನಯಲ್ಲಪ್ಪ, ನರಸೀಯಪ್ಪ, ಲಿಂಗರಾಜು, ಪುರುμÉೂೀತ್ತಮ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *