ತುಮಕೂರು:ಸುಪ್ರಿಂಕೋರ್ಟಿನ ಆದೇಶದ ಅನ್ವಯ ಎಲ್ಲಾ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ, ಕರ್ನಾಟಕ ಕಾರ್ಮಿಕರ ಸಮ್ಮೇಳನ ಆಯೋಜನೆ, ಸಮಾನಕೆಲಸಕ್ಕೆ ಸಮಾನ ವೇತನ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮಾರ್ಚ್ 03ರಿಂದ 07ರವರೆಗೆ ಬೆಂಗಳೂರಿನ ಪ್ರಿಡಂಪಾರ್ಕಿನಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಆಹೋರಾತ್ರಿ ಧರಣಿಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು,ಮಾರ್ಚ್ 3ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6ರಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಖಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು, ಸಾರಿಗೆ ಕಾರ್ಮಿಕರಾದ ಆಟೋ,ಟ್ಯಾಕ್ಸಿ ಚಾಲಕರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಮಾರ್ಚ್ 7ರಂದು ಅಂಗನವಾಡಿ ಕಾರ್ಮಿಕರು ಈ ಬೃಹತ್ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.ಸುಮಾರು 1ಲಕ್ಷಕ್ಕೂ ಅಧಿಕ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತಿದ್ದು, ತುಮಕೂರು ಜಿಲ್ಲೆಯಿಂದ ಸುಮಾರು 5 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಕರ್ನಾಟಕ ರಾಜ್ಯದ ಕಾರ್ಮಿಕರ ಹಲವು ಪ್ರಮುಖ ಬೇಡಿಕೆಗಳು ಧೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದಿದೆ. ಶ್ರಮಶಕ್ತಿಯ ಸಮರ್ಪಕ ನಿರ್ವಹಣೆ ಹಾಗು ಶ್ರಮಿಕರನ್ನು ಮಾರುಕಟ್ಟೆಯ ಚಟುವಟಿಕೆಗಳಲ್ಲಿ ಸಕ್ರೀಯ ಪಾಲುವಹಿಸುವಂತೆ ಮಾಡಲು ಅಗತ್ಯ ವಿತ್ತ ಕ್ರಮಗಳನ್ನು ರಾಜ್ಯ ಸರಕಾರ ತೆಗೆದುಕೊಳ್ಳುವ ಅಗತ್ಯವಿದೆ.ರಾಜ್ಯ ಸರಕಾರವು ಪ್ರಗತಿಶೀಲ ಹಾಗು ಬಹುಸಂಖ್ಯೆಯಲ್ಲಿನ ಶ್ರಮಜೀವಿಗಳನ್ನು ಒಳಗೊಳ್ಳುವ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತದೆಂಬ ರಾಜ್ಯದ ಕಾರ್ಮಿಕರ ನಿರೀಕ್ಷೆಯು ಲೋಕಸಭಾ ಚುನಾವಣೆಗಳ ನಂತರದಲ್ಲಿ ರಾಜ್ಯ ಸರಕಾರ ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಹುಸಿಯಾಗುತ್ತಿದೆ ಎಂದರು.
ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ನೀಡಬೇಕಾದ ಆರ್ಥಿಕ ನೆರವನ್ನು ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರವು ಯಾವುದೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮತ್ತೊಂದೆಡೆ ರಾಜ್ಯದ ಆರ್ಥಿಕ ಸ್ಥಿತಿಗೆ ಅಪಾಯಕಾರಿಯಾಗುವ ರೀತಿಯಲ್ಲಿ ಸಾಲಗಳನ್ನು ಪಡೆಯಲು ಮುಂದಾಗುತ್ತಿದೆ.ಮೆಟ್ರೋ,ಬಸ್ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತಿದೆ. ಕೇಂದ್ರ ಸರಕಾರದ ಮಾದರಿಯಲ್ಲೇ ಸಾರ್ವಜನಿಕ ಉದ್ದಿಮೆಗಳು ಹಾಗು ಆಸ್ತಿಗಳನ್ನು ‘ನಗದೀಕರಣ ಮಾಡಲು” ಹಾಗು ಖಾಸಗೀಕರಣ ಮಾಡಲು ಮುಂದಾಗುತ್ತಿದೆ. ಫಲವತ್ತಾದ ರೈತರ ಭೂಮಿಯನ್ನು ಒತ್ತಾಯ ಪೂರ್ವಕವಾಗಿ ಸ್ವಾಧೀನ ಮಾಡಿ ಕಾಪೆರ್Çರೇಟ್ ಹಾಗು ಭೂಮಾಫಿ ಯಾಗಳ ವಶಕ್ಕೆ ಒಪ್ಪಿಸುವ ಭೂಸ್ವಾಧೀನ ನೀತಿಗಳನ್ನು ಮುಂದುವರಿಸುತ್ತಿದೆ ಎಂದು ಸೈಯದ್ ಮುಜೀಬ್ ಆರೋಪಿಸಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೇಶ್ ಮಾತನಾಡಿ,ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಕಾರ್ಮಿಕ ಕಾನೂನುಗಳಲ್ಲಿ ಜಾರಿ ಮಾಡಿದ ಮಾರಕ ತಿದ್ದುಪಡಿಗಳನ್ನು ಕಾಂಗ್ರೆಗಿ ನೇತ್ರತ್ವದರಾಜ್ಯ ಸರಕಾರವು ಮುಂದುವರಿಸುತ್ತಿದೆ.ಕೃಷಿ ಕ್ಷೇತ್ರದಲ್ಲಿಯು ಎಪಿಎಂಸಿ ಕಾಯಿದೆಗಳಲ್ಲಿ ಬಿಜಿಪಿ ಸರಕಾರವು ಜಾರಿಗೆ ತಂದಿದ್ದ ರೈತವಿರೋಧಿ ತಿದ್ದುಪಡಿಗಳನ್ನು ಕಾಂಗ್ರೆಸ್ ಸರಕಾರವು ಹಿಂಪಡೆಯದೆ ಜನರಿಗೆ ನೀಡಿದೆ ಭರÀವಸೆಗಳನ್ನು ಹುಸಿ ಮಾಡಿದೆ ಎಂದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ.ಕಮಲ ಮಾತನಾಡಿ,2022ರಿಂದ ಜಾರಿಯಾಗಬೇಕಾದ ಪೂರ್ಣ ವಿಮರ್ಶಿತ ಕನಿಷ್ಠ ವೇತನದ ಜಾರಿಯು ವಿಳಂಬವಾಗುತ್ತಿದೆ. ಅವೈಜ್ಞಾನಿಕವಾಗಿ ಹಾಗು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ತತ್ವಗಳನ್ನು ಉಲ್ಲಂಘಿಸಿ 2022ರಲ್ಲಿ ಘೋಷಿಸಲಾಗಿದ್ದ ಕನಿಷ್ಠ ವೇತನ ಪ್ರಕಟಣೆಗಳನ್ನು ರಾಜ್ಯದ ಪ್ರಮುಖ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.ಕೂಡಲೆ ಕನಿಷ್ಠ ವೇತನವನ್ನು ಘೋಷಿಸಲು ಸರಕಾರವು ಕ್ರಮವಹಿಸಬೇಕು.ಬಿಜೆಪಿ ನೇತ್ರತ್ವದ ರಾಜ್ಯ ಸರಕಾರವು ಕೆಲಸದ ವೇಳೆಯನ್ನು ವಿಸ್ತರಿಸುವ, ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ದುಡಿಸಲು ಅವಕಾಶಕೊಡುವ ಕಾನೂನು ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ನಡೆಯುತ್ತಿರುವ ಹೋರಾಟದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಅಂಗನವಾಡಿ ನೌಕರರ ಸಂಘದ ಗುಲ್ಜಾರ್ ಭಾನು, ಅಕ್ಷರ ದಾಸೋಹ ನೌಕರರ ಸಂಘಟನೆಯ ನಾಗರತ್ನ, ಹಮಾಲಿಗಳ ಸಂಘದ ನಾಗರಾಜು, ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಎನ್.ಕೆ.ಸುಬ್ರಮಣ್ಯ ಭಾಗವಹಿಸಿದ್ದರು.