ತುರ್ತು ನಿಗಾ ಘಟಕದಲ್ಲಿರುವ ಪ್ರಜಾಪ್ರಭುತ್ವ ರಕ್ಷಿಸಬೇಕಿದೆ- ಯೋಗೇಂದ್ರ ಯಾದವ್

ತುಮಕೂರು : ರಾಷ್ಟ್ರದ ಪ್ರಜಾಪ್ರಭುತ್ವ ತುರ್ತು ನಿಗಾ ಘಟಕದಲ್ಲಿದ್ದು, ಇದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಚಿಂತಕರು, ಅಂಕಣಕಾರರಾದ ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ಹೇಳಿದರು.

ಅವರು ಭಾನುವಾರ ರಾಜ್ಯ ವಿಧಾನಸಭಾ ಚುನಾವಣಾ ಜಾಗೃತಿ ಬಳಗದಿಂದ “ದ್ವೇಷ ರಾಜಕಾರಣ ಸೋಲಿಸಿ-ಸಂವಿಧಾನ ಉಳಿಸಿ” ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ದುಂಡು ಮೇಜಿನ ಸಭೆಯಲ್ಲಿ ಮಾತನಾಡುತ್ತಿದ್ದರು.

1963ರಲ್ಲಿ ಇದ್ದಂತಹ ಭಾರತ ಇಂದು ಇಲ್ಲ, ಅಂದು ಮಹಿಳೆಯರಿಗೆ ಉತ್ತಮ ಸ್ಥಾನಮಾನ ಕಲ್ಪಿಸಲಾಗಿತ್ತು, ಪ್ರಸ್ತುತ ಮಹಿಳೆ ಹಾಕಿಕೊಳ್ಳುವ ಬಟ್ಟಯಿಂದ ಹಿಡಿದು ಪ್ರತಿಯೊಂದನ್ನು ವಿವಾದ ಮಾಡಿ ಪ್ರಶ್ನೆ ಮಾಡಲಾಗುತ್ತಿದೆ, ಕನಿಷ್ಠ ಒಂದು ಪೀಳಿಗೆಯ ಮೇಲೆ ಇದು ಪರಿಣಾಮ ಬೀರಲಿದೆ. ಬಿಜೆಪಿ ಕರ್ನಾಟಕ ಮೂಲಕ ದಕ್ಷಿಣ ಭಾರತದ ಪ್ರವೇಶ ಪಡೆಯಿತು, ಇಲ್ಲಿಂದಲೇ ಅದರ ನಿರ್ಗಮನವೂ ಆಗಬೇಕು, ಕೋಮುವಾದ ರಾಜಕಾರಣ ಮಾಡುವ, ಭ್ರಷ್ಟಚಾರದಲ್ಲೇ ಮುಳಿಗಿರುವ ಬಿಜೆಪಿ ಆಡಳಿತದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು.

Yogendra Yadav Speech

ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬಿಜೆಪಿಯನ್ನು ಸೋಲಿಸಬೇಕು,ಕರ್ನಾಟಕದಲ್ಲಿ ಇತ್ತೀಚೆಗೆ ಪರಿಸ್ಥಿತಿ ಗಂಭೀರವಾಗಿದೆ. ಲಿಂಚಿಂಗ್, ಅಜಾನ್, ಹಿಜಾಬ್ ಸೇರಿದಂತೆ ಧರ್ಮ ರಾಜಕಾರಣದಿಂದ ದ್ವೇಷ, ಕೋಮು ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತ್ ಜೋಡೋ ಕಾಂಗ್ರೆಸ್ ಯಾತ್ರೆಯಾದರೂ ಹಲವಾರು ನಾಗರಿಕ ಸಂಘಟನೆಗಳು ಭಾಗವಹಿಸಿ ಮುಂದಿನ 1 ವರ್ಷದಲ್ಲಿ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮತಗಳನ್ನು ಕ್ರೂಢೀಕರಿಸುವ ಭಾರತ್ ಜೋಡೋ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷದವರೆಂದು ಗುರುತಿಸಿಕೊಂಡಿರುವ ಜನರನ್ನು ಬಿಟ್ಟು ತಟಸ್ಥವಾಗಿರುವ ನಿರ್ಧರಿತ ಮತದಾರರನ್ನು ತಲುಪಬೇಕು ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮಾಡಲಾಗುತ್ತದೆ ಎಂದರು.

ಬಿಜೆಪಿಯ ಐ.ಟಿ. ಸೆಲ್ ಚುನಾವಣೆಗೂ ಮುನ್ನ ಉದ್ದೇಶ ಪೂರ್ವಕವಾಗಿ ಉರಿಗೌಡ, ನಂಜೇಗೌಡ ಎಂಬ ಎರಡು ಪಾತ್ರಗಳನ್ನು ಸೃಷ್ಠಿಸಿ ಅನವಶ್ಯಕ ಚರ್ಚೆ ಹುಟ್ಟು ಹಾಕುತ್ತದೆ, ಬಿಜೆಪಿ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದು, ಅದು ನಿಧಾನ ಗತಿಯಲ್ಲಿ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರಲಿದೆ ಎಂದರು.

ಸಂವಿಧಾನಕ್ಕೆ ಇಡೀ ವ್ಯವಸ್ಥೆಯೇ ವಿರುದ್ಧವಾಗುವಂತೆ ಬಿಜೆಪಿ ಮಾಡಿದ್ದು ಯಾವ ಸಂವಿಧಾನ ಸಮಾನತೆ, ಸಾಮಾಜಿಕ ನ್ಯಾಯ, ದೇಶದ ಸಾರ್ವಭೌಮತೆ ಮತ್ತು ಧರ್ಮಗಳ ಆಯ್ಕೆ, ನಾಗರಿಕ ಹಕ್ಕುಗಳನ್ನು ನೀಡದೆಯೇ ಅದಕ್ಕೆ ಸನಾತನ ನಾಜಿ ಸಿದ್ದಾಂತದಿಂದ ಅಪಾಯವಿದೆ. ಹಾಗಾಗಿ ನಾವು ಜನರ ಹೋರಾಟದ ಮೂಲಕ ಎರಡನೇ ಗಣತಂತ್ರವನ್ನು ಸಾಧಿಸಬೇಕು ಎಂದು ಹೇಳಿದರು.

ಬಿಜೆಪಿಯ ಐ.ಟಿ. ಸೆಲ್ ಚುನಾವಣೆಗೂ ಮುನ್ನ ಉದ್ದೇಶ ಪೂರ್ವಕವಾಗಿ ಉರಿಗೌಡ, ನಂಜೇಗೌಡ ಎಂಬ ಎರಡು ಪಾತ್ರಗಳನ್ನು ಸೃಷ್ಠಿಸಿ ಅನವಶ್ಯಕ ಚಚೆಏ ಹುಟ್ಟು ಹಾಕುತ್ತದೆ, ಬಿಜೆಪಿ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದು, ಅದು ನಿಧಾನ ಗತಿಯಲ್ಲಿ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರಲಿದೆ ಎಂದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ ನಾವು ಈ ಸ್ಥಿತಿ ತಲುಪಲು ರೈತ ಸಂಘ ಹಾಗೂ ದಲಿತ ಸಂಘರ್ಷ ಸಮತಿಯ ತಪ್ಪು ತೀರ್ಮಾನಗಳು ಕಾರಣ, ರಾಜಕಾರಣದಲ್ಲಿ ದಷ್ಟರನ್ನು ಕಿತ್ತು ಹಾಕಿ ಅಯೋಗ್ಯರನ್ನು ಆಯ್ಕೆ ಮಾಡಿದೆವು.
ಈ ಅಯೋಗ್ಯರು ನಮ್ಮ ಚಳವಳಿಯನ್ನು ಇಲ್ಲವಾಗಿಸಿದರು, ತಮಿಳುನಾಡಿನ ದ್ರಾವಿಡ ಚಳವಳಿ, ಕೇರಳದ ನಾರಾಯಣ ಗುರು ಆರಂಭಿಸಿದ್ದ ಗಟ್ಟಿ ಚಳುವಳಿಯ ಮಾದರಿಗಳನ್ನು ಕರ್ನಾಟಕದಲ್ಲೂ ಆರಂಭಿಸಬೇಕಿದೆ ಎಂದರು.

ತುಮಕೂರು ಜಿಲ್ಲೆಯ ಸಮಾನ ಮನಸ್ಥರು ಜಿಲ್ಲೆಯಲ್ಲಿ ಎಷ್ಟು ಜನ ಚುನಾವಣೆಗೆ ನಿಲ್ಲುತ್ತಿದ್ದಾರೆ. ಕಳೆದ ಸಲ ಗೆದ್ದವರು ಈ ಬಾರಿಯೂ ಎಷ್ಟು ಜನ ಚುನಾವಣೆಗೆ ನಿಲ್ಲುತ್ತಿದ್ದಾರೆ, ಅವರ ಆಸ್ತಿ ಘೋಷಣೆ ಎಷ್ಟು? ಕಳೆದ ಸಲಕ್ಕಿಂತ ಬಾರಿ ಶೇ.ಎಷ್ಟು ಹೆಚ್ಚಾಗಿದೆ? ಎಂಬ ಮಾಹಿತಿಗಳನ್ನುಕಲೆಹಾಕಿ ಭ್ರಷ್ಟರನ್ನು ಕಟ್ಟಿಹಾಕಬೇಕು. ಎಂದರು.
ಚುನಾವಣೆಯಲ್ಲಿ ಹಣ, ಸೀರೆ, ಕುಕ್ಕರ್, ಲಿಕ್ಕರ್, ತಾವ ಹಂಚುವವರನ್ನು ಚುನಾವಣಾ ಆಯೋಗಕ್ಕೆ ಹಿಡಿದುಕೊಡಬೇಕು. ಕಳೆದ ಸಲ ಆಪರೇಷನ್ ಕಮಲಕ್ಕೆ ಒಳಗಾದ 17 ಜನರನ್ನು ಈ ಬಾರಿ ಮನೆಗೆ ಕಳಿಸಬೇಕಿದೆ. ಬಹುಮತದ ಬರುವುದು ನಮ್ಮ ಗುರಿಯಲ್ಲ, ಸ್ಪಷ್ಟ ಬಹುಮತದೊಂದಿಗೆ ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ಸರ್ಕಾರ ತರುವುದು ನಮ್ಮ ಆದ್ಯತೆಯಾಗಬೇಕು ಎಂದರು.

ಇದೇ ವೇಳೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ 2023ರ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಸಂವಿಧಾನ ಉಳಿಸಿ, ಬಹುತ್ವ ಕರ್ನಾಟಕ ರಕ್ಷಿಸಿ ನಮ್ಮ ಮತ ವಸತಿ ಹಕ್ಕಿಗಾಗಿ ಎಂಬ ಘೋಷಣೆಯೊಂದಿಗೆ ಸ್ಲಂಜನರ 12 ಪ್ರಮುಖ ಅಂಶಗಳ ಮೇಲೆ ಸ್ಲಂ ಜನರ ಪ್ರಣಾಳಿಕೆಯನ್ನು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಸ್ಲಂಜನಾಂದೋಲ ಕರ್ನಾಟಕ ಸಂಚಾಲಕ ಎ.ನರಸಿಂಹ ಮೂರ್ತಿ, ವಿಮರ್ಶಕ ಕೆ.ಪಿ.ನಟರಾಜ್, ನಟರಾಜಪ್ಪ, ಡಾ.ಅರುಂಧತಿ, ಡಾ.ಹೆಚ್.ವಿ. ರಂಗಸ್ವಾಮಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *