ತುಮಕೂರು : 2023 ರಾಜ್ಯ ವಿಧಾನಸಭಾ ಚುನಾವಣಾ ಜಾಗೃತಿ ಬಳಗದ ವತಿಯಿಂದ 2023ರ ಮಾರ್ಚ್ 19ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಸರಿಯಾಗಿ ತುಮಕೂರಿನ ಆರ್.ಟಿ.ನಗರದ ಚಿತ್ರಕಲಾ ಶಾಲೆಯ “ ರವೀಂದ್ರ ಕಲಾ” ಮಂದಿರದಲ್ಲಿ ನಡೆಯುವ ದ್ವೇಷ ರಾಜಕಾರಣ ಸೋಲಿಸಿ-ಸಂವಿಧಾನ ಉಳಿಸಿ ಅಭಿಯಾನದ ಬಗ್ಗೆ ದುಂಡು ಮೇಜಿನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಪ್ರಖ್ಯಾತ ಚಿಂತಕರು, ಅಂಕಣಕಾರರಾದ ಯೋಗೇಂದ್ರ ಯಾದವ್, ಶಿಕ್ಷಣ ತಜ್ಷರಾದ ಜಾವ್ಹೇದ್ ಅಕ್ತರ್ ಮತ್ತು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರುಗಳು ಭಾಗವಹಿಸಲಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭ್ರμÁ್ಟಚಾರ, ಬೆಲೆ ಏರಿಕೆ, ದ್ವೇಷರಾಜಕಾರಣ, ಜನಸಾಮಾನ್ಯರ ಸುಲಿಗೆ ಹಾಗೂ ನಮ್ಮ ಹೆಮ್ಮೆಯ ನಾಡನ್ನು ಎರಡನೇ ದರ್ಜೆ ರಾಜ್ಯವನ್ನಾಗಿಸುವುದರ ವಿರುದ್ಧ ಹಾಗೂ ಸಂವಿಧಾನದ ಉಳಿವಿಗಾಗಿ ತುಮಕೂರು ಜಿಲ್ಲೆಯಲ್ಲಿ ಅಭಿಯಾನ ಹಮ್ಮಿಕೊಳ್ಳುವ ಉದ್ದೇಶದಿಂದ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಮತ್ತು ಸಮಾನ ಮನಸ್ಕರ ದುಂಡು ಮೇಜಿನ ಸಭೆ ಕರೆಯಲಾಗಿದೆ.
ಇಂದಿನ ಉಸಿರುಗಟ್ಟಿದ ವಿಷಮಯ ರಾಜಕೀಯ ವಾತಾವರಣದಲ್ಲಿ, ನಮ್ಮ ನಾಡು ದೀರ್ಘ ಉಸಿರೆಳೆದುಕೊಂಡು ಚೇತರಿಸಿಕೊಳ್ಳುತ್ತದೆಯೊ ಇಲ್ಲವೊ ಎಂಬುದನ್ನು ಬರುವ ಚುನಾವಣೆ ನಿರ್ಧರಿಸುತ್ತದೆ. ಕಳೆದ 4 ವರ್ಷಗಳಲ್ಲಿ ರಾಜ್ಯವು ಕೆಡುಕಿನ ದಿನಗಳನ್ನು ಕಂಡಿದೆ. ಜನಮತ ಇಲ್ಲದಿದ್ದರೂ ಅಧಿಕಾರ ಕಬಳಿಸಿದ ಬಿಜೆಪಿ, ಈ ನಾಡಿಗೆ ತಂದದ್ದು ಅವನತಿ ಮಾತ್ರ.
ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಮತ್ತು ಸಮಾನ ಮನಸ್ಕರು ಭಾಗವಹಿಸಿ ಮುಕ್ತವಾಗಿ ವಿಚಾರಗಳನ್ನು ಹಂಚಿಕೊಳ್ಳಬೇಕೆಂದು ಸಂಚಾಲಕರಾದ ಡಾ.ಹೆಚ್.ವಿ.ರಂಗಸ್ವಾಮಿ ವಿನಂತಿಸಿದ್ದಾರೆ.