ತುಮಕೂರು : ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ: ಬಿ.ಯು. ಸುಮಾ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭೂಪಸಂದ್ರ ಗ್ರಾಮದವರಾದ ಡಾ: ಬಿ.ಯು. ಸುಮಾ ಪ್ರಸ್ತುತ ಬೆಂಗಳೂರು ಕೆಂಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024ರಲ್ಲಿ ಸರ್ಕಾರ ಇವರನ್ನು ಹಂಪಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.
ಕನ್ನಡ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿಗೆ ಡಾ: ಬಿ.ಯು. ಸುಮಾ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ. ವಿಮರ್ಶಕರು ಹಾಗೂ ಸಾಂಸ್ಕøತಿಕ ಚಿಂತಕರಾಗಿರುವ ಡಾ: ಬಿ.ಯು. ಸುಮಾ ಅವರು ಲಿಂಗವ್ಯವಸ್ಥೆ, ತತ್ವಶಾಸ್ತ್ರ, ಒಳಗೊಳ್ಳುವಿಕೆಯ ಚಿಂತನೆ ಮತ್ತು ಚಳುವಳಿ, ಆಧುನಿಕ ಸಮಾಜೋ- ಸಾಂಸ್ಕøತಿಕ ಚಿಂತನೆಗಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮಾತುಕತೆ, ಸಂತೆಯೊಳಗೊಂದು ಮನೆ, ಕಣ್ಣೊಳಗಣ ಕಟ್ಟಿಗೆ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ನೋಮ್ ಚಾಮ್ ಸ್ಕಿ-ಮನುಕುಲದ ಮಾತುಗಾರ, ಹೇರಾಮ್-ಭಾರತದ ಆತ್ಮಛೇದ ಕಥನ, ತಲಪರಿಗೆ-ತಳಸ್ತರದ ಸಾಂಸ್ಕøತಿಕ ಲೋಕಕ್ಕೊಂದು ಪಯಣ, ಅಂಗದಲ್ಲಿ ಅಗಮ್ಯ-ಮಹಿಳೆ ಬದುಕು ಮತ್ತು ಚಿಂತನೆ ಇತ್ಯಾದಿ ಪುಸ್ತಕಗಳನ್ನು ಸಂಪಾದಿಸಿದ್ದಾರೆ.
ಹಲವು ವರ್ಷಗಳ ಸಾಹಿತ್ಯ ಕೃಷಿಗೆ ಸಲ್ಲಿಸಿದ ಸೇವೆಗೆ ಡಾ: ಬಿ.ಯು. ಸುಮಾ ಅವರು ಹಲವಾರು ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ.