ತುಮಕೂರು: ಯಾವ ಸಮಾಜದಲ್ಲಿ ಸಹೋದರತ್ವ ಮತ್ತು ಸಾಮಾಜಿಕ ಸಮಾನತೆ ಇರುತ್ತದೆಯೋ ಆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಸಂವಿಧಾನದವು ಅಂತಹ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಗಳ ತತ್ವಗಳನ್ನು ಹೊಂದಿದೆ ಎಂದು ತುಮಕೂರಿನ ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ಶನಿವಾರ ತುಮಕೂರು ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ರವರ 69ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಸ್ವಾತಂತ್ರ್ಯ ಬಯಸುವ ಮೊದಲು ಸಾಮಾಜಿಕ ಸ್ವಾತಂತ್ರ್ಯ ಪಡೆಯಬೇಕು. ಇಲ್ಲವಾದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ. ಹಾಗಾಗಿ ಅಂಬೇಡ್ಕರ್ ನಮ್ಮ ದೇಶಕ್ಕೆ ಹೆಮ್ಮೆಯ ಸಂವಿಧಾನ ನೀಡಿದ್ದಾರೆ. ಜಾತಿಗಳ ನಿರ್ಮೂಲನೆಗೆ ಅಲ್ಲದೆ ಸ್ವತಂತ್ರ ಚಳುವಳಿಗೆ ಅಂಬೇಡ್ಕರ್ ಬಹು ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು.
ಸಮಾಜದಲ್ಲಿ ಅಸಮಾನತೆ ಹೆಚ್ಚಾದರೆ ದೇಶದ ಪ್ರಗತಿ ಎಂದೂ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜಾತಿಯನ್ನು ಮೀರುವ ಕೆಲಸ ಮಾಡಬೇಕು. ಆದರೆ ವಾಸ್ತವದಲ್ಲಿ ಜನರು ತಮ್ಮ ಹೆಸರಿನ ಮುಂದೆ ಜಾತಿಯನ್ನು ಇಟ್ಟುಕೊಳ್ಳುವುದು ರೂಡಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿ.ವಿ. ಕುಲಸಚಿವೆ ನಾಹಿದಾ ಜûಂ ಜûಂ ಮಾತನಾಡಿ, ಸಂವಿಧಾನವು ನಮಗೆ ಒಂದು ರಕ್ಷಣಾ ಕವಚವಿದ್ದಂತೆ. ಸÀಂವಿಧಾನದ ಹಕ್ಕು ಮತ್ತು ಸಮಾನತೆಗಳನ್ನು ತಿಳಿದರೆ ಅದು ಒಂದು ದೊಡ್ಡ ಶಕ್ತಿ. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆಯನ್ನು ಸ್ಪೂರ್ತಿಯ ದಿನವೆಂದು ಭಾವಿಸಬೇಕು ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೇಶವ ಸ್ವಾಗತಿಸಿದರು. ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ಉಪಸ್ಥಿತರಿದ್ದರು.