ನಾನು ಒಕ್ಕಲಿಗರ ನಾಯಕನಾಗುತ್ತೇನೆಂಬ ಭಯದಿಂದ ಕಾಂಗ್ರೆಸ್-ಜೆಡಿಎಸ್‍ನ ನಾಯಕರು ಕುತಂತ್ರದಿಂದ ಟಿಕೆಟ್ ತಪ್ಪಿಸಿದರು-ಎಸ್.ಪಿ.ಎಂ.

ತುಮಕೂರು : ನನ್ನ ಸಚ್ಛಾರಿತ್ರ ರಾಜಕೀಯದಿಂದ ನಾನು ಒಕ್ಕಲಿಗರ ನಾಯಕನಾಗಿ ಬಿಡುತ್ತೇನೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಒಂದಾಗಿ ಕುತಂತ್ರ ಮಾಡಿ ನನಗೆ 2019ರಲ್ಲಿ ಲೋಕಸಭಾ ಟಿಕೆಟ್ ತಪ್ಪಿಸಲಾಯಿತು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಎರಡು ಪಕ್ಷಗಳ ನಾಯಕರ ಮೇಲೆ ನೇರವಾಗಿ ಆರೋಪ ಮಾಡಿದರು.

ಅವರಿಂದು ನಾಗವಲ್ಲಿಯ ಬಾಣವಾರಗೇಟ್‍ನ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರ ಗೃಹಕಛೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಕ್ರಿಯಾಶೀಲ ಸಂಸದನಾಗಿದ್ದ ನನಗೆ ಟಿಕೆಟ್ ನಿರಾಕರಿಸಲಾಯಿತು, ಕಾಂಗ್ರೆಸ್ ನವರೇ ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಹೇಳಿದರು, ನಾನ ತಪ್ಪು ಮಾಡಿದ್ದೆ, ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಜೆಡಿಎಸ್ ನವರು ಬೇಡ ಅಂದ್ರು ಲೋಕಸಭಾ ಟಿಕೆಟ್ ಅನ್ನು ಒಪ್ಪಿಸಿ ಬಂದರು ಎಂದು ಮಾಜ ಸಂಸದ ಮುದ್ದಹನುಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

S.P.Mudda Hnumegowda Pressmeet speech

ಡಾ.ಜಿ.ಪರಮೇಶ್ವರ್ ಅವರು ನನ್ನ ಸಂಸದನಾಗಿ ಮಾಡಲು ಸಹಾಯ ಮಾಡಿದರು, 2018ರಲ್ಲಿ ಅವರು ಉಪಮುಖ್ಯಮಂತ್ರಿಯಾಗಲು, ಕೊರಟಗೆರೆಯಲ್ಲಿ ಶಾಸಕರಾಗಲು ನಾನು ಸಹಾಯ ಮಾಡಿಲ್ಲವೇ? ಅವರದ್ದು ದೊಡ್ಡ ಸಹಾಯ ಇರಬಹುದು, ನನ್ನದು ನಣ್ಣ ಅಳಿಲು ಸೇವೆ ಇರಬಹುದು, ಕೊರಟಗೆರೆಯ ಜನರನ್ನ ಕೇಳಿ, ನಾನೇನು ಮಾಡಿಲ್ಲ ಅಂತ ಹೇಳಲಿ ನೋಡೋಣ ಎಂದು ಸವಾಲು ಎಸೆದರು.

ಸಮ್ಮಿಶ್ರ ಸರ್ಕಾರದಲ್ಲಿದ್ದ ಜೆಡಿಎಸ್ ಗೆ ಸ್ಥಾನ ಕೇಳುವ ಹಕ್ಕಿತ್ತು, ಅವರು ಕೇಳಿದ್ದೇ ಇದ್ರು ಸಹ ನಮ್ಮವರೊಬ್ಬರು, ಜೆಡಿಎಸ್ ನವರು ಒಬ್ಬ ಕ್ರಿಯಾಶೀಲ ಸಂಸದನಿಗೆ ಅನ್ಯಾಯವಾಗಬಾರದು ಎನ್ನವ ಹೃದಯ ವೈಶಾಲತೆಯನ್ನು ತೋರಲಿಲ್ಲ, ದೇವೇಗೌಡರು, ಕುಮಾರಣ್ಣ ಯಾರು ತುಮಕೂರು ಬಿಟ್ಟು ಕೊಡಿ ಎಂದು ಕೇಳದಿದ್ದರು ಸಹ ಅಣ್ಣ ತಮ್ಮಂದಿರ ರಾಜಕೀಯ ಹಪಾಹಪಿತನದಿಂದ ನನಗೆ ಟಿಕೆಟ್ ತಪ್ಪಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಎಐಸಿಸಿ ಪ್ರಧಾನ ಕಾರ್ಯ ದರ್ಶಿಯಾಗಿದ್ದ ವೇಣುಗೋಪಾಲ್ ಅವರು ಸಮಧಾನ ಮಾಡಿ, ನಾಮಪತ್ರ ಹಿಂತೆಗೆಯುವಂತೆ ಹೇಳಿ, ರಾಜ್ಯಸಭೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರು, ನಾಮಪತ್ರ ಹಿಂತೆಗೆದುಕೊಂಡ ನಂತರ ಒಂದು ಪೋನ್ ಸಹ ಮಾಡಲಿಲ್ಲ. ಪಕ್ಷಕ್ಕಾಗಿ ಗಾಣದ ಎತ್ತುಗಳಂತೆÀ ದುಡಿಯುತ್ತಲೇ ಇರಬೇಕಾ? ಅಧಿಕಾರ ಕೊಡುವುದು ಬೇಡ, ಕತ್ತು ಹಿಸುಕಲು ಬಂದರೆ ಹೇಗೆ ಇರಬೇಕು, ಎಂದು ಪ್ರಶ್ನಿಸಿದರು.

ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ಎಲ್ಲ ವಿಚಾರಗಳನ್ನು ತಂದರೂ ಸಹ ಸುಮ್ಮನೆ ಇದ್ದರು, ಅವರು ನನಗೆ ಸಹಾಯ ಮಾಡದೆ, ಅವರು ವಿಧಾನ ಪರಿಷತ್ ಚುನಾವಣೆ ಬಂದರು ನನಗೆ ಅದನ್ನು ನೀಡಲಿಲ್ಲ, ಕನಿಷ್ಟ ಅದರ ಬಗ್ಗೆ ವಿಚಾರಿಸಲಿಲ್ಲ, ನಿರ್ಲಕ್ಷಕ್ಕೆ ಒಳಗಾದ ಜನ ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದರಿಂದಲೇ ಪಕಷಾಂತರÀ ಮಾಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *