ರಾಜಕೀಯ ವಿಡಂಬನೆ
ಈಗ್ಗೆ ಎರಡು ದಿನಗಳ ಹಿಂದೆ, ಸೂರ್ಯ ಮುಳುಗಿ ಊಟ ಮಾಡುವ ಸಮಯದಲ್ಲಿ ನಾಯಕರ ಮನೆಗೆ ಏದುಸಿರು ಬಿಡುತ್ತಾ ಓಡೋಡಿ ಬಂದ ಲಂಬೂ ಮ್ಯಾನ್ ನಾಯಕರು ಕಿವಿಯಲ್ಲಿ ಊದಿದ ಕೂಡಲೇ ಏದುಸಿರು ಬಿಡುತ್ತಾ ಲಂಬೂ ಮ್ಯಾನ್ ಕಾಣೆಯಾಗಿಬಿಟ್ಟರು!
20 ನಿಮಿಷದ ನಂತರ ಅದೇ ಏದುಸಿರು ಬಿಟ್ಟುಕೊಂಡು ನಾಯಕರ ಮನೆಗೆ ಏದುಸಿರು ಬಿಟ್ಟುಕೊಂಡು ಓಡೋಡಿ ಬಂದ ಲಂಬೂ ಮ್ಯಾನ್ ಬಂಗಾರ ಚಿನ್ನವಾಗುತ್ತಾ ಇರುವುದನ್ನು ಕಂಡು ಥೈಯ ಥೈಯ ಥಕಾ ಎಂದು ಎಂದು ಕುಣಿದು ಕುಪ್ಪಣಿಸಿದರಂತಲ್ಲ ತಿಪ್ಪೇಶ್ವರ.

ಆಹಾ ಬಂಗಾರ ಚಿನ್ನವಾಗುತ್ತದೆ ಎಂದು ಅಂದುಕೊಂಡಿರದ ಲಂಬೂ ಮ್ಯಾನ್, ನಾಯಕರಿಗೆ ಸಾಷ್ಠಾಂಗ ನಮಸ್ಕಾರ ಮಾಡಿ ಬಿಟ್ಟರಂತಲ್ಲ, ಚಿನ್ನ ಗಟ್ಟಿಯೋ, 22 ಕ್ಯಾರೆಟೋ ಎಂಬುದು ಶುಕ್ರವಾದೊಳಗೆ ಮಜ್ಜಿಗೆಯೊಳಗೆ ಕಾಣಿಸಿಕೊಳ್ಳುತ್ತಿದೆಯಂತಲ್ಲ ತಿಪ್ಪೇಶ್ವರ.
ಪಾಪ ಇದ್ಯಾವುದರ ಪರಿವೇ ಇಲ್ಲದ ಅತೀ ಮತ್ತು ಪರಮಾನ್ನ ಅವರು ಕ್ಯಾ ಅಟಿಕಾ ಗೋಲ್ಡ್ ಹೈ, ಮೇರಾ ಟಿಕೆಟ್ ಆಗಾಯ ಅಂತ ಇರುವಾಗಲೇ ಲಂಬೂ ಮ್ಯಾನ್‍ಗೆ ಬಂಗಾರ ಚಿನ್ನವಾಯಿತಂತಲ್ಲ, ತಿಪ್ಪೇಶ್ವರ, ಈಗಾಗಲೇ ಬಂಗಾರವನ್ನು ಚಿನ್ನ ಮಾಡಿಕೊಂಡವರು ಬೊಮ್ಮನಹಳ್ಳಿ ಆಟಿಕೆಯನ್ನು ಡೆಲ್ಲಿ ಟೇಬಲ್ ಮೇಲೆ ಆಡಿಸಿ ನೋಡು ಬೀಳಿಸಿ ನೋಡು ಎಂದು ಆಟವಾಡುತ್ತಿದ್ದಾರಂತಲ್ಲ ತಿಪ್ಪೇಶ್ವರ.
ಇದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡು ನಾಯಕರ ಮನೆಗೆ ಏದುಸಿರು ಬಿಟ್ಟುಕೊಂಡು ಬಂದ ಲಂಬೂಮ್ಯಾನ್, ನಾಯಕರ ಬಂಗಾರದ ಮಾತಿಗೆ ಚಿನ್ನದ ಭಾಷೆ ಕೊಟ್ಟು ಬಿಟ್ಟರಂತಲ್ಲ ತಿಪ್ಪೇಶ್ವರ.
ಈ ರೀತಿ ಬೊಮ್ಮನಹಳ್ಳಿ ಆಟಿಕಾ ಬೊಂಬೆಗೆ ಗೋವಿಂದ ಗೋವಿಂದ ಎಂದರೆ ತುಮಕೂರು ಸಾಮ್ರಾಜ್ಯವನ್ನು ಉಳಿಸುವವರು ಯಾರು ಎಂದು ಅಂಗೈ ಹಿಸುಕಿಕೊಳ್ಳುತ್ತಾ ಚಿನ್ನ ಸಿಗದ ಪ್ರಶಾಂತ್ ಟಾಕೀಸ್ ಟಿಕೇಟು ಸಿಗದೆ ಅರೆ ಗೋವಿಂದ ಅರೆ ಗೋವಿಂದ ಎಂದು ಜಪವೊಂದೇಯಂತೆ, ಲಂಬೂ ಮ್ಯಾನ್‍ಗೆ ಸಿಕ್ಕ ಚಿನ್ನ ನಮಗೂ ಸಿಗಬಹುದೇ ಎಂಬ ಲೆಕ್ಕಚಾರವೇನಾದರೂ ಇದೆಯೇ ತಿಪ್ಪೇಶ್ವರ, ನಾಯಕರ ಮನೆಯಿಂದ ಬಂದ ಲಂಬೂ ಮ್ಯಾನ್ ಚಂದ್ರಮಾನದಲ್ಲಿ ದಿಲ್‍ಪಸಂದ್ ತಿಂದುಕೊಂಡು ದಿಲ್ ಖುಷಿಯಾಗಿದ್ದಾರಂತಲ್ಲ, ಹಾಗಾದರೆ ಈ ಲಂಬೂ ಮ್ಯಾನ್ ಯಾರು ತಿಪ್ಪೇಶ್ವರ…..!….?
-ವೆಂಕಿ