ತುಮಕೂರು- ನಗರದ ಟೌನ್‍ಹಾಲ್ ವೃತ್ತದಲ್ಲಿ ರಾತ್ರಿ ಹೋಟೆಲ್ ನಡೆಸುತ್ತಿದ್ದ ಕುಮಾರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಗರದ ವಿನಾಯಕನಗರದ 1ನೇ ಕ್ರಾಸ್‍ನಲ್ಲಿರುವ ತಮ್ಮ ಮನೆಯಲ್ಲಿ ಕುಮಾರಣ್ಣ ಅವರಿಗೆ ಬುಧವಾರ ಮಧ್ಯರಾತ್ರಿ ಹೃದಯಾಘಾತವಾಗಿದ್ದು, ತಕ್ಷಣ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ಶ್ರೀಯುತರು ಪತ್ನಿ ನೇತ್ರಾವತಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತಃ ಗುಬ್ಬಿ ತಾಲ್ಲೂಕು ನಿಟ್ಟೂರು ಸಮೀಪದ ಕಡಬದವರಾದ ಕುಮಾರಣ್ಣ ಅವರು ಹಲವು ವರ್ಷಗಳಿಂದ ನಗರದ ಟೌನ್‍ಹಾಲ್ ವೃತ್ತದಲ್ಲಿ ನೈಟ್ ಹೋಟೆಲ್ ನಡೆಸುತ್ತಿದ್ದರು. ರಾತ್ರಿ ವೇಳೆ ತಮ್ಮ ಹೋಟೆಲ್ ಬಳಿ ಬರುತ್ತಿದ್ದ ವೃದ್ಧರು, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಉಚಿತವಾಗಿಯೇ ಊಟವನ್ನು ನೀಡುತ್ತಿದ್ದರು. ಜತೆಗೆ ಹೋಟೆಲ್‍ನಲ್ಲಿ ಕಡಿಮೆ ದರದಲ್ಲಿ ಊಟ ನೀಡುತ್ತಿದ್ದರು.
ಶ್ರೀಯುತರ ಅಂತ್ಯಕ್ರಿಯೆಯು ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಸಮೀಪದ ಬಡೇಸಾಬರಪಾಳ್ಯದ ಬಳಿ ಇರುವ ಅವರ ತೋಟದಲ್ಲಿ ಇಂದು ಗುರುವಾರ ಮಧ್ಯಾಹ್ನ ನೆರವೇರಿತು.