ಮೌಢ್ಯತೆಯಿಂದ ಹೊರ ಬಂದ ಕುಟುಂಬಕ್ಕೆ ನ್ಯಾಯಾಧೀಶರಿಂದ ಸನ್ಮಾನ

ತುಮಕೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಹಯೋಗದಲ್ಲಿ ಜಿಲ್ಲೆಯ ಲಕ್ಕನಹಳ್ಳಿಯ ಹಟ್ಟಿಯಲ್ಲಿ ಆಗಸ್ಟ್ 16 ರಂದು ‘ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ್ ರವರು  ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಉದ್ಘಾಟಿಸಿದರು.

 ಕರ್ನಾಟಕ ಅಮಾನವೀಯ ಕೆಟ್ಟ ಪದ್ಧತಿ ಪ್ರತಿಬಂಧ ಮತು ನಿರ್ಮೂಲನೆ ಅಧಿನಿಯಮ-2017 ಹಾಗೂ ಇನ್ನಿತರ  ಕಾನೂನುಗಳ  ಬಗ್ಗೆ ಗ್ರಾಮಸ್ಥರೊಂದಿಗೆ ನ್ಯಾಯಾಮೂರ್ತಿಗಳು ಸಂವಾದ ನಡೆಸಿದರು,  ನಂತರ ‘ಡಮರುಗ ಕಲಾವಿದರ ತಂಡದಿಂದ ‘ಮುಟ್ಟಾದಳು ಪುಟ್ಟಿ ‘ ಎಂಬ ಮೌಢ್ಯತೆ ವಿರುದ್ಧ ನಾಟಕ ಹಮ್ಮಿಕೊಂಡು ಸಮಾಜದ ಮೌಢ್ಯತೆಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು

ಸನ್ಮಾನ: ಲಕ್ಕನಹಳ್ಳಿಯ ಹಟ್ಟಿಯಲ್ಲಿ ಐದು ಕುಟುಂಬದವರು ಅವರ ಕುಟುಂಬದ ಬಾಣಂತಿ ಮಗುವನ್ನು ಮನೆಯ ಹೊರಗಿಡದೆ ಆಸ್ಪತ್ರೆಯಲ್ಲಿ ಹೆರಿಗೆ ಆದ ನಂತರ ಕರೆತಂದು ಮನೆಯಲ್ಲಿಟ್ಟಿರುವ ಮಾಹಿತಿ ತಿಳಿದ ನ್ಯಾಯಾದೀಶರು, ಕುಟುಂಬದವರನ್ನು ಸಾರ್ವಜನಿಕವಾಗಿ ಅಭಿನಂದಿಸಿ, ಶ್ಲಾಘಿಸಿದರು.

 ಈ ಸಂದರ್ಭದಲ್ಲಿ ಸ್ಥಳೀಯ  ಜನಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *