
ತುಮಕೂರು:ಕೊಬ್ಬರಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳು ಕರ್ನಾಟಕ ಸರ್ಕಾರ ಮಧ್ಯಪ್ರವೇಶ ಮಾಡಿ ರಾಜ್ಯ ಪಟ್ಟಿಯಲ್ಲಿ ಬರುವ ಕೃಷಿಯನ್ನು ಮತ್ತು ರೈತರನ್ನು ಉಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ||ಜಿ. ಪರಮೇಶ್ವರ್ ಮತ್ತು ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ. ಸುರೇಶ್‍ಗೌಡ ಅವರುಗಳಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಚಾಲಕ ಸಿ. ಯತಿರಾಜು ಮಾತನಾಡಿ. “ಕೃಷಿಯು” ಸಂವಿಧಾನ ಪ್ರಕಾರ ರಾಜ್ಯಗಳ ಪಟ್ಟಿಯಲ್ಲಿದೆ, ಕೊಬ್ಬರಿ ಬೆಂಬಲ ಬೆಲೆಯೂ ಸೇರಿದಂತೆ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿರ್ಧರಿಸುವ ಪರಮಾಧಿಕಾರ, ಕೃಷಿ ಸಂಬಂಧಿ ಕಾನೂನುಗಳು, ನೀತಿಗಳನ್ನು ನಿರ್ಣಯಿಸುವ ಅಧಿಕಾರವನ್ನು ನಮ್ಮ ಸಂವಿಧಾನ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರಸರ್ಕಾರ ಕೃಷಿ ಸಂಬಂಧಿ ಶಾಸನಗಳನ್ನು ನೀತಿಗಳನ್ನು ರೂಪಿಸುವ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟನ್ನು ಹಾಕಿರುವುದರ ವಿರುದ್ದ ದ್ವನಿ ಎತ್ತ ಬೇಕೆಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾದ್ಯಮಗಳೊಂದಿಗೆ ಮಾತನಾಡಿ ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆದು. ವಾಯುಗುಣ ವೈಪರಿತ್ಯ ತಾಳಿಕೆಯ ಕೃಷಿ ನೀತಿ ಜಾರಿಗೆ ತಂದು ತೆಂಗು ಬೆಳೆಯ ಅಸ್ತಿತ್ವಕ್ಕೆ ಗಂಡಾಂತರಕಾರಿಯಾಗಿರುವ ಎಲೆ ಸುರುಳಿ ರೋಗ, ಕೆಂಪು ಮತ್ತು ಕಪ್ಪು ಮೂತಿಹುಳುಗಳ ಭಾದೆ ಸುರುಳಿ ಪೂಚಿರೋಗ, ರಸ ಸೋರುವ ರೋಗ, ಮುಂತಾದ ರೋಗಗಳಿಗೆ ತುತ್ತಾಗಿ ತೆಂಗಿನ ಇಳುವರಿ ಕೂಡ ಕಡಿಮೆಯಾಗುತ್ತಾ ಸಾಗಿದೆ. ಇವುಗಳ ಪರಿಣಾಮಕಾರಿ ನಿಯಂತ್ರಣಕ್ಕೆ ಅಗತ್ಯ ಔಷಧಿಗಳನ್ನು ಪೋಷಕಾಂಶಗಳನ್ನು ಉಚಿತವಾಗಿ ಇಲ್ಲವೆ ಕಡಿಮೆ ಬೆಲೆಯಲ್ಲಿ ತೆಂಗು ಬೆಳೆಗಾರರಿಗೆ ದೊರಕುವಂತೆ ಮಾಡಬೇಕೆಂದರು.
ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಿ. ನಫೇಡ್ ಖರೀದಿ ಕೇಂದ್ರಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಬೇಕು. ಕೊಬ್ಬರಿಗೆ ಮತ್ತು ತೆಂಗು ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಬೇಡಿಕೆ ವರ್ಧಿಸಲು ಎಲ್ಲ ಅಗತ್ಯ ಕ್ರಮಕೈಗೊಳ್ಳುವುದು.
ತೆಂಗು ಬೆಳೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಬೆಳೆವಿಮೆ ಜಾರಿಯಾಗಲಿ. ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಸಂಯುಕ್ತ ಹೋರಾಟ ಕರ್ನಾಟಕದ ನಿಯೋಗದೊಂದಿಗೆ ವಿವರವಾದ ಸಮಗ್ರ ಚರ್ಚೆ ನಡೆಸಿ ಅಗತ್ಯ ಪರಿಹಾರಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಒತ್ತಾಯದ ಹಕ್ಕೊತ್ತಾಯ ಮಾಡಲಾಯಿತು.
ಸಂಯುಕ್ತ ಹೋರಾಟ-ಕರ್ನಾಟಕ, ತುಮಕೂರು ಜಿಲ್ಲಾ ಘಟಕದ ನಿಯೋಗದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ óಷಬ್ಬೀರ್ ಪಾಷ, ರವೀಶ್, ಮೂಡ್ಲಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಅಜ್ಜಪ್ಪ, ಉಪಾಧ್ಯಕ್ಷ ಬಿ.ಉಮೇಶ್, ಎ.ಐ.ಕೆ.ಕೆ.ಎಂ.ಎಸ್. ಜಿಲ್ಲಾ ಸಂಚಾಲಕರಾದ ಎಸ್.ಎನ್.ಸ್ವಾಮಿ ಪ್ರಗತಿಪರ ಚಿಂತಕ ದೊರೈರಾಜು, ಎ. ನರಸಿಂಹಮೂರ್ತಿ, ಮುಂತಾದವರು ನೇತೃತ್ವವಹಿಸಿದ್ದರು.