
ನಾನು ಯಾರನ್ನೂ ಸೋಲಿಸಲು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಗೆಲ್ಲಲು ಬಂದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ನರಸೇಗೌಡ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಷ್ಟು ವರ್ಷ ಬೇರೆಯವರಿಗಾಗಿ ಪತ್ರಿಕಾಗೋಷ್ಠಿ ಈಗ ನನಗೋಸ್ಕರ ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ ಎಂದ ಅವರು, ತುಮಕೂರು ನಗರಕ್ಜೆ ವಿಶೇಷವಾದ ಅಭಿವೃದ್ಧಿ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಯಾವ ಪಕ್ಷದವರು ನನ್ನಂತಹ ಬಡ ಕಾರ್ಯಕರ್ತರಿಗೆ ಟಿಕೆಟ್ ಕೊಡಲ್ಲ, ತುಮಕೂರಿಗೆ ದುಡಿಯಲು ಬಂದೆ, ಸಣಸಣ ಗುತ್ತಿಗೆದಾರನಾದೆ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡೆ ಎಂದರು.
ನಾನು ಸಮಾಜ ಸೇವೆಯಿಂದ ರಾಜಕಾರಣಕ್ಕೆ ಬಂದಿದ್ದೇನೆ, 2 ದಶಕಗಳಿಂದ ಪಕ್ಷಕ್ಕೆ ದುಡಿದೆ, ಆ ಪಕ್ಷದ ನಾಯಕರಿಂದ ಬಿ ಫಾರಂ ಪಡೆಯುವ ಯೋಗ ನನಗೆ ಇರದೆ ಇರಬಹುದು ಎಂದರು.
ನಾನು ಯುವಕರೊಂದಿಗೆ ಪೋನ್, ಭೇಟಿ ಮಾಡುತ್ತಿದ್ದೇನೆ. ನರಸೇಗೌಡ ಕಣದಿಂದ ಹಿಂದೆ ಸರಿಯುತ್ತಾರೆ ಎನ್ನುತ್ತಿದ್ದರು, ನಾನು ಹಣ ಹೆಂಡ ಹಂಚುವುದಿಲ್ಲ, ನಾನು ಬಡವರಿಗೆ, ದೇವಸ್ಥಾನ ಗಳಿಗೆ ಸಹಾಯ ಮಾಡಿದ್ದೇನೆ ಎಂದರು.
ಯಾಕೆ ಗೆಲ್ಲುಸಬೇಕು, ಎಂದರೆ ತಳಮಟ್ಟದಿಂದ ಬಂದಿದ್ದೇನೆ, ಸಣ್ಣ ಗುತ್ತಿಗೆದಾರನಾಗಿ ಕೆಲಸ ಮಾಡಿರುವುದರಿಂದ ಎಲ್ಲ ಇಲಾಖೆ ಪರಿಚಯವಿದೆ.
ಹೇಮಾವತಿ ನೀರು ಇಲ್ಲದಿದ್ದರೂ ನೀರು ಒದಗಿಸುವ ಯೋಜನೆ, ಕಾಂಪಟೇಷನ್ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಕಭ್ಯ, ಸರ್ಕಾರಿ ಶಾಲೆಯನ್ನು ಕಾರ್ಪೊರೇಟ್ ಶಾಲೆಗಳನ್ನಾಗಿ ಮಾಡಕಾಗುವುದು, ಕೈಗಾರಿಕೋದ್ಯಮಿ ಗಳು ಸರ್ಕಾರಿ ಶಾಲೆಗೆ ಬಸ್ ಸೌಕರ್ಯ ಒದಗಿಸಲು ಇಚ್ಛಾಶಕ್ತಿ ಇದೆ.
ಅಂಗನವಾಡಿ ಕೇಂದ್ರಗಳ ನ್ನು ಕಟ್ಟಲಾಗುವುದು ಎಂದರು.
ಯಾರನ್ನು ನಾನು ದೋಷಿಸುವುದಿಲ್ಲ.
ನನಗೆ ಯಾರೂ ಉಮೇದುವಾರಿಕೆ ವಾಪಸ್ಸು ತೆಗೆಯಿರಿ ಎಂದು ಕೇಳಲಿಲ್ಲ, ರ್ಯಾಲಿಗೆ ಬನ್ನಿ ಎಂದಷ್ಟೇ ಹೇಳಿದರು, ಆದರೆ ಬೆಳಿಗ್ಗೆ ವೇಳೆಗೆ ನರಸೇಗೌಡ ವಾಪಸ್ಸು ತೆಗೆಯುತ್ತಾರೆ ಎಂದು ಹಬ್ಬಿಸಿದರು ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಬೊಮ್ಮನಹಳ್ಳಿ ಬಾಬು ನನ್ನ ಆರೋಗ್ಯ ಸರಿಯಿಲ್ಲದಾಗ ಬಂದು ಧೈರ್ಯ ತುಂಬಿದರು, ಅಟಿಕಾ ಬಾಬುರವರ ತಮ್ಮನಾಗಿ
ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ.
ನನಗೆ ಯಾರನ್ನು ಸೋಲುಸಬೇಕೆಂದಿಲ್ಲ, ನಾನು ಗೆಲ್ಲುವುದು ಮುಖ್ಯ ಎಂದರು.
ತಾವ ಪಕ್ಷದವರೂ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿಲ್ಲ.
ನನ್ನ ದುಡಿಮೆಗೆ ಪ್ರತಿಫಲ ಸಿಕ್ಕಿಲ್ಲ ಯಾರ ಹಂಗಿನಲ್ಲಿ ನಾನಿಲ್ಲ ಎಂದರು.