ಮಧುಗಿರಿ : ಶಾಸಕನಾಗಿ ಆಯ್ಕೆಯಾದ ರೆ ಅನುದಾನ ತರಬಹುದು, ಹೊಸ ಯೋಜನೆಗಳನ್ನು, ಸವಲತ್ತುಗಳನ್ನು ತರಬಹುದು, ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.
ಅವರಿಂದು ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.ಪ್ರವಾಸೋದ್ಯಮ ಕಾಯಕಲ್ಪವಾಗಿ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೂಪ್ ವೇ ಕಲ್ಪಿಸಲಾಗುವುದು , ಬೆಲ್ಲದಮಡು ಗೇಟ್ ನಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಭೂಸ್ವಾದೀನ ಕೂಡ ನಡೆದಿದೆ ಎಂದರು.
ಕೈಗಾರಿಕಾ ಪ್ರದೇಶದ ವಾದರೆ ತಾಲ್ಲೂಕಿನ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸಲಾಗುದು, ಎತ್ತಿನ ಹೊಳೆ ಕಾಮಗಾರಿ ನಡೆಯುತ್ತಿದ್ದು, ಅದು ಅನುಷ್ಠಾನ ಗೊಂಡು ಎಲ್ಲಾ ಕೆರೆಗಳಿಗೆ ಹರಿಸಲಾಗುವುದು ಎಂದರು.
ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾದರೆ ಸುಲಲಿತವಾಗಿ ಮಾಡಿಸಿಕೊಳ್ಳ ಬಹುದು ಎಂದರು.
ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯನವರು ಈ ಬಾರಿ ಪಂಚ ರತ್ನ ಯೋಜನೆ ಸಹಕಾರಿಯಾಗುವುದು ಎಂದರು.
ವೀರಭದ್ರಯ್ಯ ಅವರು ಈ ಬಾರಿ ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರ ರಚನೆಯಾಗಲಿದೆ ಎಂದರು.
ಈ ಹಿನ್ನೆಲೆ ಈ ಎಲ್ಲಾ ಕೆಲಸ ಮಾಡಲು 2018 ರಲ್ಲಿ ಆಶೀರ್ವಾದ ಮಾಡಿದಂತೆ, ಮೇ 10ರಂದು ನಡೆಯುವ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಜೆಡಿಎಸ್ ಮುಖಂಡ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಚೆನ್ನಿಗಪ್ಪನವರು ನಿಂತಿದ್ದಾಗ ಮಾತ್ರ ಅವರ ವರ್ಚಸ್ಸು ಮೇಲೆ ಸ್ವಲ್ಪ ಮತಗಳು ಬಿದ್ದಿದ್ದವು, ಜೆಡಿಎಸ್ ಅಭ್ಯರ್ಥಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಲಿದ್ದಾರೆ ಎಂದರು.
ತಾಲ್ಲೂಕು ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಡಿ.ಆರ್.ಬಸವರಾಜಮಾಡಿದ್ದಾರೆ 1400 ಕೋಟಿ ಅನುದಾನ ವನ್ನು ಶಾಸಕ ವೀರಭದ್ರ ಯ್ಯ ತಂದು ಅಭಿವೃದ್ಧಿ ಮಾಡಿದ್ದಾರೆ, ಸರಳ ಸಜ್ಜನಿಕೆಯ ಅಭ್ಯರ್ಥಿ ವೀರಭದ್ರಯ್ಯ ಪ್ರತಿಯೊಬ್ಬ ರಿಗೂ ಸ್ಪಂದಿಸಿ ಕೆಲಸ ಮಾಡಿದ್ದಾರೆ.ತಾಲ್ಲೂಕಿನ ಲ್ಲಿ ಪೊಲೀಸರಿಗೆ ನೆಮ್ಮದಿಯಂತಹ ಶಾಂತಿ ಕಾಪಾಡಲಾಗಿದೆ ಎಂದರು.
ಎತ್ತಿನ ಹೊಳೆ ಯೋಜನೆ ಅನುಷ್ಠಾನ ಗೊಳ್ಳುತ್ತಿದ್ದು, ಎಲ್ಲಾ ಕೆರೆಗಳಿಗೆ ನೀರು ಹರಿದು ಬರ ನೀಗಲಿದೆ ಎಂದರು.