ವಿಧಾನಸೌಧ ಕಟ್ಟಿದ ಕೆಂಗಲ್‍ಹನುಮಂತಯ್ಯ ಆಡಳಿತ ನಡೆಸದಂತೆ ಹೊರ ಹಾಕಿದರು-ಡಾ.ಶ್ರೀನಿರ್ಮಲಾನಂದನಾಥಸ್ವಾಮೀಜಿ

  ಉಚಿತ ಬಾಲಕರ ವಸತಿ ನಿಲಯ ಉದ್ಘಾಟನೆ

ತುಮಕೂರು.ಡಿ.12: .ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯನವರನ್ನು ಅದರೊಳಗೆ ಕೂತು ಆಡಳಿತ ನಡೆಸದಂತೆ ನಮ್ಮವರೇ ಸಂಚು ಮಾಡಿ ಹೊರಹಾಕಿದರು ಹಾಗೂ ದಕ್ಷಿಣ ಭಾರತದ ಮೊದಲ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ನಮಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದು ಅಧಿಕಾರದಿಂದ ಕೆಳಗೆ ಇಳಿಸಿದರು ಎಂದು ಆದಿಚುಂಚನಗಿರಿ ಸಂಸ್ಥಾನ ಪೀಠದ ಡಾ.ಶ್ರೀನಿರ್ಮಲಾನಂದನಾಥಸ್ವಾಮೀಜಿ

ನಗರದ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿರುವ ಕೃಷ್ಣಾ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಿರ್ಮಾಣಗೊಂಡಿರುವ ಉಚಿತ ಬಾಲಕರ ವಸತಿ ನಿಲಯ ಹಾಗೂ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಒಕ್ಕಲಿಗರ ಸಮುದಾಯ ಹಲವಾರು ಶ್ರೇಷ್ಠತೆಗಳಿರುವ ಸಮುದಾಯ. ಇಡೀ ದಕ್ಷಿಣ ಭಾರತವನ್ನು ಆಳಿದ ಗಂಗರು ಒಕ್ಕಲಿಗ ಸಮುದಾಯದವರು.ಆನಂತರದಲ್ಲಿ ಪ್ರತಿಷ್ಠೆ ಮತ್ತಿತರ ವಿಚಾರಗಳಿಗಾಗಿ ಪಂಗಡ ಉಪಪಂಗಡಗಳ ನಡುವಿನ ಅಂತರಿಕ ಭಿನ್ನಾಭಿ ಪ್ರಾಯದಿಂದ ಹರಿದು ಹಂಚಿಹೋದ ಸಮುದಾಯವನ್ನು ಒಂದು ವೇದಿಕೆಗೆ ತಂದು,ಒಕ್ಕಲಿಗರ ಮಹಾಸಂಗಮ ಮಾಡುವ ಉದ್ದೇಶ ನಮ್ಮದಿದೆ ಇಷ್ಟೆಲ್ಲದ ನಡುವೆಯೂ ನಾವು ನಮ್ಮ ಸ್ವಾಭಿಮಾನವನ್ನು ಬಿಟ್ಟು ನಡೆದ ಉದಾಹರಣೆಗಳಿಲ್ಲ. ಅಂತಹ ಗಟ್ಟಿತನ ನಮ್ಮ ಸಮುದಾಯದಲ್ಲಿದೆ.ಟೀಕೆಗಳಿಗೆ ಧೈರ್ಯ ಗೆಡದೆ, ಸಹನೆಯ ಜೊತೆಗೆ,ಸುಗಮ ಆಡಳಿತ ನೀಡುವ ಗುರುತರ ಜವಾಬ್ದಾರಿ ರಾಜ್ಯ ಒಕ್ಕಲಿಗರ ಸಂಘದ ಮೇಲಿದೆ ಎಂದು ಸ್ವಾಮೀಜಿ ನುಡಿದರು.

ವಿವೇಕಾನಂದರ ಮಾತಿನಂತೆ ಸಂಘಟನೆಗಾಗಿ ರಾಜ್ಯ ಒಕ್ಕಲಿಗರ ಸಂಘ ಮತ್ತು ಧಾರ್ಮಿಕ, ಆದ್ಯಾತ್ಮಿಕ ಸಂಸ್ಕಾರಕ್ಕಾಗಿ ಆದಿಚುಂಚನಗಿರಿಯನ್ನು ಕೆ.ಹೆಚ್.ರಾಮಯ್ಯ ಆರಂಭಿಸಿದ್ದರ ಫಲ,ಇಂದು ನಾವು,ನೀವು ಎಲ್ಲರೂ ಒಂದೆಡೆ ಸೇರುವಂತಾಗಿದೆ.
ಒಕ್ಕಲಿಗರ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ 1906ರಲ್ಲಿ ಕೆ.ಹೆಚ್.ರಾಮಯ್ಯ ಅವರಿಂದ ಆರಂಭವಾದ ಒಕ್ಕಲಿಗರ ಸಂಘ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು,ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ,ಸಾಮಾಜಿಕವಾಗಿ,ಅರ್ಥಿಕವಾಗಿ ಮುನ್ನೆಡೆಸುವಲ್ಲಿ ಯಶಸ್ವಿಯಾಗಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಪೀಠದ ಡಾ.ಶ್ರೀನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.

ಅಭಿವೃದ್ದಿ ಎಂಬುದು ನಿರಂತರ.ಒಂದು ಸಂಘದಲ್ಲಿ ಹಿಂದಿನವರ ಕಾಲದಲ್ಲಿ ಆರಂಭವಾದ ಕೆಲಸಗಳು, ಈಗಿನವರ ಕಾಲದಲ್ಲಿ ಮುಕ್ತಾಯಗೊಂಡು,ಉದ್ಘಾಟನೆಯಾದರೆ,ಇಂದಿನವರು ಆರಂಭಿಸಿದ ಕೆಲಸವನ್ನು ಮುಂದೆ ಬಂದವರು ಉದ್ಘಾಟಿಸುತ್ತಾರೆ. ಹಾಗಾಗಿ ಸಂಘದ ಮೂಲಕ ಸಮುದಾಯಕ್ಕೆ ಶಾಶ್ವತ ಆಸ್ತಿ ಹೊಂದಲು ಸಹಕರಿಸಿದ ಎಲ್ಲರನ್ನು ನಾವು ನೆನೆಯಬೇಕಿದೆ. ನಮ್ಮಲ್ಲಿರುವ ಒಡಕು ಇತರರಿಗೆ ಕಾಣದಂತೆ ಒಗ್ಗಟ್ಟು ಪ್ರದರ್ಶಿಸಬೇಕಿದೆ.ಇದರಿಂದ ಸಂಘಕ್ಕೂ ಗೌರವ, ಸಮುದಾಯಕ್ಕೂ ಗೌರವ ಎಂದು ಕಿವಿಮಾತನ್ನು ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ,ಸಂಘ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.ನಗರಸಭೆ ನೀಡಿದ್ದ 9 ಗುಂಟೆ ಜಾಗದಲ್ಲಿ ಒಂದು ಸಮುದಾಯ ಭವನದ ಜೊತೆಗೆ,200 ಜನ ಗಂಡು ಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯಕಟ್ಟಲಾಗಿದೆ. ನಮ್ಮ ಹಿರಿಯರ ಆಸೆಯಂತೆ ಹಾಸ್ಟಲ್‍ಗಳು, ಅವುಗಳ ನಿರ್ವಹಣೆಗಾಗಿ ಸಮುದಾಯಭವನಗಳ ನಿರ್ಮಾಣ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಉಪವಿಭಾಗಗಳಲ್ಲಿಯೂ ಈ ರೀತಿಯ ಭವನಗಳು ತಲೆ ಎತ್ತಲಿವೆ. ಇದರ ಜೊತೆಗೆ, ಮಾಗಡಿ ರಸ್ತೆಯ ಶ್ರೀಗಂಧದ ಕಾವಲು ಬಳಿ ಇರುವ 40 ಎಕರೆ ಜಾಗದಲ್ಲಿ ಒಂದು ಆಯುರ್ವೇಧ,ಒಂದು ಇಂಗ್ಲಿಷ್ ಮೆಡಿಸನ್,ಒಂದು ನರ್ಸಿಂಗ್,ಒಂದು ಔಷಧ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯನ್ನು ತೆರೆಯಲು ತೀರ್ಮಾನಿ, ಬರದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ.ಜನಾಂಗದ ಶೈಕ್ಷಣಿಕ ಹಿತದ ಜೊತೆಗೆ, ಜನಾಂಗದ ನೌಕರರ ಹಿತವನ್ನು ಸಹ ಸಂಘ ಕಾಯುತ್ತಿದೆ.ಶೀಘದಲ್ಲಿಯೇ ಆದಿಚುಂಚನಗಿರಿ ಸ್ವಾಮೀಜಿಗಳ ಆಶಯದಂತೆ ಒಕ್ಕಲಿಗರ ಮಹಾಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಶ್ರೀಗಂಧ ಕಾವಲ ವಿದ್ಯಾಸಂಸ್ಥೆಗಳ ಅಧ್ಯಕ್ಷ ಆರ್.ಹನುಮಂತರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *