ತುಮಕೂರು: ಯೋಗರಾಜ್ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ ಪದವಿಪೂರ್ವ’ ಚಲನಚಿತ್ರವು ಡಿ.30 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಿಳಿಸಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ನಾನು ತುಮಕೂರಿನವನೆ ಆಗಿದ್ದು, ಹದಿ ಹರೆಯದ ಯುವಕರು ತಮ್ಮ ಪಿಯುಸಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ನಡೆಯುವ ಟಿನೇಜ್ ಘಟನೆಗಳನ್ನು ಹೊಂದಿರುವ ಈ ಸಿನಿಮಾವೂ ನಿಮ್ಮನ್ನು ಮತ್ತೆ ಆ ಲೋಕಕ್ಕೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಗಿದೆ ಎಂದರು. ಚಿತ್ರದ ನಾಯಕನಾಗಿ ಪೃಥ್ವಿ ಶಾಮನೂರ್ ಹಾಗೂ ನಾಯಕಿಯಾಗಿ ಅಂಜಲಿ ಅನೀಶ್ ಸೇರಿದಂತೆ ಹೊಸ ಯುವಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ ಎಂದರು. ಈ ಚಿತ್ರದಲ್ಲಿ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಇಂಪಾದ ಐದು ಹಾಡುಗಳಿವೆ . ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಬಂಡವಾಳ ಹೂಡಿದ್ದಾರೆ ಎಂದರು.

ಇದೇ ಡಿಸೆಂಬರ್ 30 ಕ್ಕೆ ರಾಜ್ಯಾದ್ಯಂತ 120 ಚಿತ್ರಮಂದಿಗಳಲ್ಲಿ ಪ್ರದರ್ಶನ ಗೊಳ್ಳಲಿದೆ. ಚಿತ್ರ ಪ್ರೇಕ್ಷಕರು ಥಿಯೇಟರ್ ಗಳಲ್ಲಿ ಬಂದು ಸಿನಿಮಾ ನೋಡಿ ಹರಸಿ ಎಂದು ಮನವಿ ಮಾಡಕೊಂಡರು.
ನಾಯಕ ನಟ ಪೃಥ್ವಿ ಶಾಮನೂರ್ ಮಾತನಾಡಿ, ನಾನು ಚಿಕ್ಕ ವಯಸ್ಸಿನಲ್ಲಿಂದಲೂ ಸಿನಿಮಾ ಒಂದರಲ್ಲಿ ನಟಿಸಬೇಕು ಎಂಬ ಕನಸಿತ್ತು ಅದು ಈ ಚಿತ್ರದಲ್ಲಿ ಕೈಗೂಡಿದೆ. ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡದ ಕಲಾವಿದರು ಉಪಸ್ಥಿತರಿದ್ದರು.