ಕೊರಟಗೆರೆ: ಉದ್ಯೋಗ ಮೇಳಕ್ಕೆ ಚಾಲನೆ

ಕೊರಟಗೆರೆ: ಕೊರಟಗೆರೆಯಲ್ಲಿ ಉದ್ಯೋಗ ಮೇಳಕ್ಕೆ ಡಾ. ಜಿ.ಪರಮೇಶ್ವರ್ ಅವರಿಂದ ಚಾಲನೆತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಡಾ.ಜಿ. ಪರಮೇಶ್ವರ ಫೌಂಡೇಶನ್, ಹಾಲಪ್ಪ ಪ್ರತಿಷ್ಠಾನ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಆರಂಭವಾಗಿದೆ.

ಕೊರಟಗೆರೆ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಮೇಳಕ್ಕೆ ಚಾಲನೆ ನೀಡಿದರು.

ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿರುವ ಉದ್ಯೋಗಾಂಕ್ಷಿಗಳು ನೊಂದಣಿ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ.

60 ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಆಯಾ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗವನ್ನು ನೀಡಲು ಕಂಪನಿಗಳು ಮುಂದಾಗಿದ್ದಾವೆ. ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಿರುವ ಮೇಳವು ಸಂಜೆಯ ತನಕ ಉದ್ಯೋಗ ಆಕಾಂಕ್ಷಿಗಳನ್ನು ನೋಂದಣಿಯನ್ನು ಮಾಡಿಕೊಳ್ಳಲಿವೆ.

ಈ ಸಂದರ್ಭದಲ್ಲಿ ಹಾಲಪ್ಪ ಪ್ರತಿಷ್ಠಾನದ ಮುರಳೀಧರ ಹಾಲಪ್ಪ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ತಿಪ್ಪೆಸ್ವಾಮಿ, ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ್‍ಕುಮಾರ್, ಎಸ್‍ಎಸ್‍ಐಟಿ ಪ್ಲೇಸ್‍ಮೆಂಟ್ ಆಫೀಸರ್ ಅಶೋಕ್ ಮೆಹ್ತಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *