ಸಾಹಿತ್ಯದ ಸಮ್ಮೇಳನ ವಿಚಾರಕ್ಕಾಗಿ ಜಗಳವಾಗಲಿ, ಊಟಕ್ಕಾಗಿಯಲ್ಲ

ತುಮಕೂರು:ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರಗಳ ಚರ್ಚೆಗಾಗಿ ಜಗಳ ಆಗಬೇಕೇ ವಿನಹಃ ಊಟಕ್ಕಾಗಿ ಅಲ್ಲ.ಇತ್ತೀಚಿನ ದಿನಗಳಲ್ಲಿ ಸಾಹಿತ್ಯಕ್ಕಿಂತ ಊಟದ ವಿಷಯ ಸಾಹಿತ್ಯ ಗೋಷ್ಠಿಗಳನ್ನು ಆವರಿಸಿಕೊಂಡಿದ್ದು, ವಿಪರ್ಯಾಸ ಎಂದು ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ನಗರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕುವೆಂಪು ಸರ್ಕಲ್‍ನಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಕುವೆಂಪು ಅವರ 120ನೇ ಜನ್ಮ ಜಯಂತಿ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು,ಕನ್ನಡ ಸಂಘಟನೆಗಳು, ಸಾಹಿತ್ಯಾಸಕ್ತರು ಇಂತಹ ಚರ್ಚೆಗಳಿಗೆ ಅವಕಾಶ ನೀಡಿದರೆ ಸಾಹಿತ್ಯ ಜನಸಾಮಾನ್ಯರನ್ನು ತಲುಪಲು ಸಾಧ್ಯವೇ ಎಂದರು.

ಕುವೆಂಪು ಕರ್ನಾಟಕದಲ್ಲಿ ಇದ್ದುಕೊಂಡೇ ತಮ್ಮ ಕಾವ್ಯಗಳ ಮೂಲಕ ಇಡೀ ವಿಶ್ವವನ್ನು ತಲುಪಿದ್ದಾರೆ.ಆದರೆ ವಿದ್ಯೆಗಾಗಿ ವಿದೇಶಗಳಿಗೆ ಹೋಗುವ ಮಕ್ಕಳು ಅಲ್ಲಿಯೇ ಎರಡನೇ ದರ್ಜೆ ನಾಗರಿಕರಾಗಿ ನೆÀಲೆಸಿ,ಮೂಲಗಳನ್ನೇ ಮರೆಯುತ್ತಿದ್ದಾರೆ. ಪ್ರತಿಭಾ ಫಲಾಯನದ ಜೊತೆಗೆ,ಮತಾಂತರವೂ ಹೆಚ್ಚುತಿದ್ದು,ನಿಮ್ಮ ಮೊಮ್ಮಕ್ಕಳು,ಮರಿಮಕ್ಕಳ ಜಾಗವನ್ನು ಮತೊಂದು ಸಮುದಾಯ ಆವರಿಸಿಕೊಳ್ಳುತ್ತಿದೆ. ಭಾರತೀಯರನ್ನು ಭಾರತೀಯರಾಗಿಯೇ ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಎಚ್ಚೆತ್ತುಕೊಳ್ಳದಿದ್ದರೆ ಭಾರತೀಯರಿಗೆ ಉಳಿಗಾಲವಿಲ್ಲ ಎಂದು ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ನುಡಿದರು.

ಕುವೆಂಪು ನಾಸ್ತಿಕರಲ್ಲ.ಅವರ ಎಲ್ಲಾ ಕೃತಿಗಳಲ್ಲಿಯೂ ಆದ್ಯಾತ್ಮದ ಹೊಳವು ಇದೆ.ಕೆಲ ತಿಳಿಗೇಡಿಗಳು ಆಸ್ತಿಕರಾಗಿದ್ದ ಕುವೆಂಪು ಅವರನ್ನು ನಾಸ್ತಿಕರನ್ನಾಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.17ವರ್ಷ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಯಾಗಿದ್ದ ಕುವೆಂಪು,ತಮ್ಮ ಜೀವಿತದ 85ನೇ ವಯಸ್ಸಿನವರೆಗೂ ಆಶ್ರಮದ ಅನುಯಾಯಿಯಾಗಿದ್ದರು.ಬೆಂಗಾಳಿ ಭಾಷೆಯಲ್ಲಿದ್ದ ರಾಮಕೃಷ್ಣ ಮಿಷನ್‍ನ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ,ರಾಮಕೃಷ್ಣ ಪರಮಹಂಸರ ವಿಚಾರಧಾರೆ ಗಳನ್ನು ಜಗತ್ತಿಗೆ ತಿಳಿಯುವಂತೆ ಮಾಡಿದರು.ಕುವೆಂಪು ಅವರ ದೃಷ್ಟಿಯಲ್ಲಿ ಸೆಕ್ಯೂರಲಿಸಂ ಎಂಬುದಕ್ಕೆ ಬೇರೆಯದೇ ಆರ್ಥವಿದೆ.ಆದರೆ ಇಂದಿಗೂ ನನಗೆ ಸೆಕ್ಯೂಲರಿಸಂ ಮತ್ತು ಮೈನಾರಿಟಿ ಎಂಬುದಕ್ಕೆ ಸರಿಯಾದ ಅರ್ಥ ಗೊತ್ತಿಲ್ಲ ಎಂದು ರಾಜಕೀಯವಾಗಿ ಚರ್ಚೆಯಾಗುತ್ತಿರುವ ಎರಡು ವಿಚಾರಗಳ ಕುರಿತು ಮಾರ್ಮಿಕವಾಗಿ ನುಡಿದರು.

ಹೋರಾಟದ ಬದುಕು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಕೆ.ಜೈ ಪ್ರಕಾಶ್,ಮನುಜ ಮತ,ವಿಶ್ವಪಥದ ಮೂಲಕ ನಾಡಿಗೆ ಹೊಸ ದಿಕ್ಕು ತೊರಿಸಿದ ಕುವೆಂಪು ವಿಶ್ವಮಾನ್ಯರು.ತುಮಕೂರು ಕುವೆಂಪು ನಗರಕ್ಕೆ ತುಮಕೂರು ವಿವಿಯ ಕುಲಪತಿಯೊಬ್ಬರು ಹೊರಡಿಸಿದ್ದ ತೆರವು ಆದೇಶದ ವಿರುದ್ದ 21-01-2010ರಿಂದ 17-01-2012ರವರೆಗೆ ನಡೆದ ವಿವಿಧ ಹಂತದ ಪತ್ರ ವ್ಯವಹಾರ. ಹೋರಾಟದ ದಾಖಲೆಗಳನ್ನು ಹೋರಾಟದ ಬದುಕು ಕಿರು ಹೊತ್ತಿಗೆ ಒಳಗೊಂಡಿದೆ. ಕುವೆಂಪು ನಗರದ ಪ್ರತಿ ಮನೆಯಲ್ಲಿಯೂ ಈ ಹೊತ್ತಿಗೆಯನ್ನು ದಾಖಲೆಯಾಗಿ ಇಟ್ಟುಕೊಳ್ಳಬೇಕು.ಹಾಗೆಯೇ ಕುವೆಂಪು ನಗರದ ನೇತಾಜಿ ಪಾರ್ಕು ಒತ್ತುವರಿ ತೆರವಿಗೆ ಹೈಕೋರ್ಟಿನಲ್ಲಿ ಬಂದಿರುವ ತೀರ್ಪಿನ ಪ್ರತಿಯನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಬಿ.ಜೋತಿಗಣೇಶ ಮಾತನಾಡಿ,ಕುವೆಂಪು ನಗರದ ನಿವಾಸಿಗಳಿಗೆ ತೊಂದರೆ ಯಾದಾಗ ಅಂದು ಹೇಮಾವತಿ ಜಲಾಶಯದ ಮುಖ್ಯ ಇಂಜಿನಿಯರ್ ಆಗಿದ್ದ ಕೆ.ಜೈಪ್ರಕಾಶ್ ಕಾನೂನಾತ್ಮಕ ಹೋರಾಟ ನಡೆಸಿ,ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶ ಹಿಂಪಡೆಯುವಂತೆ ಮಾಡುವ ಮೂಲಕ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ.ರಾಜ್ಯದ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿ,ನೀರಾವರಿ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.ತುಮಕೂರಿನ ಅಭಿವೃದ್ದಿ ದೃಷ್ಟಿಯಲ್ಲಿ ಅವರನ್ನು ಬಳಸಿಕೊಳ್ಳಬೇಕಿದೆ.ಕುವೆಂಪು ಅವರ ದಾರಿಯಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಕುವೆಂಪು ನಗರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಕೆ.ಬಸವೇಗೌಡ ಮಾತನಾಡಿದರು.

ಕುವೆಂಪು ನಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಜಿ.ವಿ.ಶ್ರೀನಿವಾಸ್ ವರದಿ ಮಂಡಿಸಿದರು.ಒತ್ತುವರಿಯಾಗಿದ್ದ ಪಾರ್ಕು ತೆರವಿಗೆ ಹೈಕೋರ್ಟಿನಲ್ಲಿ ಕುವೆಂಪು ನಗರದ ಪರವಾಗಿ ವಕಾಲತ್ತು ವಹಿಸಿದ್ದ ವಕೀಲರಾದ ಬಿ.ಎನ್.ಜಗದೀಶ್ ಬಾಬು, ಕೆ.ವೆಂಕಟಸುಧೀರ್,ಎಂ.ಹೆಚ್.ಪ್ರಕಾಶ್,ಜಿ.ಎನ್.ನಾರಾಯಣ್ ಅವರುಗಳನ್ನು ಸಂಘದವತಿಯಿಂದ ಅಭಿನಂದಿಸ ಲಾಯಿತು. ಮಾಜಿ ಮೇಯರ್ ಶ್ರೀಮತಿ ಲಲಿತ ರವೀಶ್,ಡಾ.ಜಿ.ವೆಂಕಟೇಶ್, ಸಂಘದ ಕಾರ್ಯದರ್ಶಿ ಆರ್.ಎಸ್.ಚಂದ್ರಶೇಖರರಾವ್, ಬಿ.ರಾಜಣ್ಣ,ಬಿ.ರಾಜಶೇಖರಯ್ಯ,ಕೆ.ಗುಂಡಪ್ಪ, ಎನ್.ಜಿ.ಮಹಲಿಂಗಪ್ಪ,ವಿಶ್ವನಾಥಸ್ವಾಮಿ ಸೇರಿದದಂತೆ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನಡೆಯಿತು.ಕಲಾಸಿರಿ ಸಾಂಸ್ಕøತಿಕ ವೇದಿಕೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *