
ತುಮಕೂರು : ಮಾರ್ಚ್ 5ರಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತುಮಕೂರಿಗೆ ಆಗಮಿಸುವ ಸಂಬಂಧ ಪತ್ರಿಕಾಗೋಷ್ಠಿ ಕರೆದಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಹೇಳಿದ ಮಾತು ಈಗ ನಿಜವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಶಾಸಕರನ್ನು ನಿಮಗೆ ತುಮಕೂರು ನಗರ ಕ್ಷೇತ್ರದಿಂದ ಟಿಕೆಟ್ ಸಿಗುವುದಿಲ್ಲವಂತೆ ಎಂದು ಪದೇ ಪದೇ ಪ್ರಶ್ನಿಸಿದಾಗ, ನಾನು ಹಾಲಿ ಶಾಸಕನಿದ್ದೇನೆ, ಯಾವುದೇ ಪಕ್ಷವಿರಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಯಾರ್ಹೇನೆ ಹೇಳಲಿ ನನಗೆ ಟಿಕೆಟ್ ಸಿಗುವುದು ಎಂದು ಹೇಳಿದರು.
ನಿಮಗೆ ಟಿಕೆಟ್ ತಪ್ಪಿಸಲು ಮುಂದಾಗಿದ್ದಾರೆ, ಮಾಜಿ ಸಚಿವರಿಗೆ ಟಿಕೆಟ್ ದೊರೆಯುತ್ತದಂತೆ ಎಂದು ಮತ್ತೆ ಪ್ರಶ್ನಿಸಿದಾಗ ಶಾಸಕ ಜ್ಯೋತಿಗಣೇಶ್ ಅವರು “ಏಪ್ರಿಲ್ 2ನೇ ವಾರ”ದಲ್ಲಿ ಯಾರ್ಯಾರು ಎಲ್ಲೆಲ್ಲಿ ಇರುತ್ತಾರೆ ಎಂಬುದು ನಿಮಗೆ ತಿಳಿಯಲಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಹೇಳಿದ “ಏಪ್ರಿಲ್ 2ನೇ ವಾರ”ದಲ್ಲಿ ಯಾರ್ಯಾರು ಎಲ್ಲಿರುತ್ತಾರೆ ಎಂಬ ಮಾತು ಈಗ ನಿಜವಾದಂತೆ ಕಾಣಿಸುತ್ತಿದೆ. ಪಕ್ಷವನ್ನು ಕಟ್ಟಿ ಬೆಳೆಸಿದ ಸೊಗಡು ಶಿವಣ್ಣನವರಿಗೆ ಟಿಕೆಟ್ ಸಿಗಲಿಲ್ಲ ಎಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಚುನಾವಣೆಗೆ ನಿಲ್ಲುತ್ತಿದ್ದಾರೆ.
ಟಿಕೆಟ್ ನನಗೆ ಎಂಬದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿಕೊಂಡರು, ಕೆಲವರು ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿಕೊಳ್ಳುತ್ತಿದದ್ದು ಸತ್ಯವಲ್ಲ ಎಂದು ಸಾಭೀತಾಗಿದೆ.
ಪಕ್ಷ ಕಟ್ಟಿದ ಹಾಲಿ ಶಾಸಕರುಗಳಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ಮಾಜಿ ಶಾಸಕರಿಗೆ ಮಣೆ ಹಾಕುತ್ತದೆಯೇ? ಟಿಕೆಟ್ ಹಂಚಿಕೆಯಲ್ಲಿ ಇಬ್ಬರ ಕೈ ಮೇಲಾಗಿದೆ ಎನ್ನಲಾಗುತ್ತಿದೆ.