ಮಧುಗಿರಿ ಜಿಲ್ಲೆ ಮಾಡಲು ಸರ್ಕಾರ ಪರಿಶೀಲನೆ: ಮುಖ್ಯಮಂತ್ರಿ. ಸಿದ್ದರಾಮಯ್ಯ.-ಪ್ರಧಾನಿ ವಿರುದ್ಧ ವಾಗ್ಧಾಳಿ

ಮಧುಗಿರಿ : ಕೆ.ಎನ್ .ರಾಜಣ್ಣ ಒತ್ತಾಯದ ಮೇರೆಗೆ ಮಧುಗಿರಿ ಯನ್ನು ಜಿಲ್ಲಾ ಕೇಂದ್ರವನ್ನು ನೂರಕ್ಕೆ ನೂರು ಜಿಲ್ಲೆ ಮಾಡಲು ತಕರಾರಿಲ್ಲ, ಷಡಕ್ಷರಿ ತಿಪಟೂರು ಮಾಡಿ ಎನ್ನುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಮಧುಗಿರಿ ಜಿಲ್ಲೆ ಮಾಡಲು ಸರ್ಕಾರ ಪರಿಶೀಲನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರಿಂದು ಮಧುಗಿರಿಯಲ್ಲಿ ನಡೆದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಧುಗಿರಿ ಬೆಟ್ಟಕ್ಕೆ ರೂಪ್ ವೇಗೆ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
50ಲಕ್ಷದ ಮಕಳಿಗೆ 150 ML ಹಾಲನ್ನು ಪ್ರತಿಯೊಬ್ಬ ಮಕ್ಕಳಿಗೂ ಕೊಡುತ್ತಿದ್ದು, ಸುಮಾರು 5458000 ಮಕ್ಕಳಿಗೆ ಕೊಡ್ತಾ ಇದ್ದೇವೆ.ಸರ್ಕಾರ ಹಾಲನ್ನು ದುಡ್ಡು ಕೊಟ್ಟು ತಗೋಳ್ಳುತ್ತೆ, ಕ್ಷೀರಭಾಗ್ಯ ಯೋಜನೆ ಪ್ರಾರಂಭವಾಗಿ ಇಂದಿಗೆ 10 ವರ್ಷವಾಯಿತು, ಸಂತೋಷ ಅಂದರೆ ಶೂ ಭಾಗ್ಯ ಘೋಷಣೆ ಮಾಡಿದ್ದು ಮಧುಗಿರಿಯಲ್ಲೇ ಎಂದು ಹೇಳಿದರು.

ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮಧುಗಿರಿಗೆ ಬಂದಿದ್ದಾಗ ಕೆ.ಎನ. ರಾಜಣ್ಣ ಶೂಭಾಗ್ಯದ ಬಗ್ಗೆ ಹೇಳಿದ ಕೂಡಲೇ ಸಮಾರಂಭದಲ್ಲೇ ಘೋಷಿಸಿದೆ, ನನಗೆ ಪ್ರೌಢಶಾಲೆಯ ತನಕ ಚಪ್ಪಲಿ ಇರಲಿಲ್ಲ. ಬಡಮಕ್ಕಳು ಶೂ, ಟೈ ಕಟ್ಟಿಕೊಂಡು ಬರಲಿ ಎಂಬುದೇ ನನ್ನ ಆಶಯವಾಗಿತ್ತು ಎಂದರು.
ಕ್ಷೀರಭಾಗ್ಯಕ್ಕೆ ಅಂತರ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ, ಮಕ್ಕಳು ದೈಹಿಕ, ಮಾನಸಿಕ ಸಧೃಡರಾಗಿರಬೇಕು ಎಂದು ಹಾಲನ್ನು ನೋಡುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಿ ವಿರುದ್ಧ ವಾಗ್ಧಾಳಿ:
ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆ.ಜಿ.ಅಕ್ಕಿ ಕೊಡುತ್ತಿದ್ದೆ, ಬಿಜೆಪಿ ಸರ್ಕಾರ 4 ಕೆ.ಜಿ. ಮಾಡಿದರು, ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ 10ಕೆಜಿ ಅಕ್ಕಿಕೊಡುವುದಾಗಿ ಹೇಳಿದ್ದೆವು, ಯೋಜನೆ ಜಾರಿಗೆ ತರಲು ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾಗೆ ಪತ್ರ ಬರೆದು ಅಕ್ಕಿಯನ್ನು ಪೂರೈಸುವಂತೆ ಮನವಿ ಮಾಡಿದೆವು. ಮೊದಲು ಅಕ್ಕಿ ಕೊಡುವುದಾಗಿ ಒಪ್ಪಿಕೊಂಡಿತು. ನಂತರ ಕೇಂದ್ರ ಸರ್ಕಾರ ಅಕ್ಕಿ ಕೊಡದಂತೆ ತಡೆಯಿತು. ಹೀಗಾಗಿ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದರು. ಅಕ್ಕಿ ಕೊಡದವರು ಎಂಥಾ ನೀಚರು ಇರಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.
ಅಕ್ಕಿ ಬೇಕ ದುಡ್ಡು ಬೇಕಾ ಎಂದು ನೆರೆದಿದ್ದ ಜನರನ್ನು ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನ ಅಕ್ಕಿ ಬೇಕು ಎಂದಾಗ, ಅಕ್ಕಿಯನ್ನು ಮಾರಿಕೊಳ್ಳ ಬೇಡಿ, ಬಡವರು ಹಸಿವಿನಿಂದ ಸಾಯಬಾರದು ಎಂದು ಅಕ್ಕಿ ಕೊಡುತ್ತಿದ್ದೇವೆ, 4 ಕೋಟಿ 4 ಲಕ್ಷ ಜನ ಅಕ್ಕಿ ಪಡೆಯುತ್ತಿದ್ದಾರೆ ಎಂದರು

ಮೋದಿ ಉಚಿತ ನೀಡಿದರೆ ರಾಜ್ಯಗಳು ಭಿಕಾರಿ ಆಗುತ್ತವೆ ಎಂದರು, ಮೋದಿ ನಮ್ಮ 5 ಯೋಜನೆಗಳನ್ನು ಜಾರಿ ಮಾಡಿ ತೋರಿಸಿದ್ದೇವೆ, 53 ಕೋಟಿ ಹಣ ಶಕ್ತಿ ಯೋಜನೆಗೆ ಖರ್ಜಾಗಿದೆ.ಪ್ರತಿ ತಿಂಗಳು 53 ಲಕ್ಷ ಜನ ಪ್ರಯಾಣ, ಹೆಗ್ಗಡೆಯವರು ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಾಗಿದೆ ಎಂದರು, ಧರ್ಮಸ್ಥಳದ ವೀರೇಂದ್ರ ಹೆಗಡೆಯವರು ನೀವು ಶಕ್ತಿ ಯೋಜನೆ (ಮಹಿಳೆಯರಿಗೆ) ತಂದ ಮೇಲೆ ದೇವಸ್ಥಾನದ ಆದಾಯ ಹೆಚ್ಚಿದ್ದು,ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸುವುದಾಗಿ ಹೇಳಿದರು, ನಾನು ರಾಜ್ಯದ 7ಕೋಟಿ ಜನರ ಹೆಸರಲ್ಲಿ ಅರ್ಚನೆ ಮಾಡಲು ಹೇಳಿದ್ದೇನೆ ಎಂದರು.

ಗೃಹಜ್ಯೋತಿಯಲ್ಲಿ ವಿದ್ಯುತ್ ಉಚಿತ ನೀಡಲಾಗಿದೆ. ಈ ಯೋಜನೆಯಡಿ 1ಕೋಟಿ 10 ಜನ ನೋಂದಣಿಯಾಗಿದ್ದಾರೆ.

ಇμÉ್ಟಲ್ಲ ಮಾಡಿಡರುವ ನಮಗೇ ಓಟಾಕಬೇಕು, ಬಿಜೆಪಿಗೆ ಒಂದೇ ಒಂದು ಓಟು ಹಾಕಬೇಡಿ, ಅದಾನಿ, ಅಂಬಾನಿ ಸಾಲ ಮನ್ನ ಮಾಡಿದರೆ ದೇಶ ದಿವಾಳಿ ಆಗಲ್ವ ಎಂದು ಪ್ರಶ್ನಿಸಿದರು.
ನಿರುದ್ಯೋಗ ಬಗೆ ಹರಿಸಲು ನಿರುದ್ಯೋಗ ಭತ್ಯೆಯನ್ನು ಸಧ್ಯದಲೇ ಜಾರಿಗೆ ತರಲಾಗುವುದು ಎಂದರು, ವಾರಕ್ಕೆ 2 ದಿನ ಮೊಟ್ಟೆಯನ್ನು 1ನೇ ತರಗತಿಯಿಂದ 10ನೇ ತರಗತಿಯವರೆಗೆ ನೀಡುತ್ತಿದ್ದೇವೆ, ರೈತರಿಗೆ 5 ಲಕ್ಷದವರಿಗೆ ಶೂನ್ಯ ಬಡ್ಡಿ, 15 ಲಕ್ಷದವರೆಗೆ ಶೇಕಡ 3%ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದರು.

ಎತ್ತಿನ ಹೊಳೆಗೆ ಒತ್ತು ಕೊಟ್ಟು ಮುಗಿಸುತ್ತೇವೆ. ಯಾವ ಸರ್ಕಾರವೂ ಮಾಡದಷ್ಟು ಅಭಿವೃದ್ಧಿ ಮಾಡಿದ್ದೇವೆ, ಭದ್ರಮೇಲ್ದಂಡೆ ಜಯಚಂದ್ರರ ಕೊಡುಗೆ ಆ ನೀರು ಬರಲಿದೆ, 5 ಸಾವಿರ ಕೋಟಿ ಖರ್ಚಾಗಲಿದ್ದು, ಕೇಂದ್ರ ಒಂದೂ ಪೈಸೆ ಕೊಟ್ಟಿಲ್ಲ, ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು ಭದ್ರಮೇಲ್ದಂಡೆ ಯೋಜನೆ ಮುಗಿಸುತ್ತೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರ ಕೆ.ಎನ್.ರಾಜಣ್ಣ ಮಾತನಾಡಿದರು.

Leave a Reply

Your email address will not be published. Required fields are marked *