ತುಮಕೂರು : ಬೆಂಗಳೂರು-ಮೈಸೂರಿನಂತಹ ಸ್ಥಳಗಳಲ್ಲಿ ಸಿಗುವಂತಹ ಒಂದು ಆಹ್ಲಾದಕರ “ರಾಯಲ್ ಹೆವನ್ ಎಂಬ ರೆಸ್ಟೋರೆಂಟ್‍ನ್ನು ಪ್ರಾರಂಭಿಸಲಾಗುವುದು ಎಂದು ಪಾಲುದಾರರಾದ ಹರೀಶ್, ಉಮೇಶ್, ಕೆ,ಮಂಜುನಾಥ, ಕುಮಾರ್.ಜಿ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೊಂದು ಎಲ್ಲರೂ ಭಾಗವಹಿಸಬಹುದಾದ ರೆಸ್ಟೋರೆಂಟ್‍ನ್ನಾಗಿ ಮಾಡಲಾಗಿದ್ದು, ಸುಮಾರು 450 ಜನರು ಕೂರಬಹುದು, ಇದರಲ್ಲಿ ನಾಮಕರಣ, ಹುಟ್ಟು ಹಬ್ಬ ಆಚರಣೆ, ಕೆಫೆ ಸಿಸ್ಟಮ್, ಎಲ್ಲಾ ಇದ್ದು, ಬಿಸಿನೆಸ್ ಮೆನ್‍ಗಳಿಗೆ, ದೂರ ಪ್ರಯಾಣದಿಂದ ಬಂದವರಿಗೆ ಒಂದಷ್ಟು ಸಮಯ ಖುಷಿಯಿಂದ ಕಳೆಯಲು, ಸುಸಜ್ಜಿ, ಸುಂದರವಾದ ಹೋಟಲ್‍ನ್ನಾಗಿ ಮಾಡಿರುವುದಾಗಿ ತಿಳಿಸಿದರು.
ಈ ಹೋಟೆಲ್‍ನಲ್ಲಿ 7 ದೇಶದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದ್ದು, ಉತ್ತರಕಾಂಡದಿಂದ ಅಡಿಗೆ ಸಿಬ್ಬಂದಿಯನ್ನು ಕರೆಸಿರುವುದಾಗಿ ತಿಳಿಸಿದರು.
ಮಾರ್ಚ್ 19ರ ಭಾನುವಾರ “ರಾಯಲ್ ಹೆವನ್” ರೆಸ್ಟೋರೆಂಟ್ ಉದ್ಘಾಟನೆ ಮಾಡಲಿದ್ದು, ಈ ಸಂದರ್ಭದಲ್ಲಿ ಚಲನ ಚಿತ್ರ ನಟರಾದ ಧೃವಸರ್ಜಾ, ಪ್ರೇಮ್, ಮತ್ತು ಡಾಲಿ ಧನಂಜಯ್ಯ ಸೇರಿದಂತೆ ರಾಜಕಾರಣಿಗಳು, ಉದ್ಯಮಿಗಳು ಭಾಗವಹಿಸುತ್ತಿದ್ದಾರೆ ಎಂದು ತಿಳಿದರು.