ಮಾಚ್5ರಂದು ಕೊರಟಗೆರೆಯಲ್ಲಿ ಉದ್ಯೋಗ ಮೇಳ

ತುಮಕೂರು:ಕೊರಟಗೆರೆ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಾರ್ಚ್ 05ರ ಭಾನುವಾರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿ ಹಾಗೂ ಸಮಾಜ ಸೇವಕ ಕೆ.ಎಂ.ಮುನಿಯಪ್ಪ
ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸ್ಥಳೀಯ ಮತ್ತು ಬೆಂಗಳೂರಿನ ವಿವಿಧೆಡೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗಾರ್ಥಿಗಳನ್ನು ಅರಿಸಿ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುತಿದ್ದು,ಸ್ಕ್ರೀನಿಂಗ್ ನಂತರ ಆಯ್ಕೆಯಾಗುವ ಆರ್ಹ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.

ಕೊರಟಗೆರೆ ತಾಲೂಕು ಅಲ್ಲದೆ ಜಿಲ್ಲೆಯ ವಿವಿಧಡೆಗಳಿಂದ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸ ಬಹುದಾಗಿದೆ.ಐಟಿಐ,ಡಿಪ್ಲಮೋ,ಬಿ.ಎಸ್ಸಿ,ಬಿಕಾಂ,ಎಂಬಿಎ,ಎಂ.ಕಾಂ, ಐಐಟಿ ಮತ್ತು ಬಿಇ ಕಲಿತವರು ಮೇಳದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.ಮೇಳಕ್ಕೆ ಬರುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಜೊತೆಗೆ,ಆಧಾರ್ ಕಾರ್ಡು ಹಾಗೂ ಭಾವಚಿತ್ರದೊಂದಿಗೆ ಹಾಜರಿರಬೇಕು.ಮಾರ್ಚ್ 05ರ ಭಾನುವಾರ ನಡೆಯುವ ವೇಳವನ್ನು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದು,ಮಾಜಿ ಶಾಸಕ ಸುರೇಶಗೌಡ,ಸಂಸದ ಜಿ.ಎಸ್.ಬಸವರಾಜು,ಬೆಂಗಳೂರು ಗ್ರಾಮಾಂತರ ಜೆ.ಪಿ.ಸದಸ್ಯ ಮರಿಸ್ವಾಮಪ್ಪ,ವಿವಿಧ ಮಠಾಧೀಶರು ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಕೆ.ಎಂ.ಮುನಿಯಪ್ಪ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಟಿಕೇಟ್‍ಗಾಗಿ ನಾನು ಸೇರಿದಂತೆ ಐದು ಜನರು ಪೈಪೋರ್ಟಿ ನಡೆಸುತ್ತಿದ್ದು,ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿಹಗಲಿರುಳು ಕೆಲಸ ಮಾಡಿ ಪಕ್ಷ ಕಟ್ಟಿದ ನನಗೆ ಟಿಕೇಟ್ ದೊರೆಯಲಿದೆ ಎಂಬ ನಂಬಿಕೆ ಇದೆ.ಕೋರೋನ ಪೂರ್ವದಲ್ಲಿ ಮತ್ತು ಕೋರೋನ ನಂತರದಲ್ಲಿಯೂ ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದು,ಜನರಲ್ಲಿ ಬಿಜೆಪಿ ಪಕ್ಷದ ಬಗ್ಗೆ ಒಳ್ಳೆಯ ಭಾವನೆ ಬಂದಿದೆ. ಹಾಗಾಗಿ ನನ್ನಗೆ ಟಿಕೇಟ್ ನೀಡಿದರೆ ಕೊರಟಗೆರೆಯಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆದು ಹೊಸ ಇತಿಹಾಸ ಬರೆಯಲಿದೆ ಎಂಬ ವಿಶ್ವಾಸವನ್ನು ಕೆ.ಎಂ.ಮುನಿಯಪ್ಪ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗೋವಿಂದರೆಡ್ಡಿ,ಪ್ರಕಾಶ್‍ಕುಮಾರ್,ದಿವ್ಯಾನಂದ,ಸಿದ್ದಲಿಂಗಪ್ಪ, ರವಿ, ಮಂಜಣ್ಣ ಹಾಗು ಕೆ.ಎಂ.ಮುನಿಯಪ್ಪ ಪುತ್ರ ಚೇತನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *