ತುಮಕೂರು : ಏಪ್ರಿಲ್ 9ರ ಭಾನುವಾರ ಸಂಜೆಯಿಂದಲೇ ಬಿಜೆಪಿಯ ಪಟ್ಟಿ ಆಗ ಬಿಡುಗಡೆಯಾಗಬಹುದು, ಈಗ ಬಿಡುಗಡೆಯಾಗ ಬಹುದೆಂದು ಮಾಧ್ಯಮಗಳನ್ನು ಸಹ ಬಿಜೆಪಿ ಪಕ್ಷ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.
ಬಿಜೆಪಿಯ ಪಟ್ಟಿ ಬಿಡುಗಡೆಯಾದ ಕೂಡಲೇ ದೃಶ್ಯ ಮಾಧ್ಯಮಗಳು ಗಟ್ಟೆಗಟ್ಟಲೆ ವಿಶ್ಲೇಷಣೆ ಹೆಸರಲ್ಲಿ ಇವರಿಗೆ ಯಾಕೆ ಸಿಗಲಿಲ್ಲ, ಅವರಿಗೆ ಯಾಕೆ ಸಿಕ್ಕಿತು ಎಂದು ತಲೆ ಚಿಟ್ಟು ಹಿಡಿಯುವಂತೆ ಸುದ್ದಿ ಪ್ರಸಾರ ಮಾಡಲು ಕಾಯುತ್ತಿದ್ದರೆ, ಮುದ್ರಣ ಮಾಧ್ಯಮಗಳು ಆಯಾ ಜಿಲ್ಲೆಯ ವರದಿಗಾರರರಿಂದ ವಸ್ತು ನಿಷ್ಠ ವಿಶ್ಲೇಷಣೆಗಳನ್ನು ಬರೆಸಲು ಕಾದು ಕುಳಿತಿವೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಈಗಾಗಲೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿಯು ಕೊನೆ ಕ್ಷಣದವರಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಆ ಕ್ಷಣ, ಈ ಕ್ಷಣ ಎನ್ನುತ್ತಲೇ ಇದ್ದು ಮಾಧ್ಯಮದವರಿಗೆ ತಲೆ ಬಿಸಿಯಾಗಿ ಪಟ್ಟಿ ಬಿಡುಗಡೆಯಾಗುತ್ತಿರುವುದನ್ನೇ ಕಾಯುತ್ತಿದ್ದಾರೆ.
ಟಿಕೆಟ್ ಅಕಾಂಕ್ಷಿ ಅಭ್ಯರ್ಥಿಗಳಿಗಿಂತ ಹೆಚ್ಚು ಮಾಧ್ಯಮಗಳಿಗೆ ಟೆನ್ಷನ್ ಪ್ರಾರಂಭವಾಗಿದೆ, ಅದರಲ್ಲೂ ದೃಶ್ಯ ಮಾಧ್ಯಮಗಳು ಈಗಾಗಲೇ ಹಲವರನ್ನು ಗೆಲ್ಲಿಸಿ ಪಟ್ಟಕ್ಕೇರಿಸಿರುವುದರಿಂದ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂದು ಕೈ ಕೈ ಹಿಸುಕಿಕೊಂಡು ಬಿಜೆಪಿ ಪಟ್ಟಿ ಬಿಡುಗಡೆಗೆ ಆಗುವುದನ್ನೇ ಕಾಯುತ್ತಿದ್ದಾರೆ.
ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತಿದಂತೆ ಬ್ರೇಕಿಂಗ್ ನ್ಯೂಸ್ ನೀಡಲು ನಾ ಮುಂದು ತಾ ಮುಂದು ಎಂದು ಕಾಯುತ್ತಿವೆ.
- VENKATACHLA H V.