ತುಮಕೂರು: ನೆತ್ತಿಯ ಮೇಲಿನ ತೂಗುಗತ್ತಿ ತಲೆಯ ಮೇಲೆ ಬಿದ್ದು ಯಾವಾಗ ಬೇಕಾದರೂ ತಲೆ ಸೀಳಬಹುದು, ಹಾಗೆಯೇ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರ ನೆತ್ತಿಯ ಮೇಲೆ ಚುನಾವಣಾ ಅಕ್ರಮದ ತೀರ್ಪು ಅವರ ಶಾಸಕ ಸ್ಥಾನ ಅನರ್ಹತೆಗೊಳಿಸಿದೆ. ಇದರ ಬೆನ್ನಲೆ ತ್ರಿಸದಸ್ಯ ಪೀಠ ಒಂದು ತಿಂಗಳು ಈ ತೀರ್ಪಿಗೆ ತಡೆಯಾಜ್ಞೆ ನೀಡಿದೆ.
ಚುನಾವಣೆ ಘೋಷಣೆಯಾದ ಮಾರನೇ ದಿನವೇ ಈ ತೀರ್ಪು ಹೊರ ಬಂದಿರುವುದು ಡಿ.ಸಿ.ಗೌರಿಶಂಕರ್ ಅವರಿಗೆ ಮುಂದಿನ ಚುನಾವಣೆಯ ಲೆಕ್ಕಚಾರವೇನು ಎಂಬುದನ್ನು ಕಾದು ನೋಡಬೇಕಿದೆ, ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶವಿದೆ.
ಶಾಲಾ ಮಕ್ಕಳಿಗೆ ಚುನಾವಣೆ ವೇಳೆ ನಕಲಿ ಆರೋಗ್ಯ ವಿಮಾ ಬಾಂಡ್ ಹಂಚಿ ಚುನಾವಣಾ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿದಂತೆ ನ್ಯಾಯಾಲಯ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಅನರ್ಹಗೊಳಿಸಿದೆ.
ಮಾಜಿ ಶಾಸಕ ಸುರೇಶ್ ಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಡಿ.ಸಿ.ಗೌರಿಶಂಕರ್ ಅವರು ಇನ್ನು ಆರು ವರ್ಷಗಳ ಕಾಲ ಚುನಾವಣೆಯನ್ನು ಎದುರಿಸುವಂತಿಲ್ಲ.
ಪ್ರಕರಣ ಏನು: 2018ರ ವಿಧಾನಸಭಾ ಚುನಾವಣೆಯಲ್ಲಿ 16 ಸಾವಿರ ಶಾಲಾ ಮಕ್ಕಳಿಗೆ ಡಿ.ಸಿ.ಗೌರಿಶಂಕರ್ ರುಟುಂಬದ ಒಡೆತನದ ಕಮ್ಮಗೊಂಡನಹಳ್ಳಿ ಆಂಜನೇಯಸ್ವಾಮಿ ಸೇವಾಟ್ರಸ್ ನಿಂದ ಆರೋಗ್ಯ ವಿಮೆಯನ್ನು ನೀಡಿತ್ತು, ಸದರಿ ವಿಮೆಗಳು ನಕಲಿ ಆಗಿದ್ದ ಬಗ್ಗೆ ನ್ಯೂ ಲೈಫ್ ಇನ್ಸೂರೆನ್ಸ್ ಕಂಪನಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು.
ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದಲೇ ಡಿ.ಸಿ.ಗೌರಿಶಂಕರ್ ಅವರ ಕುಟುಂಬ ನಕÀಲಿ ವಿಮೆ ಹಂಚಿಕೆ ಮಾಡುವ ಮೂಲಕ ಚುನಾವಣಾ ಅಕ್ರಮ ಎಸಗಿದ್ದ ಬಗ್ಗೆ 2018ರಲ್ಲಿ ಮಾಜಿ ಶಾಸಕ ಬಿ.ಸುರೇಶ್ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಚುನಾವಣೆ ಹೊಸ್ತಿಲಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.
ತಡೆಯಾಜ್ಞೆ :
ಬೆಂಗಳೂರು ಹೈಕೋರ್ಟ್ ಏಕಸದ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಒಂದು ತಿಂಗಳ ಕಾಲ ರಿಲೀಫ್ ನೀಡಿದೆ, ಆದೇಶಕ್ಕೆ ತಡೆ ನೀಡುವಂತೆ ಗೌರಿ ಶಂಕರ್ ಪರ ವಕೀಲರು ಮನವಿ ಮಾಡಿಕೊಂಡಿದ್ದರು. ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಆಗಿದೆ ಈ ಹಿನ್ನೆಲೆ, ಒಂದು ತಿಂಗಳ ಕಾಲ ಅದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಮತದಾರರಿಗೆ ನಕಲಿ ಬಾಂಡ್ ಹಂಚಿಕೆ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಗೌರಿಶಂಕರ್ ಅವರು ಶಾಸಕ ಸ್ಥಾನದಿಂದಲೇ ಅನರ್ಹಗೊಂಡಿದ್ದರು. ಈ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿತ್ತು.
ತುಮಕೂರು ಗ್ರಾಮಾಂತರದ ಬಿಜೆಪಿ ಮಾಜಿ ಶಾಸಕ ಹಾಗೂ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಜೆಡಿಎಸ್ ಶಾಸಕ ಈ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅದೇಶದ ವಿರುದ್ಧ ಶಾಸಕ ಗೌರಿಶಂಕರ್ ಮೇಲೆ ಮನವಿ ಸಲ್ಲಿಸಿದ್ದರು, ಹೈಕೋರ್ಟ್” ತ್ರಿಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಕ್ಕೆ ತಡೆ ನೀಡಿದೆ. ಈ ಹಿನ್ನೆಲೆ, ಒಂದು ತಿಂಗಳ ಕಾಲ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದ್ದು, ಗೌರಿಶಂಕರ್ ಅವರು ಒಂದು ತಿಂಗಳೊಳಗೆ ಚುನಾವಣೆಯನ್ನು ಎದುರಿಸಬಹುದು.
ಡಿ.ಸಿ.ಗೌರಿಶಂಕರ್ ಅವರು ತ್ರೀ ಸದಸ್ಯ ಪೀಠವನ್ನು ಒಂದು ತಿಂಗಳ ಕಾಲ ತಡೆಯಾಜ್ಞೆ ನೀಡುವಂತೆ ಮೇಲ್ಮವಿ ಸಲ್ಲಿಸಿದ್ದರು.