ನೆನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ನಗರದ ವಿವಿಧ ಬಡಾವಣೆಗಳು ಜಲಾವೃತಗೊಂಡು ಸಮಸ್ಯೆ ಉಂಟಾಗಿತ್ತು, ಇಂತಹ ಕೆಲವು ಸ್ಥಳಗಳಿಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ರವರು ಭೇಟಿ ನೀಡಿ ಸಾಂತ್ವನವನ್ನು ಹೇಳಿ ತೊಂದರೆಗೆ ಒಳಗಾದದವರಿಗೆ ಧೈರ್ಯದಿಂದ ಇರುವಂತೆ ತಿಳಿಸಿದರು.
ಅವರು ತುಮಕೂರು ನಗರದ ಎ.ಪಿ.ಎಂ.ಸಿ. ಹಿಂಭಾಗದ ಕಾಂಪೌಂಡ್ ಬಿದ್ದು ಪಕ್ಕದಲ್ಲಿದ್ದ ಮನೆಗೆ ನೀರು ನುಗ್ಗಿ ಮನೆಯು ಸಹ ಸಂಪೂರ್ಣವಾಗಿ ಬಿದ್ದು ಹೊಗಿದ್ದು ವಿಷಯ ತಿಳಿದ ಶಾಸಕ ಜ್ಯೋತಿಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಬೇರೆ ಮನೆಗೆ ತೆರಳುವಂತೆ ಮನವಿ ಮಾಡಿದರು.
ಆರ್.ಟಿ. ನಗರದಲ್ಲಿಯೂ ಸಹ ಭಾರಿ ಮಳೆಯಿಂದಾಗಿ ಸಮಸ್ಯೆ ಉಂಟಾಗಿದ್ದು ಈ ಸ್ಥಳಕ್ಕೂ ಸಹ ಶಾಸಕರು ಭೇಟಿ ನೀಡಿದ್ದರು.