ಪರಿಸರ, ಪರಂಪರೆಯ ಸಾಕ್ಷಿಪ್ರಜ್ಞೆ ಒಳನಾಡಿನ ಒಡನಾಟ

ತುಮಕೂರು : ಜೀವಪರ, ಪ್ರಕೃತಿ ಪರ ಕಾಳಜಿಯ, ಕೃಷಿ ಆಸ್ಥೆಯ ಈ ಕೃತಿ ಪ್ರವಾಸಕಥನದ ರೂಪದಲ್ಲಿದ್ದರೂ ಸಮಾಜದ ಸಾಕ್ಷಿ ಪ್ರಜ್ಞೆಯಂತಿದೆ. ಸಣ್ಣ-ಸಣ್ಣ ಟಿಪ್ಪಣಿಗಳ ಮೂಲಕ ಕೃತಿ ಕಟ್ಟಿಕೊಟ್ಟು ಸ್ಥಳೀಯ ಸಂಕಥನಗಳನ್ನು ಹೊಲತಾಳ್ ನಿರೂಪಿಸಿದ್ದಾರೆ ಎಂದು ಶಿವಮೊಗ್ಗದ ಜಾನಪದ ತಜ್ಞ ಡಾ. ಬಸವರಾಜ ನೆಲ್ಲೀಸರ ಹೇಳಿದರು.

ಅವರು ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಆರೆಂಜ್ ಬುಕ್ಸ್ ತುಮಕೂರು-ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ತುಮಕೂರು ವಿವಿಯಲ್ಲಿ ಹಮ್ಮಿಕೊಂಡಿದ್ದ ಸಾಹಿತಿ, ಕೃಷಿಕ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಸಿದ್ದಗಂಗಯ್ಯ ಹೊಲತಾಳರ ಒಳನಾಡಿನ ಒಡನಾಟ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಕೃಷಿಕರು, ಸ್ಥಳೀಯ ಬೆಳೆ, ಮಳೆ, ಪರಿಸರಕ್ಕೆ ಸಂಬಂಧಿಸಿದಂತೆ ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ವರ್ಣಿಸಿದ್ದಾರೆ. ಒಳ್ಳೆಯದನ್ನು ಕಂಡಾಗ ಬಾಯ್ತುಂಬಾ ಮಾತನಾಡುವ, ಸಮಾಜಕ್ಕೆ ತೋರುವ ಹೆಬ್ಬಯಕೆ ಇಟ್ಟುಕೊಂಡಿರುವ ಹೊಲತಾಳರು ಪುಸ್ತಕ ಪ್ರೇಮಿ, ಕ್ರಿಯಾಶೀಲ ಜಾನಪದ ತಜ್ಞರೂ ಹೌದು. ಕೇವಲ ಪಾಠ ಮಾಡಿ ಮನೆಗೆ ಹೋಗುವ ಜಾಯಮಾನದವರಲ್ಲದ ಸಿದ್ದಗಂಗಯ್ಯ, ನಿವೃತ್ತಿಯ ನಂತರ ಮಣ್ಣಿನೊಂದಿಗೆ ಒಡನಾಟ ಇಟ್ಟುಕೊಂಡು, ಸ್ಥಳೀಯ ಜನತೆ, ರೈತರ ಕಷ್ಟಕ್ಕೆ ಸ್ಪಂದಿಸುವ, ಅವರಲ್ಲಿರುವ e್ಞÁನವನ್ನು, ಅನುಭವವನ್ನು ಹೊರಗೆಳೆದು, ಸಮಾಜಕ್ಕೆ ತಿಳಿಸುವ ಅಪರೂಪದ ಕೆಲಸ ಮಾಡಿ, ಸ್ಥಳೀಯ ಸಂಕಥನಗಳು ಹೇಗೆ ಮುಖ್ಯವಾಗುತ್ತವೆ ಎಂಬುದನ್ನು ಕೃತಿಯ ಮೂಲಕ ನಿರೂಪಿಸಿದ್ದಾರೆ ಎಂದರು.

ಹೃದಯವಂತಿಕೆ ಕಳೆದುಕೊಂಡು ನಗರೀಕರಣದ ಭ್ರಮೆಯಲ್ಲಿರುವವರಿಗೆ ಹಳ್ಳಗರ ಕಥನವನ್ನು ಕಟ್ಟಿಕೊಡುವುದರ ಮೂಲಕ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ಜಾಗತಿಕವಾಗಿ ಚಿಂತಿಸು, ಸ್ಥಳೀಯವಾಗಿ ಕ್ರಿಯಾಶಾಲಿಯಾಗು ಎಂಬ ಮಾತಿಗೆ ಅನುಗುಣವಾಗಿ ಕೃತಿ ಹರಿಯುವ ನೀರಿನಂತೆ ಸಾಗುತ್ತದೆ. ಸಂಸ್ಕøತಿಯ ತಟ್ಟೆಯಲ್ಲಿ ವಿಕಾಸವನ್ನು ನೋಡಬೇಕಾಗಿದ್ದು, ಸಜ್ಜನರ, ಸಧೃಡತೆಯ, ಸದ್ಭಾವನೆಯ ಕೃತಿಯಾಗಿದೆ ಒಳನಾಡಿ ಒಡನಾಟ ಎಂದು ಬಸವರಾಜ ನೆಲ್ಲೀಸರ ವಿಶ್ಲೇಷಿಸಿದರು.

ದೂರದರ್ಶನ ಬಂದ ಮೇಲೆ ನಮ್ಮ ಜಾನಪದ ಕಲಾವಿದರ ಅವನತಿ ಆರಂಭವಾಗಿ, ಮುಗಿಲು ಮುಟ್ಟಿದೆ. ಹೃದಯವಂತಿಕೆ ಕಳೆದುಕೊಂಡು, ನಗರೀಕರಣದ ಬೆನ್ನತ್ತಿ ಭ್ರಮೆಯಲ್ಲಿ ತೇಲಾಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣರ ಸಂಪನ್ಮೂಲ, ವೃದ್ಧಿ, ಸಾವಯವ ಕೃಷಿ, ಕೃಷಿಯ ಕಷ್ಟ-ಸುಖ ಕುರಿತು ಹೊಲತಾಳಲು ನಿರರ್ಗಳವಾಗಿ ನಿರೂಪಿಸಿ, ಬೆಸೆಯುವ, ಕೈಮರದಂತೆ ಕೆಲಸ ಮಾಡಿರುವುದು ಗಮನಾರ್ಹ ಎಂದರು.
ಈ ಸಂದರ್ಭದಲ್ಲಿ ಆಂದ್ರಪ್ರದೇಶದಿಂದ ಬಂದಿದ್ದ ರೈತ ಮಹಿಳೆಯಾರದ ಲಕ್ಷ್ಮೀದೇವಮ್ಮ, ಅರುಣ ಮತ್ತಿತರಿಗೆ ಕುಲಪತಿ ಡಾ. ವೆಂಕಟೇಶ್ವರಲು ಅವರ ಮೂಲಕ ಒಳನಾಡಿನ ಒಡನಾಟ ಕೃತಿ ನೀಡಿ ಗೌರವಿಸಲಾಯಿತು.
ಕೃತಿ ಕುರಿತು ಬೆಂಗಳೂರಿನ ಲೇಖಕ ಬಿ.ಎಸ್. ಜಯಪ್ರಕಾಶ್ ನಾರಾಯಣ, ತುಮಕೂರು ವಿವಿ ವಿe್ಞÁನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಸಾಹಿತಿ ವಡ್ಡಗೆರೆ ನಾಗರಾಜಯ್ಯ ಮಾತನಾಡಿದರು.
ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಡಾ. ವೆಂಕಟೇಶ್ವರಲು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೃತಿಕಾರ ಡಾ. ಸಿದ್ದಗಂಗಯ್ಯ ಹೊಲತಾಳ್ ಉಪಸ್ಥಿತರಿದ್ದರು.

ಡಾ. ನಾಗಭೂಷಣ ಬಗ್ಗನಡು ಸ್ವಾಗತಿಸಿ, ಲೇಖಕ-ಪ್ರಕಾಶನ ಆರೆಂಜ್ ಬುಕ್ಸ್‍ನ ಎಂ.ವಿ. ಶಂಕರಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *