ತುಮಕೂರು : ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ‘ಲೇಖಕಿ’ ಬಯಲ ಓದು ಬಳಗ ಪುಸ್ತಕ ಓದು-ಚರ್ಚೆ-ಸಂವಾದಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 11ರ ಶನಿವಾರ ಸಂಜೆ 4ಗಂಟೆಗೆ ತುಮಕೂರು ಅಮಾನಿಕೆರೆಯ ಸಂಗೀತ ಕಾರಂಜಿಯಲ್ಲಿ ಶೈಲಜಾ ನಾಗರಘಟ್ಟರವರ ‘ಕಿಚ್ಚಿಲ್ಲದ ಬೇಗೆ’ ಕೃತಿಯ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ.
ಕೃತಿ ಕುರಿತು ತಿಪಟೂರಿನ ಲೇಖಕಿ ಗೀತಾಲಕ್ಷ್ಮೀ ಮಾತನಾಡಲಿದ್ದು, ಸಂವಾದದಲ್ಲಿ ಡಾ.ಪವನ್‍ಗಂಗಾಧರ್, ಅಕ್ಷತಾ ಶೈಲಜಾ ಭಾಗವಹಿಸುವರು. ಅತಿಥಿಗಳಾಗಿ ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾದ ಸಿ.ಎ. ಇಂದಿರಾ, ಭಾಗವಹಿಸಲಿದ್ದು, ಶೈಲಜಾ ನಾಘರಘಟ್ಟ ಉಪಸ್ಥಿತಿ ಇರುವರು. ಅಧ್ಯಕ್ಷತೆಯನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾಬಸವರಾಜು ವಹಿಸಲಿದ್ದು, ರಾಣಿ ಚಂದ್ರಶೇಖರ್ ನಿರೂಪಣೆ ಮಾಡಲಿದ್ದು, ಡಾ.ಆಶಾ ಬಗ್ಗನಡು ಭಾಗವಹಿಸಲಿದ್ದಾರೆ.