ಬಾಗಿಲುಗಳು ಬಲಕ್ಕೆ-ಎಡಕ್ಕೆ ತೆರೆಯಲಿದೆ ಎಂಬ ಧ್ವನಿಯ ಪಯಣ ಮುಗಿಸಿದ ಪಂಚನಹಳ್ಳಿ ಅಪರ್ಣಾ

ಪಂಚನಹಳ್ಳಿ(ಚಿಕ್ಕಮಗಳೂರು):ಇಲ್ಲಿ ನಗುತ್ತಿರುವ ಬಾಲಕೀಯೇ ಕರ್ನಾಟಕದ ನಿರೂಪಣೆಯ ಧ್ವನಿ ಅಪರ್ಣಾ ಅವರದ್ದು.

ಅಪರ್ಣ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಪಂಚನಹಳ್ಳಿಯಲ್ಲಿ 1966ರಲ್ಲಿ ನಾರಾಯಣ ಸ್ವಾಮಿ-ಪದ್ಮಾವತಿ ದಂಪತಿಯ ಮಗಳಾಗಿ ಹುಟ್ಟಿದರು.

ಇವರ ತಂದೆ ನಾರಾಯಣಸ್ವಾಮಿ ಆಗಿನ ಕಾಲಕ್ಕೆ ಪತ್ರಿಕೆಯೊಂದರಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಅಪರ್ಣಾರವರನ್ನು ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿಗೆ ಕರೆದುಕೊಂಡು ಹೋದರು. ಪಂಚನಹಳ್ಳಿ ಪಕ್ಕದ ಉಪ್ಪನಹಳ್ಳಿ ಸಮೀಪದಲ್ಲಿ ಇವರ ತಾತ ಶಾನುಬೋಗರು ತೋಟದ ಮನೆಯಲ್ಲೇ ವಾಸವಿದ್ದರು.

ತಮ್ಮ ತಂದೆ ತಾಯಿಗೆ ತುಂಬಾ ಬಡತನ ಇದ್ದುದರಿಂದ ಅಂದಿನ ಕಾಲಕ್ಕೆ ನಮ್ಮ ತಂದೆಯವರು ನಮ್ಮನ್ನು ಓದಿಸಲು ತೆಂಗಿನ ತೋಟ ಕಾಯುವ ಕೆಲಸ ಮಾಡುತ್ತಿದ್ದರು. ಶಾನುಬೋಗರ ತೋಟದ ಸಮೀಪವೇ ಇದ್ದ ಮರುಳಯ್ಯ (ವಿಶ್ವಣ್ಣನವರ ತಂದೆ)ನವರ ತೋಟವನ್ನು ಕಾಯುವ ಒಪ್ಪಂದವನ್ನು ನಮ್ಮ ತಂದೆ ಮಾಡಿಕೊಂಡಿದ್ದರು.

ನಮ್ಮ ಅಣ್ಣ ಆಗಿನ ಕಾಲಕ್ಕೆ ಇಡೀ ಜಿಲ್ಲೆಗೆ 7ನೇ ತರಗತಿಯಲ್ಲಿ ರ್ಯಾಂಕ್ ಬಂದು ಮೂಡಿಗೆರೆ ತಾಲ್ಲೂಕಿನ ಜಾವಳಿಯ ನವೋದಯ ಪ್ರೌಢಶಾಲೆಗೆ ಸೇರ್ಪಡೆಯಾಗಿದ್ದರು. ಈ ವಿಷಯ ತಿಳಿದುಕೊಂಡಿದ್ದ ಶಾನುಬೋಗರು ನಮ್ಮ ಮನೆಗೆ ಬಂದು ಮಕ್ಕಳನ್ನು ಚೆನ್ನಾಗಿ ಓದಿಸುವಂತೆ ತೆಲುಗಿನಲ್ಲಿ ಹೇಳುತ್ತಿದ್ದರು.


ನಮ್ಮಣ್ಣನಿಗೆ ಪತ್ರ ಬರೆಸಲು ನಮ್ಮಪ್ಪ ಶಾನುಬೋಗರು ತಪ್ಪಿದರೆ, ಕೆಂಚಮಾರಯ್ಯ ಅವರಿಂದ ಬರೆಸುತ್ತಿದ್ದರು. ಅಪರ್ಣ ಅವರು ಇನ್ನೂ ಚಿಕ್ಕವರಾಗಿದ್ದರಿಂದ ಅವರ ತಂದೆ ಬೆಂಗಳೂರಿನಿಂದ ಆಗಿನ ಕಾಲಕ್ಕೆ ಅಂಬಾಸೀಡರ್ ಕಾರಿನಲ್ಲಿ ಶಾನುಬೋಗರ ಮನೆಗೆ ಬರುತ್ತಿದ್ದರು. ಬೆಂಗಳೂರಿನಿಂದ ಬಂದಾಗಲೆಲ್ಲಾ ಅಪರ್ಣಾ ಅವರ ತಂದೆ ಪೇಡ ತಂದಿರುತ್ತಿದ್ದರು, ಪೇಡವನ್ನು ಅಪರ್ಣಾ ಕೈಯಲ್ಲಿ ನಮಗೆ ಕೊಡಿಸುತ್ತಿದ್ದರು.

ಅಪರ್ಣಾ ಇರುವ ತನಕ ನಮ್ಮ ಅಣ್ಣ ಲಕ್ಷ್ಮಣ ಮರುಳಪ್ಪನವರ ಮನೆಯಲ್ಲಿಯೇ ದನ ಕಾಯಲು ಸಂಬಳವಿದ್ದುದರಿಂದ ಅಪರ್ಣ ಅವರನ್ನು ಎಮ್ಮೆ ಮೇಲೆ ಕೂರಿಸಿ ಆಟ ಆಡಿಸುತ್ತಿದ್ದ, ಹಲಸಿನ ಹಣ್ಣುಗಳನ್ನು ಕೊಯ್ದು ಶಾನುಬೋಗರ ಮನೆಗೆ ತಗೊಂಡು ಹೋಗಿ ಕೊಡೋನು, ಅಪರ್ಣಾ ಅವರ ತಂದೆ ನಾಲ್ಕೈದು ಹಲಸಿನ ಕಾಯಿಗಳನ್ನು ಕಾರಿನ ಡಿಕ್ಕಿಗೆ ಇಕ್ಕುವುದನ್ನು ನಾನು, ನನ್ನ ತಮ್ಮ ಕುತೂಹಲದಿಂದ ನೋಡುತ್ತಿದ್ದೆವು.

ಆನಂತರ ತೋಟ ಕಾಯುವ ಅವಧಿ ಮುಗಿದ ನಂತರ ನಮ್ಮೂರಾದ ದೇವರ ಹೊಸಹಳ್ಳಿಗೆ ಹೊರೆಟು ನಾವು ಹೋದೆವು, ಒಮ್ಮೆ ಮಾತ್ರ ನಮ್ಮ ತಂದೆ ನಮ್ಮೂರು ದೇವಸ್ಥಾನ ಪೂಜಾರಿಯಾಗಿದ್ದ ವೈಜ್ಞಾವ ಜನಾಂಗದ ರಂಗಪ್ಪನವರ ಜಮೀನು ತೆಗೆದುಕೊಳ್ಳಬೇಕೆಂದು ದಾಖಲೆ ತೋರಿಸಲು ಶಾನುಬೋಗರ ಬಳಿ ಹೋದಾಗ ನಮ್ಮ ತಂದೆಗೆ ವೈಜ್ಞಾವರ ಜಮೀನು ತಗೋ ಬ್ಯಾಡ ವೆಂಕಟಯ್ಯ ಅಂದರಂತೆ, ಆ ಜಮೀನು ನಮ್ಮ ತಂದೆ ಖರೀದಿ ಮಾಡಲಿಲ್ಲ.

ಶಾನುಬೋಗರು ತಮ್ಮ ಬದುವಿನ ಮೇಲೆ ಎತ್ತರಕ್ಕೆ ಬೆಳದಿದ್ದ ಹುಲ್ಲು ಮೆದೆ ಮಧ್ಯೆ ಇದ್ದ ಹುತ್ತದಿಂದ ಯಾವಾಗಲಾದರೂ ನಾಗರ ಹಾವೊಂದು ಶಾನುಬೋಗರ ಮನೆ ಹತ್ತಿರ ಬಂದು ಶಾನುಬೋಗರು ಇಟ್ಟಿರುತ್ತಿದ್ದ ಮೊಟ್ಟೆ ತಿಂದು ಹೋಗುತ್ತಿತ್ತು, ಕೋಲಿ ಮೊಟ್ಟೆಯನ್ನು ಉಪ್ಪನಹಳ್ಳಿ ಲಂಬಾಣಿ ತಾಂಡ್ಯದಿಂದ ತರಿಸುತ್ತಿದ್ದರು. ಒಂದಿನ ಮನೆ ಮುಂದೆ ಕೊಬ್ಬರಿ ಚೀಲಗಳನ್ನು ಇಟ್ಟಿದ್ದರು, ಚೀಲಗಳನ್ನು ಎತ್ತಿಕ್ಕಲು ಬಂದ ಶಾನುಬೋಗರು ಹಾವು ಮಲಗಿದ್ದನ್ನು ನೋಡದೆ ತುಳಿದಾಗ, ಹಾವು ಕಚ್ಚಿ ಮೃತಪಟ್ಟರು.

ಆ ನಂತರ ಶಾನುಬೋಗರ ಮಗ ನಾರಾಯಣಸ್ವಾಮಿ ಜಮೀನು ಮಾರಿಬಿಟ್ಟರು.

ಕಾರ್ಯಕ್ರಮಗಳ ನಿರೂಪಣೆ ಎಂದರೆ ಅಪರ್ಣಾ ಎನ್ನುವಷ್ಠರ ಮಟ್ಟಿಗೆ ರಾಜ್ಯದಲ್ಲಿ ಮನೆ ಮಾತಾದವರು ಅಪರ್ಣಾ. ತಮ್ಮ ಸ್ಪಷ್ಟ, ಶುದ್ಧ ಕನ್ನಡ ಭಾμÉಯ ಅಮೋಘ ನಿರೂಪಣಾ ಶೈಲಿಯಿಂದ ಅಪಾರ ಜನಮನ್ನಣೆ ಗಳಿಸಿದರು. ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರಾದ ಅಪರ್ಣಾ 1966ರ ಅಕ್ಟೋಬರ್‍ನಲ್ಲಿ ಜನಿಸಿದರು. ನಾರಾಯಣ ಸ್ವಾಮಿ-ಪದ್ಮಾವತಿ ದಂಪತಿಯ ಮಗಳಾದ ಇವರು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕುಮಾರಪಾರ್ಕ್‍ನಲ್ಲಿ ಪ್ರಾಥಮಿಕ ಮತ್ತು ಎಂಇಎಸ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪದವಿ ಶಿಕ್ಷಣ ಪಡೆದಿದ್ದರು.

ಅರ್ಪಣಾ ಅವರ ತಂದೆ ನಾರಾಯಣ ಸ್ವಾಮಿ ಪತ್ರಿಕೆಯೊಂದರಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾರಾಯಣ್ ಸ್ವಾಮಿ ಅವರಿಗೆ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕಣಗಲ್ ಅವರು ಅಪರ್ಣಾ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ಹೀಗೆ, 1984ರಲ್ಲಿ ‘ಮಸಣದ ಹೂವು’ ಚಿತ್ರದಿಂದ ತಮ್ಮ ಸಿನಿಮಾ ಪಯಣ ಆರಂಭಿಸಿದ ಅಪರ್ಣಾ ನಂತರದಲ್ಲಿ ‘ಇನ್ಸ್‍ಪೆಕ್ಟರ್ ವಿಕ್ರಂ’, ‘ನಮ್ಮೂರ ರಾಜ’, ‘ಸಾಹಸ ವೀರ’, ‘ಡಾಕ್ಟರ್ ಕೃಷ್ಣ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಹಿರಿಯ ನಟರಾದ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಟೈಗರ್ ಪ್ರಭಾಕರ್ ಹಾಗು ಶಿವ ರಾಜ್‍ಕುಮಾರ್ ಸೇರಿದಂತೆ ಹಲವು ನಟರೊಂದಿಗೂ ಬೆಳ್ಳಿತೆರೆಯಲ್ಲಿ ಮಿಂಚಿದರು. ಇವರ ನಟನೆಯ ಕೊನೆಯ ಚಿತ್ರ ‘ಗ್ರೇ ಗೇಮ್ಸ್’ ಆಗಿತ್ತು.

1993ರಿಂದ 2010ರವರೆಗೆ ರೇಡಿಯೋ ಆರ್‍ಜೆ ಆಗಿಯೂ ಕಾರ್ಯ ನಿರ್ವಹಿಸಿದರು. 90ರ ದಶಕದಲ್ಲಿ ದೂರದರ್ಶನ, ಆಕಾಶವಾಣಿ ಕಾರ್ಯಕ್ರಮಗಳ ನಿರೂಪಣಾ ಶೈಲಿ ಅಪರ್ಣಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟವು. ಸರ್ಕಾರದ ಕಾರ್ಯಕ್ರಮಗಳು, ವಿವಿಧ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಅಪರ್ಣಾ ನಿರೂಪಣೆಯೇ ಇರುತ್ತಿತ್ತು.

ಸತತ 8 ಗಂಟೆ ಕಾರ್ಯಕ್ರಮ ನಿರೂಪಣೆ : ನಿರೂಪಣೆ ಎಂದರೆ ಕೇವಲ ಮಾತಲ್ಲ; ಕನ್ನಡದ ಕಂಪು, ಸಾಹಿತ್ಯ ಧಾರೆ ಎಂದು ಭಾμÁ ಶ್ರೀಮಂತಿಕೆಯನ್ನು ತೋರಿಸಿಕೊಟ್ಟವರು ಅಪರ್ಣಾ. ಇದೇ ಕಾರಣಕ್ಕೆ ನಿರೂಪಣಾ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೀರ್ತಿ ಅವರದಾಯಿತು. 1988ರಲ್ಲಿ ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆ ಕಾಲ ನಿರೂಪಣೆ ನಿರ್ವಹಿಸಿದ ದಾಖಲೆಯೂ ಅಪರ್ಣಾ ಹೆಸರಿನಲ್ಲಿದೆ.ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ: ಇನ್ನು, ಕಿರುತೆರೆಯ ‘ಮೂಡಲಮನೆ’, ‘ಮುಕ್ತ’ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಜನರಿಗೆ ಮತ್ತಷ್ಟು ಹತ್ತಿರವಾದರು. ಶುದ್ಧ ಕನ್ನಡ ಸಾಹಿತ್ಯದ ಗಾಂಭೀರ್ಯದೊಂದಿಗೆ ಹಾಸ್ಯವೂ ನಟಿಯಲ್ಲಿದೆ ಎಂಬುದು ಪರಿಚಯವಾಗಿದ್ದು, ಕಿರುತೆರೆಯ ‘ಮಜಾ ಟಾಕೀಸ್’ನಲ್ಲಿ. ಮೊದಲ ಬಾರಿಗೆ ಕಾಮಿಡಿ ಶೋನಲ್ಲಿ ಅಪರ್ಣಾರನ್ನು ಕಂಡ ಜನರು ಹುಬ್ಬೇರಿಸಿದ್ದುಂಟು. ಈ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಜನರ ಮನಸ್ಸು ಗೆದ್ದರು. ಈ ನಡುವೆ ಕನ್ನಡದ ರಿಯಾಲಿಟಿ ಶೋ ‘ಬಿಗ್‍ಬಾಸ್’ ಮೊದಲ ಸೀಸನ್‍ನಲ್ಲೂ ಅಪರ್ಣಾ ಸ್ಪರ್ಧಿಯಾಗಿ ರಾಜ್ಯದ ಜನರ ಗಮನ ಸೆಳೆದಿದ್ದರು. ಬೆಂಗಳೂರಿನ ‘ನಮ್ಮ ಮೆಟ್ರೋ’ಗೂ ಧ್ವನಿಯಾದರು.ಆದರೆ, ಕಳೆದೆರಡು ವರ್ಷಗಳಿಂದ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್‍ಗೆ ತುತ್ತಾದರು. ಛಲಬಿಡದೆ ಹೋರಾಡುತ್ತಲೇ ಇಹಲೋಕ ತ್ಯಜಿಸಿದರು. ಅಪರ್ಣಾ ನಟಿ, ನಿರೂಪಕಿ ಮಾತ್ರವೇ ಅಲ್ಲ, ಸೃಜನಶೀಲ ಮನಸ್ಸಿನ ಕನ್ನಡದ ಸಿರಿಕಂಠದ ದ್ವನಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಬೆಂಗಳೂರು ಮೆಟ್ರೋದಲ್ಲಿ ನಮ್ಮ ಮೆಟ್ರೋಗೆ ರೈಲು ಹತ್ತುವಾಗ-ಇಳಿಯುವಾಗ ಎಚ್ಚರವಿರಲಿ, ಬಾಗಿಲುಗಳು ಬಲಕ್ಕೆ-ಎಡಕ್ಕೆ ತೆರೆಯಲಿದೆ ಎಂಬ ಧ್ವನಿ ನೀಡಿ ಇಹಲೋಕದ ಪಯಣ ಮುಗಿಸಿದ ಧ್ವನಿಯ ಅಪರ್ಣಾ ಅವರು ಇಳಿದು ಮುಂದಿನ ನಿಲ್ದಾಣಕ್ಕೆ ಹೋರಟು ಹೋಗಿದ್ದಾರೆ.

ಕನ್ನಡ ಭಾμÉಗೆ ಸ್ವರವಾಗಿದ್ದಂತ ಅಪರ್ಣಾ ಅವರು ನಿನ್ನೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.

ಪತಿಯ ಮಾತು : ಅಪರ್ಣಾ ನೆನೆದು ಪತಿ ನಾಗರಾಜ್ ವಸ್ತಾರೆ ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಪತ್ನಿಯ ಮನದಾಳ ಮಾತು ಹೇಳಿಕೊಂಡಿದ್ದಾರೆ. ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅμÉ್ಟೀ ಖಾಸಗಿಯಾಗಿ ನಾನು ಅವಳನ್ನ ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. ಆಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾ ಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳುವಂತೆ ತಿಳಿಸಿದ್ದರು.

ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ದರು. ಅವಳು ಛಲಗಾತಿ ನಾನು ಬದುಕ್ತೀನಿ ಅಂತಾ ಇದ್ಲು, ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ದಳು. ಫೆಬ್ರವರಿಯಿಂದ ಸೋತಿದ್ದಳು, ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು. ಅವಳು ದೀರೆ, ಇಷ್ಟು ದಿನ ಬದುಕಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರು ಜಂಟಿಯಾಗಿ ಸೋತಿದೀವಿ ಎಂದು ಭಾವುಕರಾದರು.

ನಾಗತಿಹಳ್ಳಿ, ಚಂದ್ರಶೇಖರ್ ಪ್ರತಿಕ್ರಿಯೆ : ಇನ್ನೇನು ಕಾರ್ಯಕ್ರಮಕ್ಕೆ ಹೊರಡಬೇಕೆಂಬಂತೆ ಹಸನ್ಮುಖಿಯಾಗಿ ಮಲ್ಲಿಗೆ ಮುಡಿದು ಶವಪೆಟ್ಟಿಗೆ ಯೊಳಗೆ ಮಲಗಿದ್ದ ಅಪರ್ಣಾಳನ್ನು ಕಂಡಾಗ ಅಸಂಖ್ಯ ನೆನಪುಗಳು ಅಶ್ರು ರೂಪದಲ್ಲಿ ಹೊರಬರುತ್ತಿವೆ. ನನ್ನ ಬರವಣಿಗೆ ಎಂದರೆ ಆಕೆಗೆ ಅಚ್ಚುಮೆಚ್ಚು. ನನ್ನ ಕಥೆ-ಕಾದಂಬರಿಗಳ ಕೆಲ ಸಾಲುಗಳನ್ನು ಕಂಠಪಾಠ ಮಾಡಿದಂತೆ ಒಪ್ಪಿಸುತ್ತಿದ್ದಳು.’ಚುಕ್ಕಿ ಚಂದ್ರಮರ ನಾಡಿನಲ್ಲಿ’ ಆಕೆಯ ಮೆಚ್ಚಿನ ಕಾದಂಬರಿ.ಅದನ್ನು ಯಾವುದೋ ಹುಡುಗಿ ಬರೆದು ಅದು ನನ್ನ ಹೆಸರಲ್ಲಿ ಅಚ್ಚಾಗಿದೆ ಎಂದು ಛೇಡಿಸುತ್ತಿದ್ದಳು.ಆಗ ನಾನು ಬರೆದ ಕಾಗದಗಳನ್ನು ಬಹಳ ಕಾಲ ಕಾದಿರಿಸಿದ್ದಳೆಂದು ವಸ್ತಾರೆ ಹೇಳುತ್ತಿದ್ದರು.ಅಲ್ಪಕಾಲೀನ ಅಮೆರಿಕಾ ಬದುಕು ಅವಳಿಗೆ ಕಹಿ ಉಣಿಸಿತ್ತು. ಸಾಹಿತ್ಯ, ಸಂಗೀತ, ರಂಗಭೂಮಿ, ಕಿರುತೆರೆ, ಸಿನಿಮಾ ಹೀಗೆ ಬಹುವಿಧ ಆಸಕ್ತಿಗಳಿಂದ ಅಲಂಕೃತಳಾಗಿದ್ದ ಅಪರ್ಣಾ, ಕನ್ನಡ ಮತ್ತು ಇಂಗ್ಲಿμï ಭಾμÉಗಳ ಅಸ್ಖಲಿತ, ಪ್ರೌಢ ಮತ್ತು ಭಾವಪೂರ್ಣನಿರೂಪಣೆಗೆ ಮಾದರಿಯಾಗಿದ್ಜಳು. ಆಕೆಯ ಅನಾರೋಗ್ಯದ ಸಂಗತಿಯನ್ನು ನೆರೆಮನೆಯಲ್ಲಿರುವ ನನಗೂ ತಿಳಿಸದ ಸ್ವಾಭಿಮಾನಿ. ಮುಂಜಾನೆಯ ನನ್ನ ಕೆಲವು ವಾಕಿಂಗ್ ನಲ್ಲಿ ಮಹಡಿಯಿಂದ ಮುಗುಳ್ನಗೆಯೊಡನೆ ಕೈ ಬೀಸುತ್ತಿದ್ದ ಈ ಸಾಹಿತ್ಯಾಭಿಮಾನಿ ಇನ್ನಿಲ್ಲ. ತನ್ನ ಬದುಕೆಂಬ ಸಮಾರಂಭದ ಕೊನೆಯ ವಂದನಾರ್ಪಣೆ ಹೇಳಿ ಹೋದ ಅಪರ್ಣಾಗೆ ನನ್ನ ಅಶ್ರುತರ್ಪಣ.

Leave a Reply

Your email address will not be published. Required fields are marked *