ನವದೆಹಲಿ : ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಕುಟುಂಬ ರಾಜಕರಣಕ್ಕೆ ತಡೆಯಂತೆ ಕರ್ನಾಟಕದಲ್ಲೂ ಅನುಸರಿಸಲು ಹೊರಟಿರುವುದನ್ನು ವಿರೋಧಿಸಿ ಬೇಸರಗೊಂಡು ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನತ್ತ ಪ್ರಯಾಣ ಬೆಳಸಿದರು ಎನ್ನಲಾಗುತ್ತಿದೆ.
ಕೆಲ ಶಾಸಕರು, ಮಂತ್ರಗಳು ಬಿ.ಎಸ್.ಯಡಿಯೂರಪ್ಪನ ಮಗನಿಗೆ ಟಿಕೆಟ್ ಕೊಟ್ಟರೆ ನಮ್ಮ ಮಕ್ಕಳಿಗೂ ಟಿಕೆಟ್ ಕೊಡುವಂತೆ ಒತ್ತಡ ಮತ್ತು ಪಕ್ಷಾಂತರ, ಬಂಡಾಯದ ಮುನ್ಸೂಚನೆ ನೀಡಿದ ಹಿನ್ನಲೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.
ಟಿಕೆಟ್ ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ವರಿಷ್ಟರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಬೇಸರಗೊಂಡಿದ್ದಾರೆ. ಹೀಗಾಗಿ ಪಟ್ಟಿ ಪ್ರಕಟಕ್ಕೂ ಮುನ್ನವೇ ದೆಹಲಿಯಿಂದ ಬಿಎಸ್‍ವೈ ಬೆಂಗಳೂರಿಗೆ ಹೊರಟಿದ್ದಾರೆ.
ಹೈಕಮಾಂಡ್‍ಗೆ ನಾನು ಹೇಳುವುದೆಲ್ಲಾ ಮುಗಿದಿದೆ ಹಾಗಾಗಿ ಹೊರಡುವೆ ಎಂದು ಆಪ್ತರ ಬಳಿ ಬಿಎಸ್ ವೈ ಹೇಳಿಕೊಂಡಿದ್ದಾರೆ. ತಮ್ಮ ಮನೆಯಿಂದ ಹೊರಡುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಾರಿನ ತನಕ ಬಂದು ಬಿಟ್ಟು ಹೋಗಿದ್ದಾರೆ. ನಡ್ಡಾ ಮನೆಗೆ ಬಂದು ಕೇವಲ 10 ನಿಮಿಷದಲ್ಲೇ ಯಡಿಯೂರಪ್ಪ ತೆರಳಿದ್ದಾರೆ.
ಸಿಎಂ ಹೋದ ಬಳಿಕ ನಡ್ಡಾ ಮನೆಗೆ ಬಂದ ಬಿಎಸ್‍ವೈ
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಕರ್ನಾಟಕ ನಾಯಕರ ಪ್ರತ್ಯೇಕ ಸಭೆಗಳಲ್ಲಿ ಬಿಎಸ್ ಯಡಿಯೂರಪ್ಪ ಭಾಗಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಪ್ರತ್ಯೇಕ ಸಭೆಯೇ ಈ ಬೇಸರಕ್ಕೆ ಕಾರಣ ಎನ್ನಲಾಗಿದೆ. ನಿನ್ನೆ ಸಭೆಯ ಬಳಿಕ ಬಿಎಸ್ ವೈ ಬೇಸರದಿಂದ ಹೊರ ಹೋಗಿದ್ದರು. ಹೀಗಾಗಿ ಇಂದಿನ ಸಭೆಗೆ ಸಿಎಂ ಬೊಮ್ಮಾಯಿ ಹೋದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸಕ್ಕೆ ಬಿಎಸ್‍ವೈ ಬಂದಿದ್ದರು.
ಯಡಿಯೂರಪ್ಪ ಬೇಸರಗೊಂಡಿದ್ದರು ಎಂಬ ಚರ್ಚೆಯ ನಡುವೆಯೇ ಜೆಪಿ ನಡ್ಡಾ ಮನೆಯಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತೆರಳುವಾಗ ಗೇಟಿನವರೆಗೂ ಬಂದು ಜೆಪಿ ನಡ್ಡಾ ಬಿಟ್ಟು ಹೋದರು. ನಡ್ಡಾ ಮನೆಗೆ ಬಂದು ಕೇವಲ 10 ನಿಮೀಷದಲ್ಲೇ ಯಡಿಯೂರಪ್ಪ ತೆರಳಿದರು.
ಇನ್ನು ಬಿಜೆಪಿ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ, ನಿನ್ನೆ ಎಲ್ಲಾ ಕ್ಷೇತ್ರದ ಬಗ್ಗೆ ಚರ್ಚೆ ಆಗಿತ್ತು. ಆದರೆ ಕೆಲವೊಂದು ಕ್ಷೇತ್ರದ ಬಗ್ಗೆ ಗೊಂದಲವಾಗಿತ್ತು. ಅದರ ಬಗ್ಗೆ ಅಧ್ಯಕ್ಷರು ವಿವರ ಕೇಳಿದ್ರು ಹಾಗಾಗಿ ವಿವರ ನೀಡಿ ಬಂದಿದ್ದೇನೆ. ಇಂದು ರಾತ್ರಿ ಅಥವಾ ನಾಳೆ ಟಿಕೆಟ್ ಹಂಚಿಕೆ ಲಿಸ್ಟ್ ಬಿಡುಗಡೆಯಾಗಲಿದೆ. ನಾನು ಕೊಟ್ಟಿರೋ ಎಲ್ಲಾ ಅಭಿಪ್ರಾಯಗಳನ್ನು ನಾಯಕರು ಕೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.