ತುಮಕೂರು: ಚಿಂತಕ ಕೆ.ದೊರೂರಾಜ್‍ರವರ ಬಗ್ಗೆ ಶಿಂಷಾ ಲಿಟರರಿ ಅಕಾಡೆಮಿ ಪ್ರಕಟಿಸಿರುವ ಏಕತೆಯ ಹೋರಾಟಗಾರ ಕೃತಿಯ ಲೋಕಾರ್ಪಣೆಯನ್ನು ಸೆಪ್ಟಂಬರ್ 2ರ ಶನಿವಾರ 10.30ಕ್ಕೆ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಮಾಡಲಿದ್ದಾರೆ.
ಕೃತಿ ಕುರಿತು ಕವಿಗಳು ಹಾಗೂ ವಿಮರ್ಶಕರಾದ ಡಾ.ಕೆ.ಪಿ.ನಟರಾಜ್ ಮಾತನಾಡಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ವಹಿಸಲಿದ್ದು, ಶ್ರೀಮತಿ ಅನುರಾಧ ಮತ್ತು ಕೆ.ದೊರೈರಾಜ್ ಅವರು ಉಪಸ್ಥಿತಿ ಇರಲಿದ್ದು, ಮುಖ್ಯ ಅತಿಥಿಗಳಾಗಿ ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಡಾ.ವೈ.ಕೆ.ಬಾಲಕೃಷ್ಣಪ್ಪ, ವಿಶ್ರಾಂತ ಪ್ರಾಂಶುಪಾಲರಾದ ಸಿ.ಚೌಡಪ್ಪ, ಲೇಖಕಿ ಬಾ.ಹ.ರಮಾಕುಮಾರಿ, ಗಾಂಧಿ ವಿಚಾರವಾದಿ ಎಂ.ಬಸವಯ್ಯ, ಭಾಗವಹಿಸಲಿದ್ದು, ಕೃತಿಯ ಸಂಪಾದಕರಾದ ಎಂ.ಎಚ್.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.