ತುಮಕೂರು: ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು,ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಜಿ.ಹೆಚ್.ಷಣ್ಮುಗಪ್ಪ ಯಾದವ್ ಅವರಿಗೆ ಟಿಕೆಟ್ ನೀಡಲಾಗಿದೆ.
ತುಮಕೂರು ಗ್ರಾಮಾಂತರಕ್ಕೆ ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದೆ. ಕಾಂಗ್ರೆಸ್ ಅಭ್ಯರ್ಥಿ ಷಣ್ಮುಗಪ್ಪ ಅವರು ನಿವೃತ್ತ ಇಂಜಿನಿರ್ ಆಗಿದ್ದು, ಕಾಡುಗೊಲ್ಲ ಸಮುದಯಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಯಾವುದೇ ರಾಜಕೀಯ ಹಿನ್ನಲೆ ಅಷ್ಟಾಗಿ ಇರದಿದ್ದರೂ ಕಾಂಗ್ರೆಸ್ ಪಕ್ಷವು ಇವರಿಗೆ ಟಿಕೆಟ್ ನೀಡಿರುವುದು ಆಶ್ಚರ್ಯ ಸಂಗತಿಯಾಗಿದೆ.
ಈಗ ಎರಡು ಪಟ್ಟಿಗಳಲ್ಲಿ ಬಾಕಿಯಾಗಿದ್ದ 43 ಕ್ಷೇತ್ರಗಳನ್ನು ಮೂರನೇ ಪಟ್ಟಿಯಲ್ಲಿ ಘೋಷಿಸಲಾಗಿದ್ದು 15 ಕ್ಷೇತ್ರಗಳು ಬಾಕಿ ಉಳಿದಿವೆ.
ಈ ಬಾರಿ ಐದು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಕಥೆ ಏನು ಎನ್ನುವುದು ತಿಳಿದುಬಂದಿದೆ. ಈ ಹಿಂದೆ ಕುಂದಗೋಳ, ಹರಿಹರ, ಪುಲಕೇಶಿ ನಗರ,ಶಿಡ್ಲಘಟ್ಟ, ಲಿಂಗಸೂಗುರು ಟಿಕೆಟ್ ಬಾಕಿ ಇಡಲಾಗಿತ್ತು. ಈ ಸಂಬಂಧಿತ ಕಾಂಗ್ರೆಸ್ ನಿರ್ಧಾರ ಈಗ ಹೊರಬಿದ್ದಿದೆ.
ಕುಂದಗೋಳದಲ್ಲಿ ಇದೀಗ ಹಾಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಲಾಗಿದೆ. ಅದಲ್ಲದೇ ಅಥಣಿ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ. ಕೋಲಾರಕ್ಕೆ ಕೊತ್ತನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದ್ದು ಮತ್ತೆ ನಾಲ್ಕು ಶಾಸಕರ ಹಾಲಿ ಕ್ಷೇತ್ರಗಳು ಖಾಲಿ ಉಳಿದಿವೆ.
ಅದಲ್ಲದೇ ಸಿದ್ದರಾಮಯ್ಯಗೆ ಕೋಲಾರದಿಂದ ಟಿಕೆಟ್ ನೀಡಲಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಟಿಕೆಟ್ ಬಯಸಿದ್ದರು. ಆದರೆ ಈಗ ಒಂದೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಫರ್ಧೆ ಮಾಡುವುದಕ್ಕೆ ಅವಕಾಶ ಲಭಿಸಿದೆ.