ಎಸ್‍ಯುಸಿಐ ಅಭ್ಯರ್ಥಿಯಾಗಿ ಎಂ.ವಿ.ಕಲ್ಯಾಣಿ ನಾಂಪತ್ರ ಸಲ್ಲಿಕೆ

ತುಮಕೂರು : ಎಸ್‍ಯುಸಿಐ(ಸಿ) ಪಕ್ಷದ ಅಭ್ಯರ್ಥಿಯಾಗಿ ಎಂ.ವಿ ಕಲ್ಯಾಣಿ ಅವರು ನಾಮಪತ್ರ ಸಲ್ಲಿಸಿದರು.

ನಗರದ ಸ್ವಾತಂತ್ರ್ಯ ಚೌಕದ ಹುತಾತ್ಮ ಸ್ತಂಭಕ್ಕೆ ಮಾಲಾರ್ಪಣೆ ಮಾಡಿ ಹುತಾತ್ಮರಿಗೆ ಗೌರವ ಸಲ್ಲಿಸಿಸುವ ನಾಮ ಪತ್ರ ಸಲ್ಲಿಸಲು ಮೆರವಣಿಗೆಯ ಮೂಲಕ ಮಹಾನಗರ ಪಾಲಿಕೆ ಆಗಮಿಸಿ ನಾಮಪತ್ರ ಸಲ್ಲಿಸಲಾಯಿತು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ನಾಯಕರಾದ ಎಂ. ಶಶಿಧರ್ ಮಾತನಾಡಿ ದೇಶದ ಜನರು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸ್ವಾತಂತ್ರ್ಯ ನಂತರದ ಈ 75 ವರ್ಷಗಳಲ್ಲಿ ಬ್ರೀಟಿಷರನ್ನು ಹೊರಗಟ್ಟಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಬಂಡವಾಳಶಾಹಿವರ್ಗವು ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾ ಇಡೀ ಜನಸ್ತೋಮವನ್ನು ಶೋಷಿಸುತ್ತಿದೆ. ಪರಿಣಾವಾಗಿ ಇಂದು ನಾವು ಬಡತನ ನಿರುದ್ಯೋಗ, ಹಣದುಬ್ಬರ, ನಿರ್ಗತಿಕತೆ, ಹಸಿವುಗಳಿಂದ ಕೊಟ್ಯಾಂತರ ಜನ ಬಳಲುತ್ತಿರುವುದನ್ನು ಕಾಣುತ್ತೇವೆ. ಬಂಡವಾಳ ವರ್ಗವು ಪ್ರಜಾತಂತ್ರದ ಅಂಗಗಳಾದ ಸಂಸತ್ ಹಾಗು ವಿಧಾನಸಭೆಗಳಲ್ಲಿ ಬಂಡವಾಳಶಾಹಿಪರ ನೀತಿಗಳನ್ನು ರೂಪಿಸಲು ತಮ್ಮದೇ ಆದ ಪಕ್ಷಗಳನ್ನು ಪೋಷಿಸುತ್ತವೆ. ಇದನ್ನು ವಿರೋಧಿಸಿ ಜನಪರ, ಕಾರ್ಮಿಕ ಪರ ರೈತಪರ ನೀತಿಗಳನ್ನು ರೂಪಿಸಲು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಿ ಎಂದು ಮನವಿ ಮಾಡಿದರು.

ಪ್ರಗತಿಪರ ಬರಹಗಾರ್ತಿ ಹಾಗೂ ಕಸಾಪ ಮಾಜಿ ಅಧ್ಯಕ್ಷೆ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಮಾತನಾಡಿ ತುಮಕೂರಿನಲ್ಲಿ ಸ್ವಾತಂತ್ರ್ಯನಂತರ ಚುನಾವಣೆಗಳಲ್ಲಿ ಇದುವರಗೂ ಕೇವಲ ಇಬ್ಬರು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಹಲವು ದಶಕಗಳ ನಂತರ ಈಗ ಮಹಿಳಾ ಪ್ರಾತಿನಿಧ್ಯವಹಿಸಿರುವ ಎಂ.ವಿ ಕಲ್ಯಾಣಿಯವರು ಮಹಿಳ ಹೋರಾಟದ ಮೂಲಕ ಮೂಡಿಬಂದಿರುವ ಅಭ್ಯರ್ಥಿಯೆಂಬುದು ಬಹಳ ಸಂತೋಷವನ್ನುಂಟು ಮಾಡಿದೆ. ನಿರಂತರವಾಗಿ ಬಡಜನರ, ಕೂಲಿಕಾರ್ಮಿಕರ, ರೈತರ ಮತ್ತು ಮಹಿಳೆಯರ ಜ್ವಲಂತ ಸಮಸ್ಯೆಗಳ ವಿರುದ್ಧ ಸದನದಲ್ಲಿ ಧ್ವನಿ ಎತ್ತಲು ತುಮಕೂರಿನ ಜನತೆ ಮತ ನೀಡಿ ಬೆಂಬಲಿಸಬೇಕೆಂದು ಮನವಿಮಾಡಿದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿಯಾದ ಎಂ.ವಿ ಕಲ್ಯಾಣಿ ಮಾತನಾಡಿ, ಈ ದೇಶದ ವಿಮುಕ್ತಿಗೊಸ್ಕರ ಪ್ರಾಣ ಕೊಟ್ಟ ಹುತಾತ್ಮರ ಕನಸು ನನಸಾಗಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್‍ನಂತಹ ಹಲವಾರು ಕ್ರಾಂತಿಕಾರಿ ಹುತಾತ್ಮರ ಕನಸು ಎಲ್ಲಾರೀತಿಯ ಶೋಷಣೆಯನ್ನು ವಿಮುಕ್ತಿಗೊಳಿಸುವುದೇ ಆಗಿತ್ತು. ಅವರ ಸಮಾನತೆಯ ಸಮಾಜವನ್ನು ನಿರ್ಮಿಸಲು ಹೋರಾಟವೊಂದೇ ನಮಗಿರುವ ದಾರಿ, ಹಾಗಾಗಿ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಲು ಹೋರಾಟ ನಿರತ ಅಭ್ಯರ್ಥಿಗೆ ಅವಕಾಶ ಕೊಡಬೇಕೆಂದು ಮನವಿಮಾಡಿದರು.

ಎಸ್‍ಯುಸಿಐ (ಸಿ) ನ ಜಿಲ್ಲಾ ಕಾರ್ಯದರ್ಶಿ ಎಸ್. ಎನ್ ಸ್ವಾಮಿ ಮಾತನಾಡಿದರು,

Leave a Reply

Your email address will not be published. Required fields are marked *