ತುಮಕೂರು: ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ ಸಮಸ್ಯೆ (TAPVC) ಹಾಗೂ ಟ್ರಂಕಸ್ (Truncus) ರೋಗಕ್ಕೆ ತುತ್ತಾಗಿದ್ದ ಇಬ್ಬರು ಮಕ್ಕಳಿಗೆ ಹೃದಯ ಶಸ್ತçಚಿಕಿತ್ಸೆಯನ್ನು ಯಶಸ್ವಿಗೊಳಿಸಿ, ಆ ಮಕ್ಕಳಿಗೆ ಮರುಹುಟ್ಟು ನೀಡಿರುವ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರಾದ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರಿಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ
TAPVC ಸಮಸ್ಯೆಯಿಂದ ಬಳಲುತ್ತಿದ್ದ 20 ದಿನಗಳ ಹಸುಗೂಸು ಹೈದರಾಬಾದ್ ನಗರದ ನಿವಾಸಿ. ಟ್ರಂಕಸ್ (Truncus) ರೋಗಕ್ಕೆ ತುತ್ತಾಗಿರುವ 3 ತಿಂಗಳಿನ ಮಗು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶದ ನಿವಾಸಿ. ಈ ಇಬ್ಬರು ಮಕ್ಕಳಿಗೆ ಆಗಿರುವ ಹೃದಯ ಶಸ್ತçಚಿಕಿತ್ಸೆ ಅತಿಸೂಕ್ಷ್ಮವಾಗಿದ್ದು, ಯಶಸ್ವಿಯಾಗಿದೆ. ಮುಂದೆ ಆ ಮಕ್ಕಳ ಭವಿಷ್ಯದಲ್ಲಿ ಬದುಕಿನ ಬೆಳಕು ಮೂಡಲಿದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ, ತಜ್ಞ ವೈದ್ಯರ ತಂಡ ತುಮಕೂರಿನಂತಹ ಪ್ರದೇಶದಲ್ಲಿಯೂ, ಅತಿಸೂಕ್ಷ್ಮ ರೀತಿಯ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂಬುದನ್ನು ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ ಸಾಬೀತು ಪಡಿಸಿದೆ. ಇದು ಭವಿಷ್ಯದ ಪಥಕ್ಕೆ ಮುನ್ನುಡಿಯಾಗಲಿದೆ. ಸಂಕೀರ್ಣವಾದ ಮತ್ತು ಮಾರಣಾಂತಿಕವಾದ ಸಮಸ್ಯೆಯನ್ನು ಕಂಡುಹಿಡಿದು ಅದನ್ನು ಗುಣಪಡಿಸಬಹುದೆಂಬ ಇಲ್ಲಿನ ವೈದ್ಯರ ಸಾಹಸ ಮತ್ತು ಕರ್ತವ್ಯ ಪ್ರಜ್ಞೆಯನ್ನು ‘ಕಾರ್ಡಿಯಾಕ್ ಫ್ರಾಂಟಿಡಾ’ ಹಾಗೂ ‘ಸಿದ್ಧಾರ್ಥ ಹಾರ್ಟ್ ಸೆಂಟರ್’ನ ಮುಖ್ಯಸ್ಥರಾದ ಡಾ. ತಮೀಮ್ ಅಹಮ್ಮದ್ ನೇತೃತ್ವದ ವೈದ್ಯ ಸಮೂಹಕ್ಕೆ ಮತ್ತು ತಾಂತ್ರಿಕ ತಜ್ಞರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿರುವ ಡಾ.ಜಿ.ಪರಮೇಶ್ವರ ಅವರು, ಗ್ರಾಮಾಂತರ ಪ್ರದೇಶಕ್ಕೆ ಈ ವೈದ್ಯ ತಂಡದ ಸೇವೆ ಇನ್ನುಷ್ಟು ದೊರೆಯಲಿ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ “ಕಾರ್ಡಿಯಾಕ್ ಫ್ರಾಂಟಿಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮ್ಮದ್ ಮಾತನಾಡಿ, ಎರಡನೇ ಶ್ರೇಣಿ ನಗರದಂತಹ ತುಮಕೂರಿನಲ್ಲಿ ಹಸುಗೂಸಿನ ಅತ್ಯಂತ ಸಂಕೀರ್ಣ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ಇದೇ ಮೊದಲು. ಶಸ್ತç ಚಿಕಿತ್ಸೆ ಮಾಡಿಸಿಕೊಂಡ ರೋಗಿಗಳೂ ಸಹ ಬಹು ಬೇಗ ಗುಣಮುಖರಾಗಿ ಸಹಜ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ವಿದೇಶದ ರೋಗಿಗಳು ತುಮಕೂರಿನಂತ ಪ್ರದೇಶದಲ್ಲಿ ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದು ಎಂಬುದನ್ನು ಕಳೆದ ಅಕ್ಟೋಬರ್‌ನಲ್ಲಿ ಆಸ್ಪತ್ರೆಯ ವೈದ್ಯರ ತಂಡ ಸಾಬೀತು ಪಡಿಸಿತ್ತು.
ಈಗ ಎರಡು ಮಕ್ಕಳಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮಾಡಲಾಗಿದೆ. ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸಹ ಅಂತಾ ರಾಷ್ಟ್ರೀಯ ಗುಣಮಟ್ಟದ “ಹೃದಯ ತಜ್ಞರ ತಂಡ” ಮಾಡಿಕೊಂಡು, ವಿಶೇಷ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಂಕೀರ್ಣ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುತ್ತಾರೆಂಬದನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ ಎಂದರು.
ಹೈದರಾಬಾದ್‌ನ ಮಗು:
ಅದೇ ರೀತಿ 20 ದಿನಗಳ ಮತ್ತೊಂದು ಪುಟ್ಟ ಹಸುಳೆ ಹೈದರಾಬಾದ್ ಪ್ರಸಿದ್ಧ ಆಸ್ಪತ್ರೆಯಲ್ಲಿ ದಾಖಲಾಗಿ, ಅಲ್ಲಿ ಚಿಕಿತ್ಸೆ ಸಾಧ್ಯವಾಗದೆ ತುಮಕೂರಿನ ನಮ್ಮ ಆಸ್ಪತ್ರೆಗೆ ಬಂದಾಗ ಖಿಂPಗಿಅ ಸಮಸ್ಯೆಯಿಂದ ಬಳಲುತ್ತಿರುವುದನ್ನು ಪತ್ತೆ ಹಚ್ಚಲಾಯಿತು. ನಂತರ ಈ ಮಗುವಿನ ಶಸ್ತçಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ಮತ್ತು ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತçಚಿಕಿತ್ಸೆ ಇದಾಗಿದೆ. ಮಗು ಗುಣಮುಖ ಹೊಂದಿದ್ದು, ಎಲ್ಲರಂತೆ ಜೀವನ ನಡೆಸಬಹುದು ಎಂದು ಡಾ.ತಮೀಮ್‌ಅಹಮ್ಮದ್ ಅವರು ಹೇಳಿದರು.
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ಸೆಂಟರ್’ನ ಮೇಲ್ವಿಚಾರಕರಾದ ಹಾಗೂ “ಕಾರ್ಡಿಯಾಕ್ ಫ್ರಾಂಟಿಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮ್ಮದ್ ನೇತೃತ್ವದಲ್ಲಿ ಡಾ.ಶ್ರೀನಿವಾಸ್, ಡಾ.ವಿಕಾಸ್, ಡಾ.ಸುರೇಶ್, ಡಾ.ತಹೂರ್, ಡಾ.ವಾಂಗ್ಚುಕ್, ಡಾ.ಮಸ್ತಾನ್, ವಿವೇಕ್, ಜಾನ್ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ ಬಾಲಕೃಷ್ಣ ಶೆಟ್ಟಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಸುಶೀಲ್‌ಚಂದ್ರ ಮಹಾಪಾತ್ರ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ, ಎನ್, ವೈದ್ಯಕ್ಷೀಯ ಅಧೀಕ್ಷಕರು ಡಾ.ವೇಂಕಟೇಶ್, ಕಾಡ್ರೀಯಾಕ್ ವಿಭಾಗದ ಡಾ. ಶ್ರೀನಿವಾಸ ಭಾಗಿಯಾಗಿದ್ದರು.