ಸುರೇಶಗೌಡ ಜನತೆಯ ಕ್ಷಮೆಯಾಚಿಸಬೇಕು-ಸಹಕಾರಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು : ಸುರೇಶಗೌಡ ಅವರು ಮೂರು ಬಾರಿ ಶಾಸಕರಾಗಿದ್ದಾರೆ ಸಂಭಾವಿತ ರಾಜಕಾರಣಿಗಳಲೊಬ್ಬರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಬಗ್ಗೆ ತೇಜೋವಧೆ ಮಾಡಿರುವ ಅವರು ಜನತೆಯ ಕ್ಷಮೆಯಾಚಿಸಬೇಕೆಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಆಗ್ರಹಿಸಿದರು.

ಅವರಿಂದು ಅವರ ಗೃಹಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತುಮಕುರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕರಾದ ಸುರೇಶಗೌಡರು ಹಾಗೂ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ವೈಯಕ್ತಿಕ ಆರೋಪಗಳಿಗಿಳಿರುವುದು ಶೋಭೆ ತರುವುದಿಲ್ಲ, ಸೇಡಿನ ರಾಜಕಾರಣ ಸಲ್ಲದು ಎಂದರು.

ಶಾಸಕ ಬಿ.ಸುರೇಶಗಾಡರು ಸಂಭಾವಿತ ಮನುಷ್ಯರಾಗಿರುವ ಪರಮೇಶ್ವರ್ ಅವರನ್ನು ತೇಜೋವಧೆ ಮಾಡುವುದು ಅವರ ಘನತೆಗೆ ತಕ್ಕದ್ದಲ್ಲ, ಪದಬಳಕೆ ಹದ್ದು ಬಸ್ತಿನಲ್ಲಿರಬೇಕು, ಪರಮೇಶ್ವರ್ ಅವರಿಗೆ ಕುಂದು ಬರುವ ರೀತಿ ಪದಬಳಕೆ ಸರಿಯಲ್ಲ, ಜನರ ಕ್ಷಮೆ ಕೇಳಬೇಕು ಎಂದ ರಾಜಣ್ಣನವರು, ಗ್ರಾಮಾಂತರ ಕ್ಷೇತ್ರ ವೈ.ಕೆ.ರಾಮಯ್ಯ, ಎಸ್.ಪಿ.ಮುದ್ದಹನುಮೇಗೌಡ, ಹೆಚ್.ನಿಂಗಪ್ಪ ಅಂತಹ ಸಜ್ಜನ ರಾಜಕಾರಣಿಗಳನ್ನು ಹೊಂದಿದ್ದಂತಹ ಸುಸಂಸ್ಕøತ ಕ್ಷೇತ್ರ, ಸುರೇಶಗೌಡರ ಅಸಂಸ್ಕøತ ಪದ ಬಳಸಬಾರದು ಅವರ ಪದಬಳಕೆಯಿಂದ ಜನತೆಗೆ ಅವಮಾನವಾಗಿದ್ದು, ಜನರ ಕ್ಷಮೆಯಾಚಿಸಬೇಕೆಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಇದೂವರೆವಿಗೂ ಒಂದೇ ಒಂದು ಗಲಭೆಯಾಗಿಲ್ಲ ಅಂತಹ ಕ್ಷೇತ್ರದ ಶಾಸಕರು ಪದ ಬಳಕೆ ಮಾಡುವಾಗ ಹದ್ದುಬಸ್ತಿನಲ್ಲಿರಬೇಕು, ಯಾರಿಗೂ ನೊವಾಗದ ರೀತಿ ಮಾತನಾಡಬೇಕು ಎಂದ ಅವರು, ರಾಜಕಾರಣವೇ ಹೊಂದಾಣಿಕೆ ರಾಜಕೀಯವಾಗಿದ್ದು ಯಾರಿಗೆ ಬೇಕಾದರೂ ಸಹಾಯ ಮಾಡುತ್ತೇನೆ, ನಾನು ಸುರೇಶಗೌಡ ಗೆಲುವಿಗೂ ಸಹಾಯ ಮಾಡಿದ್ದೇನೆ ಮತ್ತು ಗೌರಿಶಂಕರ ಗೆಲುವಿಗೂ ಸಹಾಯ ಮಾಡಿದ್ದೇನೆ ಎಂದರು.

ಲಿಂಕ್ ಕೆನಾಲ್ ಬಗ್ಗೆ ಸಚಿವ ಸಂಪುಟದಲ್ಲಿ ಮೊದಲಿಗೆ ವಿರೋಧಿಸಿದ್ದೇ ಡಾ.ಜಿ.ಪರಮೇಶ್ವರ್, ಲಿಂಕ್ ಕೆನಾಲ್‍ಗೆ ನಮ್ಮ ವಿರೋಧವಿದೆ. ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ ಇಲ್ಲ, ಭಿನ್ನಾಭಿಪ್ರಾಯಗಳಿರಬಹುದು, ಆದರೆ ಬಿಜೆಪಿಯಲ್ಲಿ ಯತ್ನಾಳ್‍ಗೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ನೋಟೀಸ್ ಕೊಡದಷ್ಟು ಅಸಮರ್ಥರಾಗಿದ್ದಾರೆ ಎಂದರು.

ಶೋಷಿತ ಸಮಾಜದವರ ಸಮಾವೇಶವನ್ನು ಖಂಡಿತ ಮಾಡುವುದಾಗಿ ತಿಳಿಸಿದ ರಾಜಣ್ಣನವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ವಿಧಾನ ಪರಿಷತ್‍ಗೆ ಅವಕಾಶವಂಚಿತರಿಗೆ ಅವಕಾಶ ನೀಡುವಂತೆ ಹೈಕಮಾಂಡ್ ಬಳಿ ಮಾತನಾಡಿದ್ದು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ, ನನ್ನ ಅಭಿಪ್ರಾಯದ ಪ್ರಕಾರ ಎರಡು ಹುದ್ದೆಯನ್ನು ಒಬ್ಬರೇ ನಿಭಾಯಿಸಬಾರದು, ಲೋಕಸಭಾ ಚುನಾವಣೆಯ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎನ್ನಲಾಗಿತ್ತು, ಯಾವ ಲೋಕಸಭಾ ಚುನಾವಣೆ ಅಂತ ಹೈಕಮಾಂಡ್ ಹೇಳಿಲ್ಲ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *