ತುಮಕೂರು : ಮೂರು ಬಾರಿ ಶಾಸಕರಾಗಿರುವ ಸುರೇಶಗೌಡ ಅವರು ಅನುಭವಸ್ಥರಂತೆ ಮಾತನಾಡಬೇಕು, ಸುಮ್ಮನೇ ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಮರಳೀಧರ ಹಾಲಪ್ಪ ಮಾರ್ಮಿಕವಾಗಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸುಶಕ್ಷಿತ, ಪ್ರಾಮಾಣಿಕ ಕುಟುಂಬ ಹಿನ್ನೆಲೆಯಿರುವ ಕುಟುಂಬದಿಂದ ಬಂದಿರುವವನು ನಾನು, ನಿಮ್ಮ ಮಟ್ಟಕ್ಕೆ ಇಳಿಯುವಂತಹ ಶಿಕ್ಷಣವನ್ನು ನಮ್ಮ ತಂದೆ-ತಾಯಿ ಕೊಡಿಸಿಲ್ಲ, ಸಮಾಜದಲ್ಲಿ ಗೌರವಯುತವಾಗಿ ನಡೆಯಬೇಕು, ಪಾರದರ್ಶಕ ಜೀವನ ಮಾಡಬೇಕು ಎಂದು ಹಿರಿಯುರು, ಗುರುಗಳು ಕಲಿಸಿದ್ದಾರೆ, ಅದೇ ಪ್ರಕಾರ ಬದುಕುತ್ತಿದ್ದೇವೆ, ಸಾರ್ವಜನಿಕ ಬದುಕಿನಲ್ಲಿರುವವರು ವೈಯಕ್ತಿಕ ವಿಷಯಗಳನ್ನು ಮಾತನಾಡಬಾರದು. ಅಂತಹವುಗಳನ್ನು ಮಾತನಾಡಿದರೆ ನಾಲಾಯಕ್ಕು ಎನ್ನುತ್ತಾರೆ, ರಾಜಕೀಯವಾಗಿ ಏನು ಬೇಕಾದರೂ ಮಾತನಾಡಿ, ಹೋರಾಟ ಮಾಡಿ, ತಂದೆ-ತಾಯಿಗಳ ಬಗ್ಗೆ, ದೇಹದ ಬಗ್ಗೆ, ಕುಟುಂಬದ ಬಗ್ಗೆ ಮಾತನಾಡುವವರನ್ನು ಉತ್ತರಕುಮಾರರು ಎಂದು ಕರೆಯುತ್ತಾರೆ, ಹೆಸರು ಮಾಡಲು ಗಿಮಿಕ್-ನಾಟಕಗಳನ್ನು ಮಾಡುವುದನ್ನು ಬಿಟ್ಟು ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿÉಂದು ಮುರಳೀಧರ ಹಾಲಪ್ಪನವರು ಸುರೇಶಗೌಡರಿಗೆ ಬುದ್ದಿ ಎಂದರು,
ಗ್ರಾಮಾಂತರ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಿ, ಆಸ್ಪತ್ರೆ, ಕಾಲೇಜು ಅಭಿವೃದ್ಧಿ ಮಾಡಿ, ಹೆಬ್ಬೂರು ಮತ್ತು ಬೆಳ್ಳಾವಿಯಲ್ಲಿರುವ ಪದವಿ ಕಾಲೇಜುಗಳನ್ನು ಮೊದಲು ಅಭಿವೃದ್ಧಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಎಂದು ಕಿವಿ ಮಾತೇಳಿದ ಮುರಳೀಧರ ಹಾಲಪ್ಪನವರು, ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ವಿಧಾನಸಭೆ ಗ್ರಂಥಾಲಯದ ಹಾಜರಿ ಬಗ್ಗೆ ಮಾತನಾಡುತ್ತೀರ, ನಾನೇಷ್ಟು ಬಾರಿ ಭೇಟಿ ನೀಡಿದ್ದೇನೆ, ನೀವೆಷ್ಟು ಬಾರಿ ಭೇಟಿ ನೀಡಿದ್ದೀರ ಹಾಜರಾತಿ ನೋಡಿ, ಮೂರು ಬಾರಿ ಶಾಸಕರಾಗುವುದು ಮುಖ್ಯವಲ್ಲ, ವಿಧಾನಸಭೆಯಲ್ಲಿ ಮಾತನಾಡಿದರೆ ಸಾಲದು, ಮಾತನಾಡಿದ್ದನ್ನು ಜಾರಿಗೆ ತರುವ ಇಚ್ಛಾಶಕ್ತಿ ಇರಬೇಕು, ಗ್ರಾಮಂತರ ಕ್ಷೇತ್ರಕ್ಕೆ ಒಂದೇ ಒಂದು ಯೋಜನೆ ತಂದಿಲ್ಲ ಎಂದು ಹೇಳಿದರು.