ವಿಶ್ವವು ಹಿಂಸೆಯ ದಾರಿಯಲ್ಲಿ ಸಾಗುತ್ತಿದೆ “ಅಟ್ರಾಸಿಟಿ” ಬಿಡುಗಡೆ ಸಮಾರಂಭದಲ್ಲಿ ಎಸ್.ಜಿ.ಸಿದ್ದರಾಮಯ್ಯ ಅಭಿಮತ

ತುಮಕೂರು : ದೇಶದ ಮಣಿಪುರದ ಘಟನೆ ಮತ್ತು ಪಾಲಿಸ್ತೇನ್ ಮತ್ತು ಉಕ್ರೇನ್ ಗಳಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ನೋಡಿದಾಗ ವಿಶ್ವವು ಹಿಂಸೆಯ ದಾರಿಯಲ್ಲಿ ಸಾಗುತ್ತಿದೆ ಎಂದು ಮನವರಿಕೆಯಾಗುತ್ತಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅವರು ನಗರದಲ್ಲಿ ಜೂನ್ 29ರ ಶನಿವಾರ ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಆದಿಜಂಬೂ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಗುರುಪ್ರಸಾದ್ ಕಂಟಲ ಗೆರೆಯವರ ‘ಅಟ್ರಾಸಿಟಿ’ ಕಾದಂಬರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಬದಲಾವಣೆಯ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ ಧ್ವನಿ ಎತ್ತುವ ಅಗತ್ಯವಿದೆ. ಅಂತಹ ಅಗತ್ಯದ ಕಡೆಗೆ, ನಮ್ಮೆಲ್ಲರನ್ನು ಅತ್ಮಾವಲೋಕನಕ್ಕೆ ಹಚ್ಚುವ ಕೃತಿ ‘ಅಟ್ರಾಸಿಟಿ’ ನಮ್ಮ ರಾಜ್ಯದಲ್ಲಿ ಜಮೀನ್ದಾರಿ ಧೋರಣೆ ಹೊಂದಿರುವ ಮನಸ್ಸುಗಳಿಂದ ಆಕ್ರಮಣಕಾರಿ ಘಟನೆಗಳು ನಡೆಯುತ್ತಿದ್ದು ಈ ಹೊತ್ತಿನಲ್ಲಿ ಸಾಹಿತಿಗಳು, ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕೃತಿ ಬಿಡುಗಡೆಯಾಗುತ್ತಿದ್ದು, ಇದರ ಮಹತ್ವ ಬಹಳ ಮುಖ್ಯವಾದದ್ದು’ ಎಂದರು.

‘ಅಟ್ರಾಸಿಟಿ’ ಕಾದಂಬರಿಯಲ್ಲಿ ಆದ ದಶಕಗಳ ಡಿಎಸ್ಎಸ್ ಸಂಘಟನೆಯ ತುಂಬಾ ಸೂಕ್ಷ್ಮವಾಗಿ ಚಿತ್ರಿಸಲಾಗಿದ ಅದರ ಗುಣಾತ್ಮಕ ಅಂಶಗಳನ್ನೂ ಪ್ರಸ್ತಾ ಪಿಸುತ್ತಾ, ಸಂಘಟನೆ ಮುನ್ನಡೆಸಬೇಕಮ ದವರ ದೌರ್ಬಲ್ಯಗಳನ್ನು ಹೇಳಿದ್ದಾರೆ ಸಂಘಟನೆಯನ್ನು ಮತ್ತೆ ಮರು ಚಿಂತನೆಗ ಒಡ್ಡಿದ್ದಾರೆ ಎಂದು ವಿಶ್ಲೇಷಿಸಿದರು.

ಸಾಂಸ್ಕøತಿಕ ಸ್ವಾತಂತ್ರ್ಯ ಪಡೆಯದ ಮನಸುಗಳು ಬೇರೆಯವರಿಗೆ ದಾಳವಾಗಿ ಬಳಕೆಯಾಗುತ್ತಿವೆ. ಸಾಂಸ್ಕೃತಿಕ ಜೀತದ ಮನಸ್ಥಿತಿ ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟದ ವೈಫಲ್ಯಕ್ಕೆ ಕಾರಣವಾಗಿದೆ. ಶಿಕ್ಷಣದಿಂದ ಮಾತ್ರ ಈ ಮನಸ್ಥಿತಿ ತೊಡೆದುಹಾಕಬೇಖು, ಸಂಘಟನೆಗಳಿಗೆ ಇದರ ಅರಿವು ಆಗದಿದ್ದರೆ ಅವು ಗಟ್ಟಿಗೊಳ್ಳುವುದಿಲ್ಲ. ಸಂಘಟನೆಗಳು ಬಲವಾಗದ ಹೊರತು ಹೋರಾಟದ ಗುರಿ ಮುಟ್ಟಲು ಸಾಧ್ಯವಿಲ್ಲ ಎಂಬುದನ್ನು ಕೃತಿಯಲ್ಲಿ ಗುರುಪ್ರಸಾದ್ ಹೇಳಿದ್ದಾರೆ ಎಂದರು.

‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ, ತದ ‘ಗುರುಪ್ರಸಾದ್ ಅವರ ಕಥೆಗಳು ಇಡೀ ಕ್ಷಣ, ಕನ್ನಡ ಕಥನ ಪರಂಪರೆಗೆ ಹೊಸ ಹೊಳಪನ್ನು ನೀಡಿದ್ದು, ಹೊಸ ತಲೆಮಾರಿನ ಲೇಖಕರು ಸಾಹಿತ್ಯವನ್ನು ಕಲಾತ್ಮಕ ನೆಲೆಗಟ್ಟಿನಲ್ಲಿ ಕಾಣಿಸುತ್ತಿದ್ದಾರೆ. ಐದಾರು ವರ್ಷದಲ್ಲಿ ಅನೇಕ ಕಾದಂಬರಿಗಳು ಬಂದಿವೆ, ಆದರೆ ಅವುಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ ಎಂದು ಹೇಳಿದರು.

ದುನ್ನು ಈ ಮನಸ್ಥಿತಿ ಹೊಡೆಯಬೇಕು. ಕಲಾತ್ಮಕ ನೆಲೆಗಟ್ಟಿನಲ್ಲಿ ಕಾಣಿಸುತ್ತಿದೆ. ಸಂಘಟನೆಗಳಿಗೆ ಇದರ ಅರಿವು ಪ್ರಸ್ತಾ- ಆಗದಿದ್ದರೆ ಅವು ಗಟ್ಟಿಗೊಳ್ಳುವು- ದೇಕಾ- ದಿಲ್ಲ. ಸಂಘಟನೆಗಳು ಬಲವಾಗದ ದ್ದಾರೆ. ಹೊರತು ಹೋರಾಟದ ಗುರಿ ಮುಟ್ಟಲು -ತನೆಗೆ ಸಾಧ್ಯವಿಲ್ಲ ಎಂಬುವುದನ್ನು ಕೃತಿಯಲ್ಲಿ ಕಾಣಬಹುದು ಎಂದು ಹೇಳಿದರು.
ಚಿಂತಕ ಸಿ.ಜಿ. ಲಕ್ಷ್ಮಿಪತಿ ಮಾತನಾಡಿ ದೇವನೂರು ರವರ ಕಾದಂವರಿಯಲ್ಲಿ ಅನೇಕ ಕುಸೂರಿಗಳಿವೆ, ನೇರವಾದ ವಾಸ್ತವವಾದ ನಿರೂಪಣೆ ಈ ಅಟ್ರಾಸಿಟಿಯಲ್ಲಿದೆ. ನಾನು ಇದನ್ನು ಓದುವಾಗ ಬಹಳ ಕಷ್ಟವಾಯ್ತು ಎಂದು ಹೇಳಿದರು.

ಒಂದು ವಾರಗಳ ಕಾಲ ಡೀಪಾಗಿ ಓದಬೇಕಾಯ್ತು, ಅದರಲ್ಲಿ ಅಷ್ಟೊಂದು ಲೇಯರ್ಸ್ಗಳಿವೆ. ಪ್ರತಿ ಪಾತ್ರಕ್ಕೂ ಒಂದೊಂದು ಫ್ಲಾಶ್ ಬ್ಯಾಕ್ ಇದ್ದು ಉಪಕಥೆಗಳಿವೆ. ಭಾರತೀಯ ಗ್ರಾಮಗಳ ಕ್ರೌರ್ಯ, ಭಾರತೀಯ ಗ್ರಾಮಗಳ ಕ್ರೌರ್ಯದ ಪರಮಾವಧಿ ಈ ಕಾದಂಬರಿಯಲ್ಲಿ ಕಾಣಬಹುದು. ಮೇಲ್ಜಾತಿಗಳ ಕಾದಂಬರಿ ಆತ್ಮಕಥಾನಕವಾಗಿರುತ್ತದೆ. ಅವರ ಆತ್ಮಕಥೆ ಮತ್ತು ಸಮಾಜವೂ ಒಳಗೊಂಡೊರಿತ್ತದೆ. ಆದರೆ ದಲಿತರ ಕಾದಂಬರಿಗಳಲ್ಲಿ ಸಮುದಾಯದ ಕಾಣುತ್ತದೆ ಎಂದರು.

ಯಾರಾದ್ರೂ ತುಂಬಾ ಜನ ಮಾತಾಡ್ತಾರೆ, ಈಗ ಸಂಘ ಪರಿವಾರ ಬಂದಿದೆ. ಅದು ಬಂದಿದೆ ಎಂದು ಬುದ್ಧಿಜೀವಿಗಳು ಮಾತಾಡ್ತಾರೆ. ನಮ್ಮ ಜಾತಿಯೇ ಹಿಟ್ಲರ್ ಆಗಿವೆ. ಎಲ್ಲವೂ ಜಾತಿ ಪದ್ದತೊಯ ಪ್ರತಿಫಲವೆ. ಒಂದು ಗ್ರಾಮವನ್ನು ವ್ಯಾಖ್ಯಾನಿಸುವುದೇ ಈ ಅಟ್ರಾಸಿಟಿ. ಡಿಎಸ್ಎಸ್ ನಾಯಕರುಗಳು ಸ್ಥಳೀಯವಾಗಿ ಎದುರಿಸುವ ಸಮಸ್ಯೆಗಳು ಬೇರೆ ಬೇರೆಯಾಗಿರುತ್ತವೆ ಎಂದು ತಿಳಿಸಿದರು.

ಅತಿಯಾದ ನೈತಿಕತೆಯನ್ನು ಬಡವರಿಂದ ಮಾತ್ರ ನೀರಿಕ್ಷಿಸಲಾಗುತ್ತದೆ ಈ ದೇಶದಲ್ಲಿ. ನೈತಿಕ ಪ್ರಶ್ನೆ ಎನ್ನುವುದು ಬಹಳ ತಾತ್ವಿಕವಾದದ್ದು. ಕಾದಂಬರಿಗಳನ್ನು ನಾವು ಓದುವುದಲ್ಲ. ಅದನ್ನು ಉತ್ಖನನ ಮಾಡಬೇಕು. ನಾವು ಸಾಮಾಜಿಕ ಬಂಡವಾಳವಾಗಿ ಅಂಬೇಡ್ಕರ್ ಅನ್ನು ಬಳಸುತ್ತೇವೆ, ಮುಂದೆಯೂ ಬಳಸಿಕೊಳ್ತೇವೆ, ದೇವರಾಜು ತಹಶೀಲ್ದಾರ್ ಬಳಿ ಹತ್ತು ಸಾವಿರ ಕೇಳಿದ ತಕ್ಷಣ ಅದು ಭ್ರಷ್ಟಾಚಾರ ಎಂದು ಡಿಎಸ್ಎಸ್ ಅವನತಿ ಎನ್ನುತ್ತಾರೆ. ಹಾಗಾದ್ರೆ ಈ ಭ್ರಷ್ಟಾಚಾರದ ವ್ಯಾಖ್ಯಾನವನ್ನು ನಾವು ಮರು ವ್ಯಾಖ್ಯಾನ ಮಾಡಬೇಕಿದೆ ಎಂದರು.

ಸಾಮಾನ್ಯವಾಗಿ ಪ್ರತಿ ಪೇಜಲ್ಲೂ ಅಟ್ರಾಸಿಟಿ ಮರುಕಳಿಸುತ್ತ ಹೋಗುತ್ತದೆ. ಸೂಕ್ಷ್ಮವಾದ ವ್ಯಕ್ತಿಗಳ ಮೇಲೆ ಮನಸ್ಸುಗಳ ಮೇಲೆ ಹೇಗೆ ಸಿಂಬಾಲಿಕ್ ವೈಲೆನ್ಸ್ ಅಂದರೆ ಸಾಂಕೇತಿಕ ಹಿಂಸೆಗಳನ್ನು ಸಮಾಜ ಶಾಸ್ತ್ರೀಯ ದಾಖಲೆಯಂತೆ ಈ ಅಟ್ರಾಸಿಟಿ ಯಲ್ಲಿ ದಾಖಲಾಗಿದೆ ಎಂದು ವಿವರಿಸಿದರು.

ಅಟ್ರಾಸಿಟಿ ಕಾದಂಬರಿ ಸಾಂಸ್ಕೃತಿಕ ಗಣಿಯಾಗಿ ಕಂಡಿದೆ ನನಗೆ. ಹಾಗಾಗಿಯೇ ಇದನ್ನು ಉತ್ಖನನ ಮಾಡಬೇಕಿದೆ. ಬಹುಜನರ ಆಶಯವು ಬಿಕೆಯವರ ಪ್ರಭಾವ ನವೀನನಲ್ಲಿ ಇಲ್ಲಿ ಕಾಣಬಹುದು. ಈ ಕಾಲಕ್ಕೆ ಬಂದಿರುವ ಒಂದು ಒಳ್ಳೆಯ ಸಾಂಸ್ಕೃತಿಕ ದಾಖಲೆಯಾಗಿ ಅಟ್ರಾಸಿಟಿ ಕಾದಂಬರಿ ಬಂದಿದೆ ಎಂದರು.

ದಲಿತ ಸಂಘಟನೆಯ ಮುಖಂಡ ಕುಂದೂರು ತಿಮ್ಮಯ್ಯ, ಸಾಹಿತಿ ತುಂಬಾಡಿ ರಾಮಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕೃತಿಕಾರ ಗುರುಪ್ರಸಾದ್ ಕಂಟಲಗೆರೆ ಮುಂತಾದವರಿದ್ದರು.

Leave a Reply

Your email address will not be published. Required fields are marked *